ರಷ್ಯಾದ ವೈಮಾನಿಕ ದಾಳಿಗೆ ಐಸಿಸ್ ಲೀಡರ್ ಬಗ್ದಾದಿ ಫಿನಿಶ್; ವರದಿ
Team Udayavani, Jun 16, 2017, 2:51 PM IST
ಮಾಸ್ಕೋ: ಕಳೆದ ಮೇ ತಿಂಗಳಿನಲ್ಲಿ ಸಿರಿಯಾದ ರಖ್ಖಾ ನಗರದ ಮೇಲೆ ರಷ್ಯಾ ಮಿಲಿಟರಿ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್ ಬಗ್ಗಾದಿ ಸಾವನ್ನಪ್ಪಿರುವುದಾಗಿ ವರದಿಗಳು ಬರುತ್ತಿದ್ದು, ನಾವು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿರುವುದಾಗಿ ರಷ್ಯನ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಐಸಿಸ್ ಮುಖಂಡರು ಸಭೆ ನಡೆಸುವ ಸಿದ್ಧತೆಯಲ್ಲಿದ್ದಾರೆ ಎಂಬ ಮಾಹಿತಿಯನ್ನು ಸಿರಿಯಾದಲ್ಲಿರುವ ರಷ್ಯನ್ ಪಡೆಗಳಿಗೆ ಗುಪ್ತಚರ ಇಲಾಖೆ ನೀಡಿತ್ತು. ಈ ಮಾಹಿತಿ ಮೇರೆಗೆ ಮೇ 28ರಂದು ಐಸಿಸ್ ಉಗ್ರರು ನಡೆಸುತ್ತಿದ್ದ ಸಭೆಯ ಸ್ಥಳ ಮತ್ತು ಸಮಯದ ಮಾಹಿತಿ ಕಲೆ ಹಾಕಿ ರಷ್ಯಾದ ವೈಮಾನಿಕ ಪಡೆಗಳು ಏಕಾಏಕಿ ದಾಳಿ ನಡೆಸಿದ್ದವು ಎಂದು ಮಾಧ್ಯಮದ ಪ್ರಕಟಣೆ ತಿಳಿಸಿದೆ.
ಆ ದಾಳಿಯಲ್ಲಿ ಐಸಿಸ್ ಉಗ್ರಗಾಮಿ ಸಂಘಟನೆಯ ಮುಖಂಡ ಅಬು ಬಕರ್ ಅಲ್ ಬಗ್ದಾದಿ ಸಾವನ್ನಪ್ಪಿರುವುದಾಗಿ ವಿವಿಧ ಚಾನೆಲ್ ಗಳು ವರದಿಯನ್ನು ಬಿತ್ತರಿಸುತ್ತಿವೆ. ಈ ಸಭೆಯಲ್ಲಿ ಬಗ್ದಾದಿಯೂ ಪಾಲ್ಗೊಂಡಿದ್ದ ಹಾಗಾಗಿ ಬಗ್ದಾದಿ ಸಾವನ್ನಪ್ಪಿರುವ ಸಾಧ್ಯತೆ ದಟ್ಟವಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿರುವುದಾಗಿ ಆರ್ ಐಎ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಈ ಹಿಂದೆಯೂ ಸಿರಿಯಾದಲ್ಲಿ ಅಮೆರಿಕ ವೈಮಾನಿಕ ಪಡೆ ನಡೆಸಿದ ದಾಳಿಯಲ್ಲಿ ಐಸಿಸ್ ಉಗ್ರ ಅಬು ಬಕರ್ ಅಲ್ ಬಗ್ದಾದಿ ಸಾವನ್ನಪ್ಪಿರುವುದಾಗಿ ವಿದೇಶಿ ಮಾಧ್ಯಮಗಳು ವರದಿ ಮಾಡಿದ್ದವು. ಬಳಿಕ ಐಸಿಸ್ ಉಗ್ರಗಾಮಿ ಸಂಘಟನೆ ಸ್ಪಷ್ಟನೆ ನೀಡುವ ಮೂಲಕ ಊಹಾಪೋಹಕ್ಕೆ ತೆರೆ ಎಳೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.