ಮತ್ತೆ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್
Team Udayavani, Jun 16, 2021, 8:33 AM IST
ಜೆರುಸಲೇಂ: ಕದನ ವಿರಾಮದಿಂದ ಕೆಲವು ದಿನಗಳ ಕಾಲ ಶಾಂತವಾಗಿದ್ದ ಇಸ್ರೇಲ್-ಗಾಜಾದಲ್ಲಿ ಇದೀಗ ಮತ್ತೆ ಯುದ್ದ ವಿಮಾನ ಹಾರಾಡಿದೆ. ಗಾಜಾದಲ್ಲಿನ ಪ್ಯಾಲೆಸ್ತೀನಿಯರು ಬೆಂಕಿ ಹಚ್ಚುವ ಬಲೂನುಗಳನ್ನು ಹಾರಿಸಿದ ಬಳಿಕ ಇಸ್ರೇಲ್ ಕೂಡಾ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿದೆ.
ಮೇ 21ರಂದು ನಡೆದ ಕದನ ವಿರಾಮ ಒಪ್ಪಂದ ಬಳಿಕ ನಡೆದ ಮೊದಲ ದೊಡ್ಡ ದಾಳಿ ಇದಾಗಿದೆ. ಮೇ ತಿಂಗಳಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯರ ನಡುವೆ 11 ದಿನಗಳ ಕಾಳಗ ನಡೆದಿತ್ತು. ಇದರಲ್ಲಿ 260 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದರೆ, 13 ಮಂದಿ ಇಸ್ರೇಲ್ ಜನರು ಸಾವನ್ನಪ್ಪಿದ್ದರು.
ಇದನ್ನೂ ಓದಿ:ವಿದೇಶಕ್ಕೆ ತೆರಳುವವರಿಗೆ ಈ ದಾಖಲೆಗಳನ್ನು ನೀಡಿದರೆ 28 ದಿನಕ್ಕೆ 2ನೇ ಡೋಸ್ ಲಸಿಕೆ
ಪ್ಯಾಲೇಸ್ತೀನಿಯನ್ ಮೂಲಗಳ ಪ್ರಕಾರ, ಇಸ್ರೇಲ್ ನ ವಾಯುಪಡೆಯು ದಕ್ಷಿಣ ಗಾಜಾ ನಗರವಾದ ಖಾನ್ ಯೂನೆಸ್ ನ ಪೂರ್ವಕ್ಕೆ ಕನಿಷ್ಠ ಒಂದು ತಾಣವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್, ಗಾಜಾ ಪಟ್ಟಿಯಿಂದ ಸ್ಫೋಟಕಗಳಿರುವ ಬಲೂನ್ ಹಾರಾಡಿದ ಪರಿಣಾಮ ಪ್ರತಿಯಾಗಿ, ಖಾನ್ ಯೂನೆಸ್ ನಲ್ಲಿನ ಭಯೋತ್ಪಾದಕರಿಗೆ ಸೌಲಭ್ಯಗಳು ಒದಗಿಸುವ ಮತ್ತು ಸಭೆಗಳನ್ನು ನಡೆಸುವ ಸ್ಥಳಗಳನ್ನು ಗುರಿಯಾಗಿಸಲಾಗಿದೆ ಎಂದು ಹೇಳಿದೆ.
ಇಸ್ರೇಲ್ ನಲ್ಲಿ ನೆತನ್ಯಾಹು ಸರಕಾರ ಉರುಳಿ ಹೊಸ ಸರ್ಕಾರ ಬಂದ ಕೂಡಲೇ ಈ ದಾಳಿಯಾಗಿದೆ. ಕೆಲ ದಿನಗಳ ಹಿಂದಷ್ಟೇ 12 ವರ್ಷಗಳ ಬೆಂಜಮಿನ್ ನೆತನ್ಯಾಹು ಅವರ ಅಧಿಕಾರ ಕೊನೆಗೊಂಡಿತ್ತು. ಇದೀಗ ಬಹುಮೈತ್ರಿ ಕೂಟ ಸರ್ಕಾರ ಅಸ್ತಿತ್ವದಲ್ಲಿದ್ದು, ನೆಫ್ಟಾಲಿ ಬೆನ್ನೆಟ್ ನೇತೃತ್ವವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.