ಅಮೆರಿಕ ಅಧ್ಯಕ್ಷ ಟ್ರಂಪ್ ಬಂಧನಕ್ಕೆ ವಾರಂಟ್ ಹೊರಡಿಸಿದ ಇರಾನ್, ಇಂಟರ್ ಪೋಲ್ ಸಹಾಯಕ್ಕೆ ಮನವಿ
ಟ್ರಂಪ್ ಸೇರಿದಂತೆ ಇವರೆಲ್ಲಾ ಕೊಲೆ ಹಾಗೂ ಭಯೋತ್ಪಾದನೆಯ ಆರೋಪ ಎದುರಿಸಬೇಕಾಗಿದೆ
Team Udayavani, Jun 29, 2020, 8:23 PM IST
ಟೆಹ್ರಾನ್:ಅಮೆರಿಕ ಪಡೆ ಡ್ರೋನ್ ದಾಳಿ ನಡೆಸಿ ಬಾಗ್ದಾದ್ ನಲ್ಲಿ ಕಮಾಂಡರ್ ಖಾಸಿಂ ಸೋಲೆಮನಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇತರ ಅಧಿಕಾರಿಗಳ ಬಂಧನಕ್ಕೆ ವಾರಂಟ್ ಹೊರಡಿಸಿದ್ದು, ಇದಕ್ಕಾಗಿ ಇಂಟರ್ ಪೋಲ್ ನೆರವು ಕೋರಿದೆ ಎಂದು ವರದಿ ವಿವರಿಸಿದೆ.
ಜನವರಿ 3ರಂದು ದಾಳಿ ನಡೆಸಿ ಜನರಲ್ ಖಾಸಿಂ ಸೋಲೆಮನಿಯನ್ನು ಹತ್ಯೆಗೈದ ಘಟನೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಇತರ 30ಕ್ಕೂ ಅಧಿಕ ಅಧಿಕಾರಿಗಳು ಶಾಮೀಲಾಗಿರುವುದಾಗಿ ಆರೋಪಿಸಿರುವ ಇರಾನ್, ಟ್ರಂಪ್ ಸೇರಿದಂತೆ ಇವರೆಲ್ಲಾ ಕೊಲೆ ಹಾಗೂ ಭಯೋತ್ಪಾದನೆಯ ಆರೋಪ ಎದುರಿಸಬೇಕಾಗಿದೆ ಎಂದು ಹೇಳಿರುವುದಾಗಿ ಐಎಸ್ ಎನ್ ಎ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇರಾನ್ ಸರ್ಕಾರಿ ವಕೀಲ ಅಲ್ಕಾಸಿಮೆಹ್ರ್ ಅವರು ಟ್ರಂಪ್ ಹೊರತುಪಡಿಸಿ ಇತರ ಆರೋಪಿಗಳ ಹೆಸರನ್ನು ಬಹಿರಂಗಗೊಳಿಸಿಲ್ಲ. ಟ್ರಂಪ್ ಅಧ್ಯಕ್ಷ ಅವಧಿ ಮುಗಿದ ನಂತರವೂ ಕಾನೂನು ಸಮರ ಮುಂದುವರಿಯಲಿದೆ ಎಂದು ಇರಾನ್ ಹೇಳಿದೆ.
ಆದರೆ ಟ್ರಂಪ್ ಬಂಧನಕ್ಕೆ ಇಂಟರ್ ಪೋಲ್ ಸಹಾಯ ಯಾಚಿಸಿದ್ದರೂ ಕೂಡಾ ಫ್ರಾನ್ಸ್ ಲಯೊನ್ ಮೂಲದ ಇಂಟರ್ ಪೋಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.