ಇರಾನ್‌ – ಅಮೆರಿಕ ಪ್ರಕ್ಷುಬ್ಧ ; ಯುದ್ಧೋನ್ಮಾದ ಗುಂಗಲ್ಲೇ ಜಗತ್ತು

ಉಭಯ ದೇಶಗಳ ಬಿಕ್ಕಟ್ಟು - ತಂದೊಡ್ಡಲಿದೆ ಆರ್ಥಿಕ ಸಂಕಷ್ಟ

Team Udayavani, Jan 6, 2020, 1:35 AM IST

Iran—No-War-01-730

ಇರಾನ್‌ ರೆವಲ್ಯೂಷನ್‌ ಗಾರ್ಡ್‌ ಪಡೆಯ ಮುಖ್ಯಸ್ಥ ಮೇಜರ್ ಜನರಲ್‌ ಖಾಸಿಂ ಸುಲೇಮಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ಇರಾನ್‌ ಹೇಳಿದೆ. ಇರಾರ್‌ನ ಮಿತ್ರ ರಾಷ್ಟ್ರಗಳೂ ಇದಕ್ಕೆ ಧ್ವನಿಗೂಡಿಸಿದ್ದು, ಪ್ರತೀಕಾರದ ಬೆದರಿಕೆಯೊಡ್ಡಿದೆ. ಇದರಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಭೀತಿ ಆವರಿಸಿದೆ. ನಮ್ಮ ಜನರಲ್‌ ಅವರ ರಕ್ತದ ಕಲೆ ಹತ್ತಿರುವ ಶತ್ರುಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಇರಾನ್‌ ಸರ್ವೋಚ್ಚ ನಾಯಕ ಅಯಾತ್‌ ಉಲ್ಲಾ ಅಲಿ ಖೊಮೇನಿ ಹೇಳಿಕೆ ನೀಡಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ವಿಕೋಪಕ್ಕೆ ತಂದೊಡ್ಡಿದೆ.

ಸುಮ್ಮನಿರಲ್ಲ ಎಂದ ಉಗ್ರರು
ಕೊಲೆಗಡುಕರಿಗೆ ತಕ್ಕ ಶಿಕ್ಷೆ ನೀಡುವುದು ಎಲ್ಲಾ ಬಂಡುಕೋರರ ಜವಾಬ್ದಾರಿಯಾಗಿದೆ. ಯುದ್ಧದಲ್ಲಿ ನಾವು ಪತಾಕೆಗಳನ್ನು ಹಾರಿಸುತ್ತೇವೆ. ಸುಲೇಮಾನಿಯ ರಕ್ತತರ್ಪಣದಿಂದ ನಮ್ಮ ಗೆಲುವಿಗೆ ಶಕ್ತಿದೊರೆತಿದೆ ಎಂದು ಹಿಜ್ಬುಲ್‌ ಉಗ್ರರ ಸಂಘಟನೆ ಮುಖ್ಯಸ್ಥ ಹಸನ್‌ ನಸ್ರುಲ್ಲಾ ಘೋಷಿಸಿಕೊಂಡಿದ್ದಾನೆ. ಇಸ್ರೇಲ್‌ ವಿರುದ್ಧ ಹೋರಾಟ ನಡೆಸುತ್ತಿರುವ ಹಿಜ್ಬುಲ್‌ ಉಗ್ರ ಸಂಘಟನೆಗೆ ಇರಾನ್‌ ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿದೆ. ಸುಲೇಮಾನಿ ಅವರು ಈ ಉಗ್ರರಿಗೆ ನೆರವು ನೀಡುತ್ತಾ ಬಂದಿದ್ದರು. ಹೀಗಾಗಿ ನಾಯಕನನ್ನು ಕಳೆದುಕೊಂಡ ಈ ಉಗ್ರರು ಪ್ರತೀಕಾರದ ಬೆದರಿಕೆಯೊಡ್ಡಿದೆ.

ಚುರುಕಾದ ಇಸ್ರೇಲ್‌
ಉಗ್ರರ ಬೆದರಿಕೆ ಕಕೇಳಿಬಂದ ಬಳಿಕ ಲೆಬನಾನ್‌ ಗಡಿಯಲ್ಲಿ ಇಸ್ರೇಲ್‌ ತನ್ನ ಸೇನೆಯನ್ನು ನಿಯೋಜಿಸಿದೆ. ನೂರಾರು ಯುದ್ಧ ಟ್ಯಾಂಕರ್‌ಗಳನ್ನು ಸಜ್ಜುಗೊಳಿಸಲಾಗಿದೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ತಮ್ಮ ಗ್ರೀಸ್‌ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ.

ಇರಾಕ್‌ಗೂ ತಟ್ಟಿದ ಬಿಸಿ
ಅಮೆರಿಕದ ದಾಳಿಯಲ್ಲಿ ಇರಾಕ್‌ ಸೇನೆಯ ಕಮಾಂಡರ್‌ ಸಹ ಹತ್ಯೆಯಾಗಿದ್ದಾರೆ. ಅಧಿಕೃತ ಹುದ್ದೆಯಲ್ಲಿದ್ದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಇರಾಕ್‌ ಈ ಸನ್ನಿವೇಶ ಯುದ್ಧಕ್ಕೆ ನಾಂದಿಯಾಗಲಿದೆ ಎಂದಿದೆ. ಇರಾಕ್‌ನಲ್ಲಿ ನೆಲೆಸಿರುವ ಅಮೆರಿಕನ್ನರು ಈ ಕೂಡಲೆ ಹಿಂತಿರುಗಬೇಕು ಎಂದು ಸರಕಾರ ಸೂಚಿಸಿದೆ.
ಇರಾಕ್‌ ಪ್ರತಿಕಾರ ತೀರಿಸುವ ಭಯದಿಂದ ಅಮೆರಿಕವು ಈ ಆದೇಶ ಹೊರಡಿಸಿದೆ. ಅವರಿಗಾಗಿ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಎಂದರೆ ಉಗ್ರರ ಧಮನಕ್ಕೆ ಅಮೆರಿಕ ಇರಾಕ್‌ನ ಸಹಾಯ ಪಡೆದುಕೊಂಡಿತ್ತು. ಆದರೆ ಈಗ ಅವರೇ ಶತ್ರುವಾಗಿದ್ದಾರೆ.

ಭಾರತಕ್ಕೆ ಭಾರೀ ಹೊಡೆತ
ಅಮೆರಿಕ ಮತ್ತು ಇರಾನ್‌ ಸಂಘರ್ಷದಿಂದಾಗಿ ಭಾರತ ಭಾರೀ ಸಮಸ್ಯೆಯನ್ನು ಎದುರಿಸಲಿದೆ. ಈಗಾಗಲೇ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಡಾಲರ್‌ಗೆ ಶೇ 4.5ರಷ್ಟು ಏರಿಕೆಯಾಗಿ, 68.23 ಡಾಲರ್‌ಗೆ (4,895 ರೂ.) ತಲುಪಿದೆ. ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಳವಾಗಿ, ಅವುಗಳ ಬೆಲೆಯೂ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದು ಸಂಚಾರ ವೆಚ್ಚದ ಮೇಲೆ ಪರಿಣಾಮ ಬೀರಲಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆಯಾಗಲಿದೆ.

ಕೊಲ್ಲಿಯಲ್ಲಿ ಸಂಘರ್ಷ ಶಮನವಾಗದೇ ಇದ್ದರೆ ಎರಡನೇ ಹಂತದ ಪರಿಣಾಮಗಳನ್ನು ಎದುರಿಸಲು ಭಾರತ ಸಜ್ಜಾಗಬೇಕಾಗುತ್ತದೆ. ತೈಲ ಆಮದಿನ ಮೇಲೆ ದೇಶವು ಮಾಡಬೇಕಾದ ವೆಚ್ಚ ದುಪ್ಪಟ್ಟಾಗಲಿದೆ. ಅಗತ್ಯ ಇರುವ ತೈಲದ ಶೇ. 80ಕ್ಕಿಂತ ಹೆಚ್ಚು ಭಾಗವನ್ನು ಭಾರತವು ಆಮದು ಮಾಡಿಕೊಳ್ಳುತ್ತಿರುವುದರಿಂದ ಭಾರತ ಸಮಸ್ಯೆಯನ್ನು ಎದುರಿಸಲಿದೆ.

ಮುಂಗಡ ಪತ್ರಕ್ಕೆ ಹಿನ್ನಡೆ
ಕೇಂದ್ರ ಸರಕಾರ ತನ್ನ ವಾರ್ಷಿಕ ಮುಂಗಡ ಪತ್ರವನ್ನು ತಯಾರಿಸುವ ಸಂದರ್ಭದಲ್ಲಿಯೇ ಈ ಬಿಕ್ಕಟ್ಟು ಸೃಷ್ಠಿಯಾಗಿದೆ. ಹಾಗಾಗಿ, ದೊಡ್ಡ ಮಟ್ಟದ ತೆರಿಗೆ ವಿನಾಯಿತಿ, ಅರ್ಥ ವ್ಯವಸ್ಥೆಯ ಚೇತರಿಕೆಗೆ ಕೈಗೊಳ್ಳಬಹುದಾದ ಕ್ರಮಗಳನ್ನು ನಾವು ನಿರೀಕ್ಷೆ ಮಾಡುವಂತಿಲ್ಲ ಎಂದು ಹೇಳಲಾಗುತ್ತಿದೆ. ಆಕರ್ಷಕ ವಿನಾಯಿತಿಗಳು ಈ ಬಜೆಟ್‌ನಲ್ಲಿ ಕಂಡುಬರುವುದು ಕಷ್ಟ ಎಂದು ಹೇಳಲಾಗುತ್ತಿದೆ. ಇನ್ನು ಈಗಾಗಲೇ ಹೇಳಲಾಗುತ್ತಿರುವ ಆದಾಯ ತೆರಿಗೆಯಲ್ಲಿ ಕಡಿತ ಈ ವರ್ಷ ಬಜೆಟ್‌ನಲ್ಲೂ ಮಂಡನೆಯಾಗುವುದು ಕಷ್ಟ ಎನ್ನಲಾಗುತ್ತಿದೆ. ತೈಲದ ಮೇಲೆ ಮಾಡುತ್ತಿರುವ ವೆಚ್ಚ ಹೆಚ್ಚುತ್ತಿರುವುದರ ಬಗ್ಗೆ ಆರ್‌ಬಿಐ ಈಗಾಗಲೇ ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತದ ಶಾಂತಿ ಜಪ
ಮಧ್ಯಪ್ರಾಚ್ಯದಲ್ಲಿ ರಾಷ್ಟ್ರದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳುವಂತೆ ಭಾರತ ಕರೆ ಕೊಟ್ಟಿದೆ. ಸಂಘರ್ಷ ಮುಂದುವರಿದರೆ ಇರಾನ್‌ನಿಂದ ತೈಲ ಪೂರೈಕೆಗೆ ತೊಡಕಾಗಬಹುದು. ಅಮೆರಿಕದಿಂದ ಭಾರತಕ್ಕೆ ಜಲ ಮಾರ್ಗದ ಮೂಲಕ ಆಗುವ ತೈಲ ಪೊರೈಕೆಯನ್ನು ಇರಾನ್‌ ಗುರಿ ಮಾಡಿಕೊಳ್ಳುವ ಅಪಾಯವೂ ಇದೆ. ಈಗಾಗಲೇ ಅಮೆರಿಕ ಇರಾನ್‌ನಿಂದ ತೈಲ ಖರೀದಿ ಮಾಡಬಾರದು ಎಂದು ಭಾರತದ ಮೇಲೆ ಒತ್ತಡ ಹೇರುತ್ತಲೇ ಬಂದಿದೆ.

ಇರಾನ್‌ ನಡೆ ಕುತೂಹಲ
ಈ ಹತ್ಯೆ ನಡೆದ ಬಳಿಕ ಬ್ಯಾರೆಲ್‌ ಕಚ್ಚಾ ತೈಲದ ಬೆಲೆ ಶೇ. 4ರಷ್ಟು ಏರಿಕೆ ಆಗಿದೆ. ಅಮೆರಿಕಕ್ಕೆ ಪ್ರತೀಕಾರ ತೀರಿಸಬೇಕು ಎನ್ನುತ್ತಿರುವ ಇರಾನ್‌ ಮೇಲೆ ಕೆಲವು ಆಯ್ಕೆಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಹರ್ಮಜ್‌ ಜಲಸಂಧಿಯನ್ನು ಮುಚ್ಚುವುದು. ಪರ್ಷಿಯನ್‌ ರಾಷ್ಟ್ರಗಳಿಂದ ತೈಲ ಬರುವುದಕ್ಕೆ ಇರುವ ಏಕೈಕ ಸಮುದ್ರ ಮಾರ್ಗ ಇದು. ಎರಡು ವರ್ಷಗಳ ಹಿಂದೆ ಅಮೆರಿಕವು ಇರಾನ್‌ ಮೇಲೆ ಆರ್ಥಿಕ ದಿಗ್ಬಂಧನ ಹಾಕಿದಾಗ ಹೀಗೇ ಮಾಡಲಾಗಿತ್ತು.

ಟ್ರಂಪ್‌ಗೆ ಪ್ಲಸ್‌!
ಈಗಾಗಲೇ ಇಂಪೀಚ್‌ಮೆಂಟ್‌ ಅನ್ನು ಎದುರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಇದು ಪ್ಲಸ್‌ ಆಗಲಿದೆ ಎನ್ನಲಾಗುತ್ತಿದೆ. ಇದೇ ವರ್ಷಾಂತ್ಯದಲ್ಲಿ ಅಮೆರಿಕ ಚುನಾವಣೆ ನಡೆಯಲಿದ್ದು, ಅಂತಾರಾಷ್ಟ್ರೀಯವಾಗಿ ಮತ್ತೂಮ್ಮೆ ಅಮೆರಿಕದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ನಿರ್ಮಿಸಲಾಗುತ್ತಿದೆ ಎಂಬ ಮಾತುಗಳೂ ಅಂತಾರಾಷ್ಟ್ರೀಯ ವಲಯದಲ್ಲಿ ಕೇಳಿಬಂದಿದೆ.

ನೆರೆಯ ರಾಷ್ಟ್ರದ ಮೇಲೆ ದಾಳಿ ಸಾಧ್ಯತೆ
ಪರ್ಷಿಯನ್‌ ಗಲ್ಫ್ ಮತ್ತು ಮಧ್ಯಪ್ರಾಚ್ಯದ ಮೇಲೆ ಇರಾನ್‌ ದಾಳಿ ನಡೆಸಬಹುದು ಎಂಬ ಮಾತು ಕೇಳಿಬರುತ್ತಿದೆ. ಕಳೆದ ವರ್ಷ ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ದಾಳಿ ಆಗಿ, ಉತ್ಪಾದನೆ ಮೇಲೆ ಪರಿಣಾಮ ಆಗಿತ್ತು.

ಅದೇ ರೀತಿಯದು ಅಥವಾ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ದಾಳಿ ನಡೆದರೆ ತೈಲ ಸರಬರಾಜಿನಲ್ಲಿ ಕೊರತೆಯಾಗಲಿದೆ. ಇದರಿಂದ ಪರೋಕ್ಷವಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆಯಾಗಲಿದೆ. ಸದ್ಯಕ್ಕೆ ಇಂಧನ ಬೆಲೆ ಪ್ರತಿದಿನವೂ ಪರಿಷ್ಕರಣೆಯಾಗುತ್ತಿದ್ದು, ಅಂತಾರಾಷ್ಟ್ರೀಯ ದರ ಮತ್ತು ವಿದೇಶಿ ವಿನಿಮಯ ದರದ ಆಧಾರದಲ್ಲಿ ಬೆಲೆ ನಿರ್ಧರಿಸಲಾಗುತ್ತದೆ.

ದರ ಏರಿಕೆಯ ಬಿಸಿ
ಭಾರತಕ್ಕೆ ತೈಲ ಪೂರೈಸುವ ಪ್ರಮುಖ ದೇಶಗಳಲ್ಲಿ ಇರಾನ್‌ ಕೂಡ ಒಂದು. 2018-19ರಲ್ಲಿ ಇರಾನ್‌ನಿಂದ 2.3 ಕೋಟಿ ಟನ್‌ ತೈಲ ಆಮದಾಗಿದೆ. ಇದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 5ರಷ್ಟು ಹೆಚ್ಚು ಎಂಬುದು ಗಮನಾರ್ಹ. ಭಾರತಕ್ಕೆ ಇರಾಕ್‌ ಮತ್ತು ಸೌದಿ ಅರೇಬಿಯಾದ ಅತಿ ಹೆಚ್ಚು ತೈಲ ಪೂರೈಸುವ ದೇಶವಾಗಿದ್ದು, ಬಳಿಕದ ಸ್ಥಾನದಲ್ಲಿ ಇರಾನ್‌ ಇದೆ.

ಡಿಸೆಂಬರ್‌ 2ರ ಬಳಿಕ ಕಚ್ಚಾ ತೈಲದ ಬೆಲೆ ಶೇ. 14ರಷ್ಟು ಏರಿಕೆಯಾಗಿದೆ. ಹಾಗಾಗಿ, ಈಗಿನ ಪರಿಸ್ಥಿತಿಯೇ ಭಾರತದ ಬಜೆಟ್‌ ಲೆಕ್ಕಾಚಾರವನ್ನು ಏರುಪೇರಾಗಿಸಬಹುದು. ಸೌದಿಯ ಅರಾಮ್ಕೊ ಕಂಪೆನಿಯ ಮೇಲೆ ಕಳೆದ ಸೆಪ್ಟೆಂಬರ್‌ನಲ್ಲಿ ಡ್ರೋನ್‌ ದಾಳಿಯಾದಾಗ ಕಚ್ಚಾ ತೈಲ ಬೆಲೆ ಬ್ಯಾರಲ್‌ ಒಂದಕ್ಕೆ 71.95 ಡಾಲರ್‌ ಏರಿಕೆಯಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.