ಬಗ್ಧಾದ್‌ನ ಸದ್ರ್ ನಗರದಲ್ಲಿ ಬಾಂಬ್ ಸ್ಫೋಟ: ಕನಿಷ್ಠ 6 ಬಲಿ
Team Udayavani, Aug 28, 2017, 4:12 PM IST
ಬಗ್ಧಾದ್ : ಪೂರ್ವ ಬಗ್ಧಾದ್ ನ ಜನದಟ್ಟನೆಯ ಹಾಗೂ ಬಿರುಸಿನ ಚಟುವಟಿಕೆಯ ಮಾರುಕಟ್ಟೆ ಪ್ರದೇಶದಲ್ಲಿ ಕಾರ್ ಬಾಂಬ್ ಸ್ಫೋಟಗೊಂಡು ಕನಿಷ್ಠ ಆರು ಮಂದಿಯನ್ನು ಬಲಿತೆಗೆದುಕೊಂಡಿರುವುದಾಗಿ ಇರಾಕೀ ಅಧಿಕಾರಿಗಳು ತಿಳಿಸಿದ್ದಾರೆ.
ಬಗ್ಧಾದಿನ ಶಿಯಾ ಬಾಹುಳ್ಯದ ಸದ್ರ್ ನಗರದಲ್ಲಿನ ಜಮೀಲಾ ರಖಂ ಮಾರ್ಕೆಟ್ ನಲ್ಲಿ ಇಂದು ಬೆಳಗ್ಗೆ ಸ್ಫೋಟಕಗಳಿಂದ ತುಂಬಿದ ಕಾರೊಂದು ಸ್ಫೋಟಗೊಂಡಿತು. ಕನಿಷ್ಠ 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಮೃತರ ಸಂಖ್ಯೆ ಹೆಚ್ಚುವ ಭೀತಿ ಇದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಈ ವಿಸ್ಫೋಟಕ್ಕೆ ಯಾವುದೇ ಉಗ್ರ ಸಂಘಟನೆ ಈ ತನಕ ಹೊಣೆ ಹೊತ್ತಿಲ್ಲವಾದರೂ ಸಾಮಾನ್ಯವಾಗಿ ಈ ಬಗೆಯ ಕೃತ್ಯಗಳು ತನ್ನವೇ ಎಂದು ಐಸಿಸ್ ಉಗ್ರ ಸಂಘಟನೆ ಹೇಳಿಕೊಳ್ಳುವುದು ವಾಡಿಕೆ. ಇರಾಕ್ ರಾಜಧಾನಿಯಲ್ಲಿ ಶಿಯಾ ಅನುಯಾಯಿಗಳನ್ನು ಗುರಿ ಇರಿಸಿ ಬಾಂಬ್ ದಾಳಿ ನಡೆಸುವುದು ಕೂಡ ಸಾಮಾನ್ಯವಾಗಿದೆ.
ಐಸಿಸ್ ವಶದಲ್ಲಿರುವ ತಾಲ್ ಅಫಾರ್ ಎಂಬ ಉತ್ತರ ಇರಾಕ್ ಪಟ್ಟಣವನ್ನು ಮತ್ತೆ ವಶಪಡಿಸಿಕೊಳ್ಳುವ ಅಮೆರಿಕ ಬೆಂಬಲಿತ ಇರಾಕೀ ಪಡೆಗಳ ಕಾರ್ಯಾಚರಣೆ ಅಂತಿಮ ಹಂತದಲ್ಲಿರುವಾಗಲೇ ಈ ಬಾಂಬ್ ಸ್ಫೋಟ ನಡೆದಿರುವುದು ಗಮನಾರ್ಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.