Israel-Hamas war; ಕದನವಿರಾಮ ವಿಸ್ತರಣೆಗೆ ಚಿಂತನೆ
Team Udayavani, Nov 27, 2023, 10:44 PM IST
ಜೆರುಸಲೇಂ: ಹಮಾಸ್-ಇಸ್ರೇಲ್ ಸಂಘರ್ಷದ ಒತ್ತೆಯಾಳುಗಳ ಬಿಡುಗಡೆಯು 4ನೇ ಹಂತ ತಲುಪಿರುವಂತೆಯೇ ಉಭಯ ರಾಷ್ಟ್ರಗಳೆರಡೂ ಕದನವಿರಾಮವನ್ನು ಮತ್ತಷ್ಟು ವಿಸ್ತರಿಸುವತ್ತ ಚಿಂತನೆ ನಡೆಸಿವೆ.
ಈಜಿಪ್ಟ್, ಕತಾರ್, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳೂ ಕೂಡ ಕದನವಿರಾಮ ವಿಸ್ತರಣೆಗೆ ಸಲಹೆ ನೀಡಿವೆ.
ಪ್ಯಾಲೇಸ್ತೀನ್ ವಿದೇಶಾಂಗ ಸಚಿವ ರಯೀದ್-ಅಲ್-ಮಲ್ಕಿ ಈ ಕುರಿತು ಮಾತನಾಡಿ ಸಂಘರ್ಷದಿಂದ ಈಗಾಗಲೇ ಸಾವಿನ ಸಂಖ್ಯೆ ವಿಪರೀತವಾಗಿದೆ. ಗಾಜಾದಲ್ಲಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ನಾಗರಿಕರ ಸಾವು ತಡೆಗಟ್ಟಲು ಸದ್ಯಕ್ಕಿರುವ ಕದನವಿರಾಮವನ್ನು ವಿಸ್ತರಿಸುವ ಅಗತ್ಯವಿದೆ ಎಂದಿದ್ದಾರೆ.
ಇತ್ತ ಇಸ್ರೇಲ್ ಕೂಡ ಬಿಡುಗಡೆಯಾಗಬೇಕಿರುವ ಒತ್ತೆಯಾಳುಗಳ ಪಟ್ಟಿಯೂ ತಯಾರಾಗುತ್ತಿರುವ ಹಿನ್ನೆಲೆ ಈ ಎಲ್ಲರೂ ಸುರಕ್ಷಿತವಾಗಿ ದೇಶಕ್ಕೆ ಮರಳುವವರೆಗೆ ಕದನವಿರಾಮ ವಿಸ್ತರಿಸುವುದು ಔಚಿತ್ಯವೆಂದು ಯೋಚಿಸುತ್ತಿದೆ ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಜೋರ್ಡನ್ ವಿದೇಶಾಂಗ ಸಚಿವರು ಕೂಡ ಇದೇ ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.