ಸಿನಾಯ್: ಈಜಿಪ್ಟ್ ಸೇನಾ ಠಾಣೆ ಮೇಲೆ ಐಸಿಸ್ ದಾಳಿ; 23 ಸೈನಿಕರ ಹತ್ಯೆ
Team Udayavani, Jul 8, 2017, 11:07 AM IST
ಅಲ್ ಅರಿಷ್ , ಈಜಿಪ್ಟ್ : ಈಜಿಪ್ಟ್ ನ ಸಿನಾಯ್ ದ್ವೀಪಕಲ್ಪದಲ್ಲಿನ ದುರ್ಗಮ ಸೇನಾ ಹೊರ ಠಾಣೆಯೊಂದರ ಮೇಲೆ ಐಸಿಸ್ ಉಗ್ರರ ದಾಳಿ ನಡೆಸಿ ಆತ್ಮಾಹುತಿ ಕಾರ್ ಬಾಂಬ್ ಹಾಗೂ ಭಾರೀ ಮಶೀನ್ ಗನ್ ದಾಳಿಯ ಮೂಲಕ ಅದನ್ನು ನಾಶ ಪಡಿಸಿದ್ದಾರೆ. ಈ ಭೀಕರ ಉಗ್ರ ದಾಳಿಗೆ 23 ಸೈನಿಕರು ಬಲಿಯಾಗಿದ್ದಾರೆ.
ಸಮರತ್ರಸ್ತ ಪ್ರಕ್ಷುಬ್ದ ಪ್ರದೇಶವಾಗಿರುವ ಸಿನಾಯ್‌ನಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಡೆದಿರುವ ಅತ್ಯಂತ ಘೋರ ಉಗ್ರ ದಾಳಿ ಇದಾಗಿದೆ.
ಈಜಿಪ್ಟ್ ಸೇನೆ ಸಿನಾಯ್ ನಲ್ಲಿನ ಐಸಿಸ್ ಶಿಬಿರಗಳ ಮೇಲೆ ದಾಳಿ ನಡೆಸುವ ಸಿದ್ದತೆಯಲ್ಲಿದ್ದಾಗಲೇ ನಾವು ಈಜಿಪ್ಟ್ ಸೇನೆಯ ಠಾಣೆಯ ಮೇಲೆ ದಾಳಿ ನಡೆಸಿ 23 ಮಂದಿ ಸೈನಿಕರನ್ನು ಕೊಂದಿದ್ದೇವೆ ಎಂದು ದಾಳಿಯ ಬಳಿಕ ಇಸ್ಲಾಮಿಕ್ ಸಮೂಹ ಹೊರಡಿಸಿದ ಆನ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ಲಾಮಿಕ್ ಉಗ್ರರು ಕಳೆದ ಕೆಲವು ವರ್ಷಗಳಿಂದ ಸಿನಾಯ್ ಪ್ರದೇಶದಲ್ಲಿ ತಮ್ಮ ನೆಲೆಯನ್ನು ಕಾಣುವ ನಿಟ್ಟಿನಲ್ಲಿ ಇಲ್ಲಿನ ಅತೃಪ್ತ ಬೆಡೋಯಿನ್ ಜನರನ್ನು ಓಲೈಸಿಕೊಂಡು, ಅಭಿವೃದ್ಧಿಯನ್ನೇ ಕಾಣದ ಈ ಪ್ರದೇಶವನ್ನು ತಮ್ಮ ಭದ್ರ ಕೋಟೆಯನ್ನಾಗಿ ಮಾಡಿಕೊಂಡಿದ್ದಾರೆ. ಈಜಿಪ್ಟ್ ಸೇನೆ ಸೆನಾಯ್ ಮೇಲಿನ ನಿಯಂತ್ರಣಕ್ಕಾಗಿ ಕಳೆದ ಹಲವು ವರ್ಷಗಳಿಂದ ಹೋರಾಡುತ್ತಲೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ: ನರಿಂಗಾನ ಕಂಬಳ್ಳೋತ್ಸವದಲ್ಲಿ ಸಿಎಂ
ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ
ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ
ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್ ಸಿಂಗ್
Suvarna Bharathi Mahotsava: ಶೃಂಗೇರಿಯಲ್ಲಿ ದಾಖಲೆ ಬರೆದ ತ್ರಿವೇಣಿ ಸ್ತೋತ್ರ ಪಠಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.