Israel; ಬಂದೂಕುಗಳ ಖರೀದಿಗೆ 42,000 ಸ್ತ್ರೀಯರ ಅರ್ಜಿ!
ಹಮಾಸ್ ದಾಳಿ ಚಿತ್ರಣವನ್ನೇ ಬದಲಿಸಿದ್ದು...
Team Udayavani, Jun 23, 2024, 6:57 AM IST
ಜೆರುಸಲೇಂ: ಇಸ್ರೇಲ್ ಮೇಲೆ ಕಳೆದ ವರ್ಷ ಹಮಾಸ್ ಉಗ್ರರು ನಡೆಸಿದ ದಾಳಿ ಆ ರಾಷ್ಟ್ರದ ಚಿತ್ರಣವನ್ನೇ ಬದಲಿಸಿದ್ದು, ಅಲ್ಲಿನ ಮಹಿಳೆಯರು ತಮ್ಮ ಆತ್ಮರಕ್ಷಣೆಗಾಗಿ ಬಂದೂಕು ಖರೀದಿಗೆ ಮುಂದಾಗಿದ್ದಾರೆ! ದಾಳಿ ಬಳಿಕ ಬರೋಬ್ಬರಿ 42,000 ಮಹಿಳೆಯರು ಪರವಾನಿಗೆಗೆ ಅರ್ಜಿ ಸಲ್ಲಿಸಿದ್ದಾರೆ.
ಇಸ್ರೇಲ್ ರಕ್ಷಣ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ ವರ್ಷ ಅ.7 ರಂದು ಹಮಾಸ್ ದಾಳಿ ನಡೆದ ಬಳಿಕ ಬಂದೂಕು ಪರವಾನಿಗೆಗೆ ಅರ್ಜಿ ಸಲ್ಲಿಸಿ ರುವವರ ಪ್ರಮಾಣ ದಾಳಿಗೂ ಮುಂಚಿ ನ ಪ್ರಮಾಣಕ್ಕಿಂತ 3 ಪಟ್ಟು ಹೆಚ್ಚಾಗಿದೆ. ದಾಳಿ ಬಳಿಕ ಅರ್ಜಿ ಸಲ್ಲಿಸಿರುವ 42,000 ಮಹಿಳೆಯರ ಪೈಕಿ 18,000 ಅರ್ಜಿಗಳಿಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಸಂಪೂರ್ಣ ಇಸ್ರೇಲ್ ಹಾಗೂ ಇಸ್ರೇಲ್ ಮಿಲಿಟರಿ ವಶದಲ್ಲಿರುವ ಪಶ್ಚಿಮ ದಂಡೆ ಯಲ್ಲಿರುವ 15,000 ಮಹಿಳೆಯರು ಬಂದೂಕುಗಳನ್ನು ಹೊಂದಿದ್ದು, 10000 ಮಹಿಳೆಯರು ಬಂದೂಕು ಪರವಾನಿಗೆಗೆ ಕಡ್ಡಾಯವಾಗಿರುವ ತರಬೇತಿ ಪಡೆಯ ಲು ನೋಂದಾಯಿಸಿ ಕೊಂಡಿದ್ದಾರೆ.
ನಾಗರಿಕರು ಶಸ್ತ್ರಾಸ್ತ್ರ° ಹೊಂದು ವುದನ್ನು ಇಸ್ರೇಲ್ ರಕ್ಷಣ ಸಚಿವ ಇತಮಾರ್ ಬೆನ್ ಜಿವಿರ್ ಪ್ರೋತ್ಸಾಹಿಸಿ ದ್ದರು. 2022ರಲ್ಲಿ ಪರವಾನಿಗೆ ಪಡೆದ ಇಸ್ರೇಲಿಗರ ಸಂಖ್ಯೆ 1ಲಕ್ಷ ದಾಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.