Syria ವೆಸ್ಟ್‌ಬ್ಯಾಂಕ್‌ನಲ್ಲೂ ಇಸ್ರೇಲ್ ಮಾರಕ ಪ್ರಹಾರ
Team Udayavani, Oct 23, 2023, 6:15 AM IST
ರಾಫಾ/ಹೊಸದಿಲ್ಲಿ: ಗಾಜಾ ಪಟ್ಟಿಗೆ ಪರಿಹಾರ ಸಾಮಗ್ರಿಗಳು ಪ್ರವೇಶಿಸಿರುವಂತೆಯೇ ಹಮಾಸ್ ಉಗ್ರರನ್ನು ನಿರ್ದಯೆಯಿಂದ ದಮನ ಗೊಳಿಸುವ ಕಾರ್ಯಾಚರಣೆಯನ್ನು ಇಸ್ರೇಲ್ ಮುಂದುವರಿಸಿದೆ.
ಗಾಜಾ ಪಟ್ಟಿಯ ರಾಫಾ ಮತ್ತು ಖಾನ್ ಯೂನಿಸ್ ನಗರಗಳ ಮೇಲೆ ನಿರಂತರ ವಾಗಿ ದಾಳಿ ನಡೆಸಲಾಗಿದೆ. ಸಿರಿಯಾ ಮತ್ತು ಲೆಬನಾನ್‌ನ ವಿಮಾನ ನಿಲ್ದಾಣಗಳ ಮೇಲೂ ಇಸ್ರೇಲ್ ವಾಯುದಾಳಿ ನಡೆಸಿದ್ದು, ಡಮಾಸ್ಕಸ್ ಮತ್ತು ಅಲೆಪ್ಪೋ ವಿಮಾನ ನಿಲ್ದಾಣಗಳಿಂದ ವಿಮಾನ ಸಂಚಾರ ಸ್ಥಗಿತಗೊಂಡಿದೆ ಎನ್ನಲಾಗಿದೆ.
ಸಿರಿಯಾದ ಡಮಾಸ್ಕಸ್, ಅಲೆಪ್ಪೋ ವಿಮಾನ ನಿಲ್ದಾಣಗಳ ಮೇಲೆಯೂ ಇಸ್ರೇಲ್‌ನ ಕ್ಷಿಪಣಿಗಳು ಎರಗಿವೆ. ಹೀಗಾಗಿ ವಿಮಾನ ಯಾನಗಳಲ್ಲಿ ವ್ಯತ್ಯಯ ಉಂಟಾಗಿದೆ. ವೆಸ್ಟ್‌ಬ್ಯಾಂಕ್‌ನ ಜೆನಿನ್ ನಗರದ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ರಭಸಕ್ಕೆ ಹಲವಾರು ಕಟ್ಟಡಗಳು ಧರಾಶಾಯಿಯಾಗಿವೆ.
ಶನಿವಾರ ರಾತ್ರಿ ಗಾಜಾ ಪಟ್ಟಿಯ ಮೇಲೆ ನಡೆಸಲಾಗಿದ್ದ ದಾಳಿಯಲ್ಲಿ ಹಲವಾರು ಹಮಾಸ್ ಉಗ್ರರು ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ ಸಂಘಟನೆಯ ಡೆಪ್ಯುಟಿ ಕಮಾಂಡರ್ ಸೇರಿದ್ದಾನೆ.
ದಕ್ಷಿಣಕ್ಕೆ ತೆರಳುವಂತೆ ಎಚ್ಚರಿಕೆ
ಗಾಜಾ ಪಟ್ಟಿಯಲ್ಲಿ ದಾಳಿ ನಡೆಸುವುದಕ್ಕೆ ಮುನ್ನ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಿದ ಇಸ್ರೇಲ್ ಸೇನಾಪಡೆ, ದಕ್ಷಿಣಕ್ಕೆ ಕಡ್ಡಾಯವಾಗಿ ತೆರಳಲೇಬೇಕು. ಇಲ್ಲದಿದ್ದರೆ ಸ್ಥಳೀಯರನ್ನೂ ಉಗ್ರರೆಂದು ಪರಿಗಣಿಸಬೇಕಾಗುತ್ತದೆ ಎಂದು ತಾಕೀತು ಮಾಡಿದೆ.
ಪರಿಣಾಮ ಗಂಭೀರ
ಲೆಬನಾನ್‌ನ ಹೆಜ್ಬುಲ್ಲಾ ಉಗ್ರ ಸಂಘಟನೆ ಯುದ್ಧಕ್ಕೆ ಇಳಿದರೆ ಪರಿಣಾಮ ಭೀಕರವಾಗಬಹುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.
ಒತ್ತೆಯಾಳುಗಳ ಸಂಖ್ಯೆ ಹೆಚ್ಚಳ
ಉಗ್ರರ ಜತೆಗೆ ಕಾಳಗ ಮುಂದುವರಿದಿರುವಂತೆಯೇ ಹಮಾಸ್ ಉಗ್ರರ ಬಳಿ ಇರುವ ಒತ್ತೆಯಾಳುಗಳ ಸಂಖ್ಯೆ 212ನ್ನು ಮೀರಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಅ. 7ರಿಂದ ಈಚೆಗೆ ಇಸ್ರೇಲ್‌ನಲ್ಲಿ 5,400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 7,400ಕ್ಕೂ ಅಧಿಕ ರಾಕೆಟ್‌ಗಳನ್ನು ಉಡಾಯಿಸಲಾಗಿದೆ.
ಮುಂದುವರಿದ ನೆರವು
ಕಾಳಗ ಮುಂದುವರಿದಿರುವಂತೆಯೇ ರಾಫಾ ಗಡಿ ಮೂಲಕ ಅಗತ್ಯವಾಗಿರುವ ನೆರವಿನ ವಸ್ತುಗಳನ್ನು ಹೊತ್ತಿರುವ ಬೃಹತ್ ಟ್ರಕ್‌ಗಳು ಗಾಜಾ ಪಟ್ಟಿಯನ್ನು ಪ್ರವೇಶಿಸಿವೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ಯಾಲೆಸ್ತೀನ್‌ಗೆ ಮಾನವೀಯ ನೆರವು ರವಾನೆ
ಪ್ಯಾಲೆಸ್ತೀನ್‌ಗೆ ಭಾರತದಿಂದ ಕಳುಹಿಸಲಾಗಿರುವ ಮಾನವೀಯ ನೆರವು ಈಜಿಪ್ಟ್ ತಲುಪಿದೆ. 6.5 ಟನ್ ವೈದ್ಯಕೀಯ ಪರಿಹಾರ ಸಾಮಗ್ರಿಗಳು, 32 ಟನ್ ವಿಪತ್ತು ನಿರ್ವಹಣ ಸಾಮಗ್ರಿಗಳನ್ನು ಭಾರತೀಯ ವಾಯುಪಡೆಯ ಸಿ-17 ಸರಕು ಸಾಗಣೆ ವಿಮಾನದಲ್ಲಿ ಈಜಿಪ್ಟ್ನ ಅಲ್-ಏರಿಷ್ ವಿಮಾನ ನಿಲ್ದಾಣಕ್ಕೆ ರವಾನಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಚಿ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿಯವರು ಪ್ಯಾಲೆಸ್ತೀನ್ ಅಧ್ಯಕ್ಷ ಮೆಹಮೂದ್ ಅಬ್ಟಾಸ್ ಜತೆ ಮಾತನಾಡಿದ್ದ ವೇಳೆ ನೆರವು ನೀಡುವ ಬಗ್ಗೆ ವಾಗ್ಧಾನ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.