ಇಸ್ರೇಲ್‌ಗೆ Syria ಕಡೆಯಿಂದ ರಾಕೆಟ್ ದಾಳಿ; ಇದೇ ಮೊದಲ ಬಾರಿಗೆ ಇಂಥ ಬೆಳವಣಿಗೆ
ಪ್ರತ್ಯೇಕತಾವಾದಿ ಸಂಘಟನೆ ಅಲ್-ಕುಡ್ಸ್ ಬ್ರಿಗೇಡ್‌ನ ಕೃತ್ಯ
Team Udayavani, Apr 10, 2023, 7:40 AM IST
ಜೆರೂಸಲೇಂ:ಸೇನೆಯನ್ನು ಗುರಿಯಾಗಿಸಿ ಸಿರಿಯಾ ಕಡೆಯಿಂದ ನಡೆಸಲಾಗಿದ್ದ ಆರು ರಾಕೆಟ್ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲಾಗಿದೆ ಎಂದು ಇಸ್ರೇಲ್ ಸೇನೆ ಭಾನುವಾರ ಹೇಳಿದೆ.
ಇದೇ ಮೊದಲ ಬಾರಿಗೆ ಇಂಥ ದಾಳಿ ನಡೆದಿದೆ. ಒಟ್ಟು ಎರಡು ಹಂತದಲ್ಲಿ ತಲಾ ಮೂರು ರಾಕೆಟ್‌ಗಳು ನುಗ್ಗಿ ಬಂದಿವೆ. ಈ ದಾಳಿಯಿಂದ ಯಾವುದೇ ಸಾವು ನೋವು ಉಂಟಾಗಿಲ್ಲ. ಇದಾದ ಕೆಲವೇ ಗಂಟೆಗಳಲ್ಲಿ ಸಿರಿಯಾ ಸೇನೆಯನ್ನು ಗುರಿಯಾಗಿಸಿಕೊಂಡು ಫಿರಂಗಿ ದಾಳಿ ನಡೆಸಲಾಗಿದೆ.
ಗಾಜಾ, ಲೆಬನಾನ್‌ಗಳಲ್ಲಿ ಕಳೆದ ಕೆಲದಿನಗಳಿಂದ ಉಂಟಾಗಿರುವ ಸಂಘರ್ಷ ಬಿಗಡಾಯಿಸಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಶನಿವಾರ ಸಿರಿಯಾ ಕಡೆಯಿಂದ ನಡೆಸಲಾಗಿದ್ದ ಮೊದಲ ಹಂತದಲ್ಲಿ ಒಂದು ರಾಕೆಟ್ ಇಸ್ರೇಲ್ ನಿಯಂತ್ರಣ ಇರುವ ಗೋಲನ್ ಹೈಟ್ಸ್ ಎಂಬ ಸ್ಥಳದಲ್ಲಿ ಬಿದ್ದಿದೆ. ಮತ್ತೊಂದನ್ನು ಮಧ್ಯದಲ್ಲೇ ಛೇದಿಸಲಾಗಿತ್ತು. ಹೀಗಾಗಿ, ಅದು ಸಿರಿಯಾ ಗಡಿಗೆ ಹೊಂದಿಕೊಂಡು ಇರುವ ಜೋರ್ಡನ್‌ನ ನೆಲದಲ್ಲಿ ಬಿದ್ದಿದೆ.
ಡಮಾಸ್ಕಸ್ ಮೂಲದ ಪ್ಯಾಲೆಸ್ತೀನಿ ಪ್ರತ್ಯೇಕತಾವಾದಿ ಸಂಘಟನೆ ಅಲ್-ಕುಡ್ಸ್ ಬ್ರಿಗೇಡ್ ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
Delhi: ಆಮ್ ಆದ್ಮಿಯ ಮಾಜಿ ಶಾಸಕ ಸುಖ್ಬೀರ್ ದಲಾಲ್ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.