ದೇನಾ ಪರ್ವತಕ್ಕೆ ಅಪ್ಪಳಿಸಿ ವಿಮಾನ ಪತನ: 66 ಸಾವು
Team Udayavani, Feb 19, 2018, 7:30 AM IST
ಟೆಹರಾನ್: ಇರಾನ್‌ನ ವಾಣಿಜ್ಯ ವಿಮಾನ ಪತನಗೊಂಡ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 66 ಮಂದಿಯೂ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ. ದಕ್ಷಿಣ ಇರಾನ್‌ನ ದೇನಾ ಪರ್ವತಕ್ಕೆ ಅಪ್ಪಳಿಸಿ ಏಸ್‌ಮಾನ್ ಏರ್‌ಲೈನ್ಸ್ ಎಟಿಆರ್-72 ವಿಮಾನ ಪತನಗೊಂಡಿದೆ.
ಅವಳಿ ಎಂಜಿನ್ ಹೊಂದಿರುವ ಈ ವಿಮಾನವನ್ನು ಪ್ರಾದೇಶಿಕ ಸಂಚಾರಕ್ಕಷ್ಟೇ ಬಳಸಲಾಗುತ್ತಿತ್ತು. ಇರಾನ್ ರಾಜಧಾನಿ ಟೆಹರಾನ್‌ನಿಂದ ಟೇಕ್ ಆಫ್ ಆಗಿದ್ದ ವಿಮಾನವು ಇಸಾಹಾನ್ ಪ್ರಾಂತ್ಯದ ಯಸೂಜ್ ಎಂಬ ಪುಟ್ಟ ನಗರದಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಇನ್ನೇನು ಅಲ್ಲಿಗೆ ತಲುಪ ಬೇಕು ಎನ್ನುವಷ್ಟರಲ್ಲಿ ವಿಮಾನ 440 ಮೀಟರ್‌ನಷ್ಟು ಎತ್ತರದ ದೇನಾ ಎಂಬ ಪರ್ವತಕ್ಕೆ ಅಪ್ಪಳಿಸಿ ಪತನಗೊಂಡಿತು ಎಂದು ಏರ್‌ಲೈನ್ಸ್ ವಕ್ತಾರ ಮೊಹಮ್ಮದ್ ತಾ ತಬಾತಾ ಬಾಯಿ ತಿಳಿಸಿದ್ದಾರೆ. ಒಂದು ಶಿಶು, 6 ಸಿಬಂದಿ ಸಹಿತ ಒಟ್ಟು 66 ಮಂದಿ ಈ ವಿಮಾನದಲ್ಲಿದ್ದು, ಯಾರೊಬ್ಬರೂ ಬದುಕುಳಿದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಪತನಗೊಂಡ ಪ್ರದೇಶದಲ್ಲಿ ದಟ್ಟ ಹಿಮ ಆವರಿಸಿರುವ ಕಾರಣ ರಕ್ಷಣಾ ಹೆಲಿಕಾಪ್ಟರ್, ಆ್ಯಂಬುಲೆನ್ಸ್‌ಗಳಿಗೂ ಅಲ್ಲಿಗೆ ತೆರಳಲು ಸಾಧ್ಯವಾಗಿಲ್ಲ.
ಹಲವು ದಶಕಗಳ ಅಂತಾರಾಷ್ಟ್ರೀಯ ನಿರ್ಬಂಧವನ್ನು ಎದುರಿಸಿದ್ದ ಕಾರಣ ಇರಾನ್‌ನ ಪ್ರಯಾಣಿಕ ವಿಮಾನಗಳು ಬಹಳ ಹಳತಾಗಿ, ರಿಪೇರಿಗೆ ಬಂದಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.