ಸವಿತಾ ಹಾಲಪ್ಪನವರ್‌ಗೆ ನ್ಯಾಯ: Ireland ನಲ್ಲಿ ಗರ್ಭಪಾತ ಕಾನೂನುಬದ್ಧ
Team Udayavani, Dec 14, 2018, 4:12 PM IST
ಲಂಡನ್ : ಕ್ಯಾಥೋಲಿಕ್ ಬಹುಸಂಖ್ಯಾಕರ ದೇಶವಾಗಿರುವ ಅಯರ್ಲಂಡ್ ಇದೇ ಮೊದಲ ಬಾರಿಗೆ ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಮಸೂದೆಯನ್ನು ಪಾಸುಮಾಡಿದೆ.
2012ರಲ್ಲಿ ರಕ್ತದಲ್ಲಿ ವಿಷ ಸೇರಿಕೊಂಡು ಸಾವು ಬದುಕಿನ ಹೋರಾಟದಲ್ಲಿದ್ದ 31ರ ಹರೆಯದ ಭಾರತೀಯ ದಂತ ವೈದ್ಯೆ ಸವಿತಾ ಹಾಲಪ್ಪನವರ್, ತಮಗೆ ಚಿಕಿತ್ಸೆ ನೀಡುತ್ತಿದ್ದ ಗಾಲ್ ವೇ ಆಸ್ಪತ್ರೆಯ ವೈದ್ಯರಲ್ಲಿ ತಮಗೆ ಗರ್ಭಪಾತ ಮಾಡಿ ತನ್ನ ಜೀವ ಉಳಿಸುವಂತೆ ಗೋಗರೆದಿದ್ದರು. ಆದರೆ ವೈದ್ಯರು ಕಾನೂನಿನ ನಿಷೇಧದಿಂದಾಗಿ ಗರ್ಭಪಾತ ಮಾಡಲು ಮುಂದಾಗಿರಲಲ್ಲ; ಪರಿಣಾಮವಾಗಿ ಸವಿತಾ ಹಾಲಪ್ಪನವರ್ ಮೃತಪಟ್ಟಿದ್ದರು.
ಅದಾಗಿ ಅಯರ್ಲಂಡ್‌ನಲ್ಲಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸಬೇಕೆಂಬ ಭಾರೀ ಜನಾಂದೋಲನವೇ ನಡೆದಿತ್ತು. ಅದರ ಫಲಶ್ರುತಿಯಾಗಿ ಇದೀಗ ಅಂತಹ ಮಸೂದೆಯನ್ನು ಅಯರ್ಲಂಡ್ ಸಂಸತ್ತು ಪಾಸು ಮಾಡಿದೆ.
ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಸಲುವಾಗಿ ಎಂಟನೇ ತಿದ್ದುಪಡಿಯನ್ನು ರದ್ದಗೊಳಿಸುವ ಮೂಲಕ ಸಂವಿಧಾನಕ್ಕೆ ಬದಲಾವಣೆ ತರುವ ಪ್ರಸ್ತಾವದ ಪರವಾಗಿ ಅಯರ್ಲಂಡ್ ಸಂಸತ್ತು ಈ ವರ್ಷ ಮೇ ತಿಂಗಳಲ್ಲಿ ಶೇ.66.4 ಮತ ಹಾಕಿತ್ತು.
ಅಯರ್ಲಂಡ್ ಸಂಸತ್ತು ಪಾಸು ಮಾಡಿರುವ ಈ ತಿದ್ದುಪಡಿ ಮಸೂದೆಯು ಈಗಿನ್ನು ಕಾಯಿದೆಯಾಗಿ ಹೊರಬರಲು ಅಧ್ಯಕ್ಷ ಮೈಕೆಲ್ ಡಿ ಹಿಗ್ಗಿನ್ಸ್ ಅವರ ಅಂಕಿತ ಪಡೆಯಬೇಕಿದೆ ಎಂದು ಐರಿಷ್ ಬ್ರಾಡ್‌ಕಾಸ್ಟರ್ ಆರ್‌ಟಿಇ ವರದಿ ಮಾಡಿದೆ.
‘ಐರಿಷ್ ಮಹಿಳೆಯರಿಗೆ ಇದು ಐತಿಹಾಸಿಕ ಕ್ಷಣ. ಅಯರ್ಲಂಡ್‌ನ ಸಂಸತ್ತಿನ ಎರಡೂ ಸದನಗಳಲ್ಲಿ ಈ ಮಸೂದೆ ಪಾಸಾಗುವುದಕ್ಕೆ ಆರೋಗ್ಯ ಸಚಿವ ಸೈಮನ್ ಹ್ಯಾರಿಸ್ ಅವರಿಗೆ ಬೆಂಬಲ ನೀಡಿರುವ ಎಲ್ಲರಿಗೂ ನನ್ನ ಧನ್ಯವಾದಗಳು’ ಎಂದು 39ರ ಹರೆಯದ ಭಾರತೀಯ ಮೂಲದ ಅಯರ್ಲಂಡ್ ಪ್ರಧಾನಿ ಲಿಯೋ ವರದ್‌ಕರ್ ಹೇಳಿದ್ದಾರೆ.
ಅಂದಹಾಗೆ ವರದ್‌ಕರ್ ಅವರು ಕ್ಯಾಥೋಲಿಕ್ ಬಹುಸಂಖ್ಯಾಕರ ಅಯರ್ಲಂಡ್‌ನ ಅತೀ ಕಿರಿಯ ವಯಸ್ಸಿನ ಮತ್ತು ಮುಕ್ತವಾಗಿ ಘೋಷಿಸಿಕೊಂಡ ದೇಶದ ಪ್ರಥಮ ಸಲಿಂಗಿ ಪ್ರಧಾನಿ ಆಗಿ ಕಳೆದ ವರ್ಷ ಜೂನ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.