ಇರಾನ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಅಂತ್ಯ
Team Udayavani, Dec 5, 2022, 6:50 AM IST
ತೆಹ್ರಾನ್: ಹಿಜಾಬ್ ವಿರುದ್ಧ ಸತತ ಎರಡು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಯ ಫಲವಾಗಿ ಕೊನೆಗೂ ನೈತಿಕ ಪೊಲೀಸ್‌ಗಿರಿಗೆ ಇರಾನ್ ಸರ್ಕಾರ ಅಂತ್ಯಹಾಡಿದೆ.
ಹಿಜಾಬ್ ಸರಿಯಾಗಿ ಧರಿಸಲಿಲ್ಲ ಎಂಬ ಕಾರಣಕ್ಕೆ ಸೆ.16ರಂದು ಮಹ್ಸಾ ಅಮಿನಿ(22) ಅವರನ್ನು ಇರಾನ್‌ನ ನೈತಿಕ ಪೊಲೀಸ್ ಪಡೆ ಬಂಧಿಸಿತ್ತು. ನಂತರ ಆಕೆ ಪೊಲೀಸರ ವಶದಲ್ಲಿರುವಂತೆಯೇ ಮೃತಪಟ್ಟಿದ್ದಳು.
ಈ ಹಿನ್ನೆಲೆಯಲ್ಲಿ ಪೊಲೀಸರ ನೈತಿಕಗಿರಿ ಖಂಡಿಸಿ ದೇಶಾದ್ಯಂತ ಮಹಿಳೆಯರು ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆ ವೇಳೆ ಹಲವರು ಮೃತಪಟ್ಟು, ಅನೇಕರು ಗಾಯಗೊಂಡರು. ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹಿಜಾಬ್ ವಿರುದ್ಧದ ಪ್ರತಿಭಟನೆ ಇತರೆ ದೇಶಗಳಿಗೂ ವಿಸ್ತರಿಸಿತು. ಅಂತಿಮವಾಗಿ, “ನೈತಿಕ ಪೊಲೀಸ್‌ಗಿರಿಗೆ ಕಾನೂನಿನ ಬೆಂಬಲ ಇಲ್ಲ. ಹೀಗಾಗಿ ಅದನ್ನು ವಿಸರ್ಜಿಸಲಾಗಿದೆ,’ ಎಂದು ಇರಾನ್ ಸರ್ಕಾರದ ಪರ ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೇರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.