ಇನ್ನು ಆರು ತಿಂಗಳಲ್ಲಿ ಅಮೆರಿಕಕ್ಕೆ ಐಎಸ್‌ಕೆಪಿ ದಾಳಿ?
ಮತ್ತೊಮ್ಮೆ 9/11 ಮಾದರಿ ದಾಳಿ ಆತಂಕ; ಸಂಸತ್‌ಗೆ ಖುದ್ದು ರಕ್ಷಣಾ ಖಾತೆ ಸಹಾಯಕ ಸಚಿವರ ಮಾಹಿತಿ
Team Udayavani, Oct 27, 2021, 9:45 PM IST
ವಾಷಿಂಗ್ಟನ್/ನ್ಯೂಯಾರ್ಕ್:”ಇನ್ನು ಆರು ತಿಂಗಳು ಅಥವಾ ಒಂದು ವರ್ಷದ ಅವಧಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಖೊರೊಸಾನ್ ಪ್ರಾವಿನ್ಸ್- ಐಎಸ್‌ಕೆಪಿ ಅಮೆರಿಕದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಗುಪ್ತಚರ ಸಂಸ್ಥೆಗಳು ನೀಡಿದ ಮುನ್ನೆಚ್ಚರಿಕೆ ವರದಿಯನ್ನು ಅಧ್ಯಯನ ನಡೆಸುತ್ತಿದ್ದೇವೆ’
– ಹೀಗೆಂದು ದೇಶದ ಸಂಸತ್‌ಗೆ ಅಮೆರಿಕದ ರಕ್ಷಣಾ ಖಾತೆ ಸಹಾಯಕ ಸಚಿವ ಕೊಲಿನ್ ಖಾಲ್ ಮಾಹಿತಿ ನೀಡಿದ್ದಾರೆ.
ಇದರಿಂದಾಗಿ 9/11ರ ದಾಳಿಯ ಬಳಿಕವೂ ಅಫ್ಘಾನಿಸ್ತಾನ ಮತ್ತೂಮ್ಮೆ ಜಗತ್ತಿನ ದೊಡ್ಡಣ್ಣನಿಗೆ ಮತ್ತೊಮ್ಮೆ ಬೆದರಿಕೆಯಾಗಿ ಪರಿಣಮಿಸುವ ಸಾಧ್ಯತೆಗಳು ಇವೆ ಎಂಬ ಅಂಶ ವೇದ್ಯವಾಗತೊಡಗಿದೆ.
2001ರಲ್ಲಿ ನಡೆದಿದ್ದ ದಾಳಿಯಲ್ಲಿ 2,996 ಮಂದಿ ಅಸುನೀಗಿದ್ದರು. ನಂತರ ಪ್ರತೀಕಾರವಾಗಿ ಅಫ್ಘಾನಿಸ್ತಾನದಲ್ಲಿರುವ ಅಲ್-ಖೈದಾ ನೆಲೆಗಳ ಮೇಲೆ ಅಮೆರಿಕ ಪಡೆ ದಾಳಿ ನಡೆಸಿತ್ತು.
ಇದನ್ನೂ ಓದಿ:ಕನ್ನಡಕ್ಕಾಗಿ ಲಾಠಿ ಏಟು ತಿಂದು 15 ದಿನ ಆಸ್ಪತ್ರೆಯಲ್ಲಿದ್ದೆ: ಸಚಿವ ಆರ್.ಅಶೋಕ್
ಆಗಸ್ಟನ್‌ನಲ್ಲಿ ಅಮೆರಿಕ ಆ ದೇಶದಿಂದ ಇಪ್ಪತ್ತು ವರ್ಷಗಳ ಬಳಿಕ ಅಮೆರಿಕ ಪೂರ್ಣ ಪ್ರಮಾಣದಲ್ಲಿ ವಾಪಸ್ ಪಡೆದ ಬಳಿಕ ಆಡಳಿತವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿದ್ದಾರೆ. ಇದೀಗ ಆ ದೇಶದಲ್ಲಿ ತಾಲಿಬಾನ್ ವಿರುದ್ಧ ಐಎಸ್‌ಕೆಪಿ ಉಗ್ರರೂ ಮುಗಿ ಬಿದ್ದಿದ್ದಾರೆ. ಆದರೆ, ಖಾಲ್ ಅಮೆರಿಕದ ಸಂಸತ್‌ಗೆ ನೀಡಿದ ಮಾಹಿತಿ ಪ್ರಕಾರ ಅಲ್ ಖೈದಾ ಉಗ್ರ ಸಂಘಟನೆ ಕೂಡ ಮತ್ತೂಮ್ಮೆ ದೇಶದ ಮೇಲೆ ದಾಳಿ ನಡೆಸುವ ಸಿದ್ಧತೆಯಲ್ಲಿದೆ ಎಂದು ಹೇಳಿದ್ದಾರೆ.
9/11 ದಾಳಿಯ ಬಳಿಕ ಮತ್ತೊಮ್ಮೆ ಅಮೆರಿಕದ ಮೇಲೆ ದಾಳಿ ಎಸಗಲು ತಾಲಿಬಾನ್ ಸಮರ್ಥವಾಗಿದೆಯೇ ಎಂಬ ಬಗ್ಗೆ ಖಚಿತಪಟ್ಟಿಲ್ಲವೆಂದಿದ್ದಾರೆ.
ತಾಲಿಬಾನ್ ಮತ್ತು ಐಸ್‌ಕೆಪಿ ಪರಮ ಶತ್ರುಗಳು. ಹೀಗಾಗಿ ತಾಲಿಬಾನ್, ಆ ಸಂಘಟನೆ ವಿರುದ್ಧ ಹೋರಾಟ ನಡೆಸುವ ಸಾಧ್ಯತೆಗಳಿವೆ ಮತ್ತು ಆ ಸಾಮರ್ಥ್ಯವೂ ಇದೆ. ಐಎಸ್‌ಕೆಪಿ ಸಾವಿರಾರು ಮಂದಿ ಸದಸ್ಯರು ಇರುವ ಸಾಧ್ಯತೆ ಇದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.