ಸಾರ್ವಜನಿಕ ಸ್ಥಳದಲ್ಲಿ ಇಸ್ರೇಲಿ ಪ್ರಧಾನಿ ಹೋಲುವ ಬೆತ್ತಲೆ ಪ್ರತಿಮೆ ಸ್ಥಾಪನೆ
ಇಸ್ರೇಲಿನ ಪ್ರಮುಖ ನಗರ ಟೆಲ್ ಅವೀವ್ಸ್ ಹಬೀಮಾನಲ್ಲಿ ಈ ಪ್ರತಿಮೆ ಸ್ಥಾಪಿಸಲಾಗಿದೆ.
Team Udayavani, Mar 18, 2021, 6:15 PM IST
ಇಸ್ರೇಲ್ : ಚುನಾವಣೆ ಎದುರು ನೋಡುತ್ತಿರುವ ಇಸ್ರೇಲಿನಲ್ಲಿ ಅಚ್ಚರಿಕರ ಪ್ರಸಂಗವೊಂದು ನಡೆದಿದೆ. ಅಲ್ಲಿಯ ಪ್ರಧಾನಿ ಅವರನ್ನು ಹೋಲುವ ಕಂಚಿನ ಪ್ರತಿಮೆಯೊಂದು ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿದೆ.
ಇದು ಸಾಮಾನ್ಯ ಪ್ರತಿಮೆಯಾಗಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರಲಿಲ್ಲ. ಆದರೆ, ಇದು ಬೆತ್ತಲೆಯ ಪ್ರತಿಮೆಯಾಗಿದೆ. ಇದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹೋಲುವಂತಿದೆ. ಮಾರ್ಚ್ 23 ರಂದು ಇಸ್ರೇಲ್‍ನಲ್ಲಿ ಚುನಾವಣೆ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿಯ ಬೆತ್ತಲೆ ಪ್ರತಿಮೆ ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸಿರುವುದು ರಾಜಕೀಯ ವಯಲದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಇಸ್ರೇಲಿನ ಪ್ರಮುಖ ನಗರ ಟೆಲ್ ಅವೀವ್ಸ್ ಹಬೀಮಾನಲ್ಲಿ ಈ ಪ್ರತಿಮೆ ಸ್ಥಾಪಿಸಲಾಗಿದೆ. ಮೂಲೆಯೊಂದರಲ್ಲಿ ವಿವಸ್ತ್ರಗೊಂಡಿದ್ದ ವ್ಯಕ್ತಿ ಬಚ್ಚಿಟ್ಟುಕೊಂಡಿರುವ ರೀತಿಯಲ್ಲಿ ಈ ಪ್ರತಿಮೆ ಸಿದ್ಧಪಡಿಸಲಾಗಿದೆ. ಈ ಪ್ರತಿಮೆ ಸಂಚಲನ ಮೂಡಿಸುತ್ತಿದೆ. ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸಿಬ್ಬಂದಿಗಳು ಪ್ರತಿಮೆ ಇದ್ದ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ಅಲ್ಲಿಂದ ಪ್ರತಿಮೆ ತೆರವುಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಇನ್ನು ಕಳೆದ 14 ವರ್ಷಗಳಿಂದ ಇಸ್ರೇಲ್ ಪ್ರಧಾನಿಯಾಗಿ ಬೆಂಜಮಿನ್ ನೆತನ್ಯಾಹು ಅಧಿಕಾರ ಚಲಾಯಿಸುತ್ತ ಬಂದಿದ್ದಾರೆ. ಅತೀ ದೀರ್ಘಾವಧಿ ಪ್ರಧಾನಿ ಹುದ್ದೆ ಅಲಂಕರಿಸಿದ ಖ್ಯಾತಿಗೆ ನೆತನ್ಯಾಹೂ ಪಾತ್ರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
MUST WATCH
ಹೊಸ ಸೇರ್ಪಡೆ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.