ಹಿಜಾಬ್ ವಿರೋಧಿ ಪ್ರತಿಭಟನಾಕಾರರಿಗೆ ಬೆಂಬಲ: ಆಸ್ಕರ್ ವಿಜೇತ, ಖ್ಯಾತ ನಟಿಯ ಬಂಧನ
Team Udayavani, Dec 18, 2022, 10:06 AM IST
ನವದೆಹಲಿ: ಇರಾನಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಅಧಿಕಾರಿಗಳು ಆಸ್ಕರ್ ಪ್ರಶಸ್ತಿ ವಿಜೇತೆ ತರನೆಹ್ ಅಲಿದೋಸ್ತಿಯನ್ನು ಬಂಧಿಸಿದ್ದಾರೆ.
ʼದಿ ಸೇಲ್ಸ್ ಮ್ಯಾನ್ʼ ಚಿತ್ರದಲ್ಲಿನ ನಟನೆಗಾಗಿ ಆಸ್ಕರ್ ಪ್ರಶಸ್ತಿ ಪಡೆದಿರುವ ತರನೆಹ್ ಅಲಿದೋಸ್ತಿ ಇತ್ತೀಚೆಗೆ ಇರಾನಿನಲ್ಲಿ ಮರಣದಂಡನೆಗೆ ಒಳಗಾದ ಮೊಹ್ಸೆನ್ ಶೇಕರಿ ಎಂಬಾತನ ಪರವಾಗಿ ಇನ್ಸ್ಟಾಗ್ರಾಮ್ ನಲ್ಲಿ ಬರಹವೊಂದು ಬರೆದು, ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದರು. ಇದು ಆಡಳಿತಕ್ಕೆ ವಿರೋಧವಾದ ನಡೆಯಾಗಿದ್ದು ಅದಕ್ಕಾಗಿ ನಟಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಇತ್ತೀಚೆಗೆ ಟೆಹ್ರಾನ್ ನಲ್ಲಿ ಪ್ರತಿಭಟನೆಯ ವೇಳೆ ಭದ್ರತಾ ಪಡೆಯ ಕುಟುಂಬದ ಸದಸ್ಯರೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ನ್ಯಾಯಾಲಯ ಆತನಿಗೆ ಗಲ್ಲುಶಿಕ್ಷೆ ನೀಡಿತ್ತು.
ಇದನ್ನೂ ಓದಿ: ತೇಜಸ್ವಿ ಯಾದವ್ ಅವರನ್ನು ಈಗಲೇ ಬಿಹಾರ ಸಿಎಂಯನ್ನಾಗಿ ಮಾಡಿ: ನಿತೀಶ್ ಕುಮಾರ್ ಗೆ ಪ್ರಶಾಂತ್ ಕಿಶೋರ್ ಸಲಹೆ
ಇದೇ ವೇಳೆ ಆ ವ್ಯಕ್ತಿಗೆ ನಟಿ ಬೆಂಬಲ ಸೂಚಿಸಿ ಇನ್ಸ್ಟಾಗ್ರಾಮ್ ನಲ್ಲಿ “ಅವನ ಹೆಸರು ಮೊಹ್ಸೆನ್ ಶೇಕರಿ. ಈ ರಕ್ತಪಾತವನ್ನು ನೋಡುತ್ತಿರುವ ಮತ್ತು ಕ್ರಮ ಕೈಗೊಳ್ಳದ ಪ್ರತಿಯೊಂದು ಅಂತರರಾಷ್ಟ್ರೀಯ ಸಂಸ್ಥೆಯು ಮಾನವೀಯತೆಗೆ ಅವಮಾನವಾಗಿದೆ” ಎಂದು ಬರೆದುಕೊಂಡಿದ್ದರು.
ಇದಲ್ಲದೆ ಪ್ರತಿಭಟನಾಕಾರರಿಗೆ ಬೆಂಬಲವಾಗಿ ಭಿತ್ತಿ ಪತ್ರವನ್ನು ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು.
8 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ನಟಿಯ ಇನ್ಸ್ಟಾಗ್ರಾಮ್ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಈ ಹಿಂದೆಯೂ ಅಲಿದೋಸ್ತಿ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಟೀಕೆಗಳನ್ನು ಮಾಡಿದ್ದರು.
ಬ್ಯೂಟಿಫುಲ್ ಸಿಟಿ ಮತ್ತುಅಬೌಟ್ ಎಲಿ ಸಿನಿಮಾದಲ್ಲೂ ಅಲಿದೋಸ್ತಿ ನಟಿಸಿದ್ದಾರೆ. ಇರಾನ್ ಸಿನಿಮಾರಂಗದಲ್ಲಿನ ಮೀಟೂ ಘಟನೆಯನ್ನು ಬೆಳಕಿಗೆ ತಂದಿದ್ದರು.
ಹೆಂಗಮೆಹ್ ಘಜಿಯಾನಿ ಮತ್ತು ಕಟಯೌನ್ ರಿಯಾಹಿ ಎಂಬ ನಟಿಯರನ್ನೂ ಕೆಲದಿನಗಳ ಹಿಂದೆ ಅಧಿಕಾರಿಗಳು ಪ್ರತಿಭಟನಾಕಾರರನ್ನು ಬೆಂಬಲಿಸಿದ್ದಕ್ಕಾಗಿ ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.