ಭಾರತ ಆಯ್ತು, ಇರಾನ್ ನಿಂದ ಪಾಕ್ ಮೇಲೆ ಸರ್ಜಿಕಲ್ ದಾಳಿ, ಇಬ್ಬರು ಯೋಧರ ರಕ್ಷಣೆ!
ಸೈನಿಕರ ಬಿಡುಗಡೆ ಬಗ್ಗೆ ಇರಾನ್ ಅಧಿಕೃತವಾಗಿ ಘೋಷಣೆ ಮಾಡಿದೆ.
Team Udayavani, Feb 4, 2021, 5:57 PM IST
ಟೆಹ್ರಾನ್/ಇಸ್ಲಾಮಾಬಾದ್: ಪಾಕಿಸ್ತಾನದ ಅಬೋಟಾಬಾದ್ ಉಗ್ರರ ನೆಲೆ ಮೇಲೆ ಭಾರತ ಸರ್ಜಿಕಲ್ ದಾಳಿ ನಡೆಸಿದ್ದು, ಇದೀಗ ತನ್ನ ಇಬ್ಬರು ಯೋಧರ ರಕ್ಷಣೆಗಾಗಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಇರಾನ್ ಸರ್ಜಿಕಲ್ ದಾಳಿ ನಡೆಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಫೆ.6ರ ರೈತ ಸಂಘಟನೆಯ ರಸ್ತೆ ಬಂದ್ ಪ್ರತಿಭಟನೆಗೆ ಬೆಂಬಲ ನೀಡಲ್ಲ: ಭಾರತೀಯ ಕಿಸಾನ್ ಸಂಘ
ಹಿಂದೂಸ್ತಾನ್ ವರದಿ ಪ್ರಕಾರ, ಬಲೂಚಿಸ್ತಾನದೊಳಗೆ ಜೈಶ್ ಉಲ್ ಅದ್ ಉಗ್ರರ ಮೇಲೆ ಇರಾನ್ ಸೇನೆ ದಿಢೀರ್ ದಾಳಿ ನಡೆಸಿ ಉಗ್ರರನ್ನು ಹತ್ಯೆಗೈದು ಇಬ್ಬರು ಇರಾನ್ ಯೋಧರನ್ನು ರಕ್ಷಿಸಿರುವುದಾಗಿ ತಿಳಿಸಿದೆ.
ಬುಧವಾರ(ಫೆ.03) ರಾತ್ರಿ ಇರಾನ್ ಸರ್ಜಿಕಲ್ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಉಗ್ರರಿಗೆ ರಕ್ಷಣೆ ನೀಡುತ್ತಿದ್ದ ಪಾಕಿಸ್ತಾನದ ಕೆಲವು ಸೈನಿಕರು ಸಾವಿಗೀಡಾಗಿರುವುದಾಗಿ ವರದಿ ತಿಳಿಸಿದೆ. ಸೈನಿಕರ ಬಿಡುಗಡೆ ಬಗ್ಗೆ ಇರಾನ್ ಅಧಿಕೃತವಾಗಿ ಘೋಷಣೆ ಮಾಡಿದೆ.
Iran’s Revolutionary Guards (IRGC) announces it has freed two soldiers in an intelligence operation inside Pakistan territory
“A successful operation was carried out on Tuesday to rescue two kidnapped border guards who were taken hostage by a terrorist group”#SurgicalStrike
— The Wolfpack? (@TheWolfpackIN) February 4, 2021
ಇರಾನ್ ನ ರೆವಲ್ಯೂಷನರಿ ಪಡೆ(ಐಆರ್ ಜಿಸಿ) ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಪಾಕಿಸ್ತಾನದೊಳಗೆ ನುಗ್ಗಿ ಈ ಕಾರ್ಯಾಚರಣೆ ನಡೆಸಿರುವುದಾಗಿ ವರದಿಯಾಗಿದೆ. ಈ ಮೂಲಕ ಉಗ್ರರ ವಶದಲ್ಲಿದ್ದ ಇಬ್ಬರು ಇರಾನ್ ಯೋಧರನ್ನು ರಕ್ಷಿಸಿರುವುದಾಗಿ ವಿವರಿಸಿದೆ.
ಪಾಕಿಸ್ತಾನದ ಸೇನೆಗೆ ಯಾವುದೇ ಸುಳಿವು ಸಿಗದಂತೆ ಇರಾನ್ ಸೇನೆ ನಿನ್ನೆ ರಾತ್ರಿ ಈ ಕಾರ್ಯಾಚರಣೆ ನಡೆಸಿದ್ದು, ಇದರೊಂದಿಗೆ ಪಾಕಿಸ್ತಾನದೊಳಗೆ ನುಗ್ಗಿ ದಾಳಿ ನಡೆಸಿದ ಮೂರನೇ ದೇಶ ಇರಾನ್ ಆಗಿದ್ದು, ಈ ಮೊದಲು ಅಮೆರಿಕ ನಂತರ ಭಾರತ ಸರ್ಜಿಕಲ್ ದಾಳಿ ನಡೆಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.