Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್ ಪಡೆ
ಈಜಿಪ್ಟ್-ಕತಾರ್ ಸಂಧಾನಕ್ಕೆ ಹಮಾಸ್ ಒಪ್ಪಿಗೆ, ಮಾತುಕತೆಗೆ ಇಸ್ರೇಲ್‌ನಿಂದ ನಿಯೋಗ
Team Udayavani, May 8, 2024, 5:44 AM IST
ನವದೆಹಲಿ: ಮಂಗಳವಾರ ಇಸ್ರೇಲ್ ಸೇನಾಪಡೆಗಳು ದಕ್ಷಿಣ ಗಾಜಾಪಟ್ಟಿಯಲ್ಲಿರುವ ರಫಾ ನಗರದ ಪೂರ್ವಭಾಗಕ್ಕೆ ನುಗ್ಗಿವೆ. ಹಮಾಸ್ ಉಗ್ರರ ಕೊನೆಯ ಬಲಿಷ್ಠ ನೆಲೆಯನ್ನು ತಮ್ಮ ಹಿಡಿತಕ್ಕೆ ಪಡೆದುಕೊಳ್ಳಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಸೋಮವಾರವಷ್ಟೇ ಈಜಿಪ್ಟ್-ಕತಾರ್ ಏರ್ಪಡಿಸಿದ್ದ ಸಂಧಾನಸೂತ್ರಕ್ಕೆ ಹಮಾಸ್ ಒಪ್ಪಿಗೆ ನೀಡಿತ್ತು. ಆದರೆ ತನ್ನ ಎಲ್ಲ ಬೇಡಿಕೆಗಳಿಗೆ ಅದರಲ್ಲಿ ಒಪ್ಪಿಗೆ ಸಿಕ್ಕಿಲ್ಲ ಎನ್ನುವ ಮೂಲಕ ಇಸ್ರೇಲ್ ದಾಳಿ ಮುಂದುವರಿಸಿದೆ. ಹೀಗಾಗಿ ಪರಿಸ್ಥಿತಿ ಪೂರ್ಣ ಬಿಗುವಿನಿಂದ ಕೂಡಿದ್ದು, 7 ತಿಂಗಳ ನಂತರವಾದರೂ ಯುದ್ಧ ನಿಲ್ಲುತ್ತದಾ, ಇಲ್ಲವಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಸಂಧಾನಕ್ಕೆ ಈಜಿಪ್ಟ್-ಕತಾರ್ ಮುಂದಾಗಿರುವ ಕಾರಣ, ಮಾತುಕತೆಗಾಗಿ ನಿಯೋಗ ಕಳುಹಿಸಲಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಇದು ಸದ್ಯ ಇರುವ ಏಕೈಕ ಆಶಾಕಿರಣವಾಗಿದೆ. ಮತ್ತೂಂದು ಕಡೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ರಫಾ ಮೇಲೆ ದಾಳಿ ಮಾಡದಂತೆ, ಇಸ್ರೇಲ್‌ಗೆ ಒತ್ತಡ ಹೇರಿದ್ದಾರೆ.
ವಿಶ್ವಯುದ್ಧ ಸ್ಮಾರಕ ಹಾಳುಗೆಡವಿದ ಪ್ರತಿಭಟನಾಕಾರರು
ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮೆಟ್ ಗಾಲಾ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಮಂಗಳವಾರ ಇಸ್ರೇಲ್ ವಿರೋಧಿ ಪ್ರತಿಭಟನಾಕಾರರು ಯತ್ನಿಸಿದ್ದಾರೆ. ಅವರನ್ನು ಪೊಲೀಸರು ತಡೆದಿದ್ದು, ಇದರಿಂದ ಕ್ರುದ್ಧರಾದ ಪ್ರತಿಭಟನಾಕಾರರು 1ನೇ ವಿಶ್ವಯುದ್ಧದ ಸ್ಮಾರಕವನ್ನು ಹಾಳುಗೆಡವಿ, ಅಮೆರಿಕದ ಧ್ವಜ ಸುಟ್ಟುಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.