ಉತ್ತರ ಕೊರಿಯಾ ಸುತ್ತ ಅಮೆರಿಕ ಸೇನಾ ಬಲ ಹೆಚ್ಚಳ
Team Udayavani, Apr 26, 2017, 1:14 PM IST
ಸಿಯೋಲ್: ಉತ್ತರ ಕೊರಿಯಾದೊಂದಿಗೆ ಅಮೆರಿಕ ಸಂಬಂಧ ಮತ್ತಷ್ಟು ಜಟಿಲವಾಗುತ್ತಿರುವಂತೆಯೇ ಅಮೆರಿಕ ತನ್ನ ಪ್ರಬಲ ಜಲಾಂತರ್ಗಾಮಿ ನೌಕೆಯನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸಿಕೊಟ್ಟಿದೆ. ಉ. ಕೊರಿಯಾದತ್ತ ಈಗ ಅಮೆರಿಕದ ಅತೀ ದೊಡ್ಡ ವಿಮಾನ ವಾಹಕ ನೌಕೆಗಳಲ್ಲಿ ಒಂದಾದ ‘ಯುಎಸ್‌ಎಸ್ ಕಾರ್ಲ್ ವಿನ್ಸನ್’ ಆಗಮಿಸುತ್ತಿರುವಂತೆಯೇ, ಕ್ಷಿಪಣಿಗಳನ್ನು ಉಡಾಯಿಸಬಲ್ಲ ಸಾಮರ್ಥ್ಯದ ‘ಯುಎಸ್‌ಎಸ್ ಮಿಷಿಗನ್’ ಜಲಾಂತರ್ಗಾಮಿ ನೌಕೆಯನ್ನೂ ಕಳುಹಿಸಿದೆ.
ಭಾರೀ ಸಮರಾಭ್ಯಾಸ: ಏತನ್ಮಧ್ಯೆ ಉತ್ತರ ಕೊರಿಯಾ ಭಾರೀ ಪ್ರಮಾಣದಲ್ಲಿ ಫಿರಂಗಿ ಇತ್ಯಾದಿಗಳ ಸಮರಾಭ್ಯಾಸ ನಡೆಸಿದೆ. ಇದೇ ವೇಳೆ ಜಪಾನ್, ದ. ಕೊರಿಯಾ, ಅಮೆರಿಕಗಳೂ ತಮ್ಮ ಮಿಲಿಟರಿ ಶಕ್ತಿ ಸಂಚಯಕ್ಕೆ ತೊಡಗಿಕೊಂಡಿವೆ. ಅಮೆರಿಕ, ಜಪಾನ್‌ನ ಯುದ್ಧನೌಕೆಗಳು ಹಳದಿ ಸಮುದ್ರ ಮತ್ತು ಕೊರಿಯನ್ ವಲಯದ ಪಶ್ಚಿಮ ಭಾಗದಲ್ಲಿ ಸಮರಾಭ್ಯಾಸ ನಿರತವಾಗಿವೆ. ‘ನಮ್ಮ ಎಚ್ಚರಿಕೆ ಹೊರತಾಗಿಯೂ ಶತ್ರುಗಳು ಮಿಲಿಟರಿ ದುಸ್ಸಾಹಸಕ್ಕೆ ಮುಂದಾದಲ್ಲಿ ನಮ್ಮ ಸಶಸ್ತ್ರ ಪಡೆಗಳು ಅವುಗಳನ್ನು ಪರಮಾಣು ಬಾಂಬ್ ದಾಳಿ ಮೂಲಕ ಭೂಮಿಯಿಂದಲೇ ನಿರ್ನಾಮ ಮಾಡಿಬಿಡಬಲ್ಲವು’ ಎಂದು ಉತ್ತರ ಕೊರಿಯಾ ರಕ್ಷಣಾ ಸಚಿವ ಪಾಕ್ ಯಂಗ್ ಸಿಕ್ ಬೆದರಿಕೆ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.