ಫಿಲಿಪ್ಪೀನ್ಸ್‌ನಲ್ಲಿ ಅಮೆರಿಕದ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ
Team Udayavani, Oct 16, 2017, 11:50 AM IST
ಮನಿಲಾ : ಅಮೆರಿಕದ ‘ಮೋಸ್ಟ್ ವಾಂಟೆಡ್ ಟೆರರಿಸ್ಟ್’ ಪಟ್ಟಿಯಲ್ಲಿರುವ, ಐಸಿಸ್ ಉಗ್ರ ಸಂಘಟನೆ ಆಗ್ನೇಯ ಏಶ್ಯ ಘಟಕದ 51ರ ಹರೆಯದ ಮುಖ್ಯಸ್ಥ ಇಸ್ನಿಲಾನ್ ಹ್ಯಾಪಿಲಾನ್ ನನ್ನು ಫಿಲಿಪ್ಪೀನ್ಸ್ ನಗರದಲ್ಲಿ ನಡೆದ ಮಾರವಿ ಪಟ್ಟಣದ ಮರುವಶ ಕಾಳಗದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ದೇಶದ ರಕ್ಷಣಾ ಸಚಿವರು ಇಂದು ಸೋಮವಾರ ಪ್ರಕಟಿಸಿದ್ದಾರೆ.
ಹತ ಐಸಿಸ್ ಆಗ್ನೇಯ ಏಶ್ಯ ಘಟಕದ ಮುಖ್ಯಸ್ಥ ಹ್ಯಾಪಿಲಾನ್ ನನ್ನು “ಮಾರವಿ ಪಟ್ಟಣವನ್ನು ಮರು ವಶಪಡಿಸಿಕೊಳ್ಳುವ ನಾಲ್ಕು ತಿಂಗಳ ಕಾಳಗದ ಅಂತ್ಯದಲ್ಲಿ ಹತ್ಯೆ ಮಾಡಲಾಯಿತು; ಈ ಕಾಳಗದಲ್ಲಿ ಸಾವಿರಕ್ಕೂ ಅಧಿಕ ಜನರು ಹತರಾಗಿದ್ದರು ಮತ್ತು ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಪ್ರಾದೇಶಿಕ ನೆಲೆಯೊಂದನ್ನು ನಿರ್ಮಿಸುವತ್ತ ಐಸಿಸ್ ಸಾಗುತ್ತಿದೆ ಎಂಬ ಭಯ ಹುಟ್ಟಿಕೊಂಡಿತ್ತು’ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಇರಾಕ್ ಮತ್ತು ಸಿರಿಯದಲ್ಲಿನ ಕಾಳಗದಲ್ಲಿ ಐಸಿಸ್ ನಿರ್ಣಾಯಕ ಸೋಲನ್ನು ಅನುಭವಿಸಿದ ಬಳಿಕ ಅದು ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ತನ್ನ ನೆಲೆಯನ್ನು ಕಾಣುವ ಯತ್ನದಲ್ಲಿ ಐಸಿಸ್‌ನ ದಕ್ಷಿಣ ಏಶ್ಯ ಘಟಕದ ಮುಖ್ಯಸ್ಥ, ಉಗ್ರ ಇಸ್ನಿಲಾನ್ ಹ್ಯಾಪಿಲಾನ್ ಪ್ರಧಾನ ಪಾತ್ರ ವಹಿಸುತ್ತಿದ್ದ ಎಂದು ಸಚಿವರು ಹೇಳಿದ್ದಾರೆ.
ಉಗ್ರ ಹ್ಯಾಪಿಲಾನ್‌ನ ಬಂಧನಕ್ಕೆ ಕಾರಣವಾಗುವ ನಿರ್ಣಾಯಕ ಮಾಹಿತಿ ನೀಡಿದವರಿಗೆ 50 ಲಕ್ಷ ಡಾಲರ್ ಇನಾಮನ್ನು ನೀಡಲಾಗುವುದು ಎಂದು ಅಮೆರಿಕ ಸರಕಾರ ಈ ಮೊದಲು ಪ್ರಕಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.