ನೆನಪಿಗೆಂದು ಬಾಂಬ್ ಅನ್ನೇ ಹೊತ್ತುತಂದ ಪ್ರವಾಸಿಗರು!
ಇಸ್ರೇಲ್ನ ಏರ್ಪೋರ್ಟ್ನಲ್ಲಿ ಬೆಚ್ಚಿ ಬಿದ್ದ ಪ್ರಯಾಣಿಕರು
Team Udayavani, Apr 30, 2022, 7:40 AM IST
ಜೆರುಸಲೆಂ: ಇಸ್ರೇಲ್ ಪ್ರವಾಸದ ನೆನಪಿಗೆಂದು ಅಮೆರಿಕ ಮೂಲದ ಕುಟುಂಬವೊಂದು ಬಾಂಬ್ ಅನ್ನೇ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ ವಿಚಿತ್ರ ಘಟನೆ ಗುರುವಾರ ಇಸ್ರೇಲ್ನ ಬೆನ್ ಗುರಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ.
ಅಮೆರಿಕ ಮೂಲದ ಕುಟುಂಬ ಇಸ್ರೇಲ್ನ ಗೋಲನ್ ಗೈಟ್ಸ್ ಪ್ರವಾಸಿ ತಾಣಕ್ಕೆ ತೆರಳಿದಾಗ ಅಲ್ಲಿ ಅವರಿಗೆ, ಸ್ಫೋಟಗೊಳ್ಳದೆ ಬಿದ್ದಿದ್ದ ಬಾಂಬ್ ಒಂದು ಸಿಕ್ಕಿದೆ.
ಇಸ್ರೇಲ್ ಪ್ರವಾಸದ ನೆನಪಿಗೆ ಏನಾದರೂ ತೆಗೆದುಕೊಂಡು ಹೋಗಬೇಕೆಂದು ಪರಿಗಣಿಸಿದ ಕುಟುಂಬ ಆ ಸ್ಫೋಟಗೊಳ್ಳದ ಬಾಂಬ್ ಅನ್ನೇ ಸೂಟ್ಕೇಸ್ ಒಳಗಿಟ್ಟು ಪ್ಯಾಕ್ ಮಾಡಿಕೊಂಡು ಹೊರಟಿದ್ದಾರೆ.
ಅಮೆರಿಕಕ್ಕೆ ವಾಪಸು ತೆರಳಲೆಂದು ವಿಮಾನ ನಿಲ್ದಾಣಕ್ಕೆ ಬಂದಾಗ ಅವರ ಬ್ಯಾಗ್ನಲ್ಲಿ ಬಾಂಬ್ ಇರುವುದು ಭದ್ರತಾ ಸಿಬ್ಬಂದಿಗೆ ತಿಳಿದುಬಂದಿದೆ.
ಇದನ್ನೂ ಓದಿ:‘ವಾಮನ’ ಕನ್ನಡ ಸಿನಿಮಾದ ನಾಯಕಿಯಾಗಿ ಪುತ್ತೂರಿನ ರಚನಾ ರೈ
ಅಲ್ಲಿದ್ದ ಪ್ರಯಾಣಿಕರಿಗೂ ಈ ವಿಚಾರ ತಿಳಿದುಬಂದಿದ್ದು, ಅವರೆಲ್ಲರೂ ಪ್ರಾಣರಕ್ಷಣೆಗಾಗಿ ಓಡಿ ಹೋಗಲಾರಂಭಿಸಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಲಗೇಜ್ಗಳ ಮೇಲೆಯೇ ಓಡಿ ಹೋಗಲು ಪ್ರಯತ್ನಿಸಿ ಬಿದ್ದು, ಗಂಭೀರ ಗಾಯ ಮಾಡಿಕೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬಾಂಬ್ ತಂದಿದ್ದ ಕುಟುಂಬವನ್ನು ವಿಮಾನ ನಿಲ್ದಾಣದ ಭದ್ರತಾ ಪಡೆಯು ಕೂಲಂಕುಷವಾಗಿ ವಿಚಾರಣೆ ಮಾಡಿದೆ. ಕುಟುಂಬ ಕೇವಲ ನೆನಪಿಗಾಗಿ ಬಾಂಬ್ ತಂದಿದ್ದು ಸ್ಪಷ್ಟವಾದ ನಂತರ ಅವರನ್ನು ಅಮೆರಿಕಕ್ಕೆ ಕಳುಹಿಸಿಕೊಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.