Israel; 9/11 ಮಾದರಿ ದಾಳಿ ಯೋಜಿಸಿದ್ದ ಹಮಾಸ್
Team Udayavani, Oct 14, 2024, 7:38 AM IST
ಹೊಸದಿಲ್ಲಿ: ಹಮಾಸ್ ಬಂಡುಕೋರರು 2023ರ ಅ.7ರಂದು ಇಸ್ರೇಲ್ ಮೇಲೆ ನಡೆಸಿದ್ದ ಭಯಾನಕ ದಾಳಿಗೆ 1200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿಯನ್ನು ಒತ್ತೆಯಾಳಾಗಿಯೂ ಇರಿಸಲಾಯಿತು. ಮೇಲ್ನೋಟಕ್ಕೆ ಇದು ತ್ವರಿತವಾಗಿ ಯೋಜಿಸಿ ನಡೆಸಿದ ಕಾರ್ಯಾಚರಣೆ ಎನಿಸುತ್ತದೆ. ಆದರೆ ಇದು ಸಾಕಷ್ಟು ವರ್ಷಗಳ ಹಿಂದಿನಿಂದ ಹೊಂಚುಹಾಕಿ ಮಾಡಿದ ಯೋಜನೆಗಳ ಫಲ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ದಾಖಲೆಗಳೊಂದಿಗೆ ವರದಿ ಮಾಡಿವೆ.
ವರದಿಗಳ ಪ್ರಕಾರ ಅಮೆರಿಕದ 9/11 ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಯಂತೆಯೇ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಅಜೆùಲ್ ಟವರ್‌ಗಳ ಮೇಲೆ ದಾಳಿ ನಡೆಸಲು ಯೋಜಿಸಲಾಗಿತ್ತು. ಆದರೆ ಸಾಕಷ್ಟು ಚರ್ಚೆಯ ಬಳಿಕ ಈ ದಾಳಿಗೆ ಬಹಳ ಸಾಮರ್ಥ್ಯ ಬೇಕೆಂದು ನಿರ್ಧರಿಸಿ ಯೋಜನೆ ಕೈಬಿಡಲಾಯಿತು.
2022ರಲ್ಲೇ ದಾಳಿ ನಡೆಸಲು ಹಮಾಸ್ ನಿರ್ಧರಿಸಿತ್ತಾದರೂ, ಬಳಿಕ ಇನ್ನಷ್ಟು ಶಸ್ತ್ರ ಸಂಗ್ರಹಣೆ, ಕಾರ್ಯಯೋಜನೆ, ಇರಾನ್ ಹಾಗೂ ಹೆಜ್ಬುಲ್ಲಾ ಬೆಂಬಲ ಎಲ್ಲವನ್ನೂ ಹೆಚ್ಚಿಸಿಕೊಳ್ಳಲು ದಾಳಿಯನ್ನು ಮುಂದೂಡಲಾಯಿತು ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.