Iran ಪ್ರತಿ ದಾಳಿಯ ಭಯ: ಸೈನಿಕರ ರಜೆ ರದ್ದುಗೊಳಿಸಿದ ಇಸ್ರೇಲ್, GPS ಕಡಿತ
ರಣಾಕ್ರೋಶ... ಯಾವುದೇ ಕ್ಷಣದಲ್ಲಿ ಇರಾನ್ ದಾಳಿ ಆರಂಭಿಸಬಹುದು
Team Udayavani, Apr 5, 2024, 9:08 PM IST
ಜೆರುಸಲೇಮ್: ಸಿರಿಯಾದಲ್ಲಿ ವೈಮಾನಿಕ ದಾಳಿಯಲ್ಲಿ ಇಬ್ಬರು ಇರಾನಿನ ಜನರಲ್‌ಗಳು ಸೇರಿದಂತೆ 13 ಜನರನ್ನು ಹತ್ಯೆಯಾದ ನಂತರ ಇರಾನ್‌ನಿಂದ ಸಂಭವನೀಯ ಪ್ರತೀಕಾರದ ದಾಳಿಯ ಭಯದಿಂದ ಇಸ್ರೇಲ್ ಕಟ್ಟೆಚ್ಚರ ವಹಿಸಿದ್ದು ಜಿಪಿಎಸ್ ನ್ಯಾವಿಗೇಷನ್ ಸೇವೆಗಳನ್ನು ನಿರ್ಬಂಧಿಸಲಾಗಿದ್ದು, ಯುದ್ಧ ಘಟಕಗಳಿಗೆ ರಜೆ ರದ್ದುಗೊಳಿಸಲಾಗಿದೆ, ವಾಯು ರಕ್ಷಣ ಆಜ್ಞೆಯನ್ನು ವರ್ಧಿಸಲಾಗಿದೆ
ವಿದೇಶಿ ಮಾಧ್ಯಮಗಳ ವರದಿ ಪ್ರಕಾರ, ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನೊಂದಿಗಿನ ಯುದ್ಧದಿಂದಾಗಿ ಈಗಾಗಲೇ ಹೋರಾಟ ನಿರತವಾಗಿ ಸಾಕಷ್ಟು ದಣಿದಿರುವ ಇಸ್ರೇಲ್, ಪವಿತ್ರ ರಂಜಾನ್ ತಿಂಗಳ ಕೊನೆಯ ಶುಕ್ರವಾರದ ಏಪ್ರಿಲ್ 5 ರ ನಂತರ ಇರಾನ್‌ನಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದೆ. ಪ್ಯಾಲೆಸ್ಟೀನಿಯನ್ನರಿಗೆ ಬೆಂಬಲ ವ್ಯಕ್ತಪಡಿಸಲು ಇರಾನ್ ಈ ದಿನವನ್ನು ‘ಜೆರುಸಲೇಮ್ ದಿನ’ವನ್ನಾಗಿ ಆಚರಿಸುತ್ತದೆ.
ಸಿರಿಯಾ ರಾಜಧಾನಿಯಲ್ಲಿ ಇರಾನಿನ ರಾಜತಾಂತ್ರಿಕ ಕಟ್ಟಡದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಇರಾನ್ ನ ಉನ್ನತ ಕುಡ್ಸ್ ಫೋರ್ಸ್ ಕಮಾಂಡರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಹತ್ಯೆಯಾಗಿದೆ.. 2020 ರಲ್ಲಿ ಯುಎಸ್ ಡ್ರೋನ್ ದಾಳಿಯಲ್ಲಿ ಖುಡ್ಸ್ ಫೋರ್ಸ್ ಕಮಾಂಡರ್ ಮೇಜರ್ ಜನರಲ್ ಖಾಸೆಮ್ ಸೊಲೈಮಾನಿ ಸಾವನ್ನಪ್ಪಿದ ನಂತರ ಇದು ಅತ್ಯಂತ ಉನ್ನತ ಮಟ್ಟದ ಅಧಿಕಾರಿಯೊಬ್ಬರ ಹತ್ಯೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.