ಇಸ್ರೇಲ್‌ ಪ್ರಧಾನಿಗೆ ನಿಜದ ಸವಾಲು:ಸಂಪ್ರದಾಯವಾದಿಗಳು ಏರಿಗೆಳೆದರೆ ಸರಕಾರ ನೀರಿಗೆ

Team Udayavani, Apr 1, 2020, 6:10 PM IST

ಇಸ್ರೇಲ್‌ ಪ್ರಧಾನಿಗೆ ನಿಜದ ಸವಾಲು:ಸಂಪ್ರದಾಯವಾದಿಗಳು ಏರಿಗೆಳೆದರೆ ಸರಕಾರ ನೀರಿಗೆ

ಇಸ್ರೇಲ್‌: ಸರಕಾರ ಮತ್ತು ಪ್ರಜೆಗಳ ನಡುವೆ ಹೊಂದಾಣಿಕೆ ಇಲ್ಲದೇ ಇದ್ದರೆ ಸಂಕಷ್ಟದ ಸಮಯದಲ್ಲಿ ಅಪಾಯ ಕಾದದ್ದೇ.

ಸರಕಾರ ನಿಯಮಗಳನ್ನು ರೂಪಿಸುತ್ತದೆ, ಆದರೆ ಪಾಲಿಸುವ ಪ್ರಜೆಗಳಿಲ್ಲ ಎಂದ ಮೇಲೆ ಅದು ನೀರ ಮೇಲಿನ ಹೋಮ. ಈಗ ಅಂತಹದ್ದೇ ಸನ್ನಿವೇಶ ಇಸ್ರೇಲ್‌ ನದ್ದು.

ಕೋವಿಡ್ 19 ವೈರಸ್‌ ಇಸ್ರೇಲ್‌ನಲ್ಲೂ ತನ್ನ ಬಾಹುವನ್ನು ವಿಸ್ತರಿಸುತ್ತಿದೆ. ಆದರೆ ಸರಕಾರದ ಸೂಚನೆಗಳನ್ನು ಅಲ್ಲಿನ ಕಟ್ಟಾ ಸಂಪ್ರದಾಯವಾದಿಗಳು ಪಾಲಿಸುತ್ತಿಲ್ಲ. ಇದು ಕೋವಿಡ್ 19 ರೋಗ ವ್ಯಾಪಕವಾಗಿ ಹರಡುವ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ. ಹಾಗೆಂದು ಇಸ್ರೇಲ್‌ ಸರಕಾರ ಕೈ ಕಟ್ಟಿ ಕುಳಿತಿಲ್ಲ. ಕೋವಿಡ್ 19 ನಿಯಂತ್ರಿಸಲು ಪಣ ತೊಟ್ಟು ನಿಂತಿದೆ. ಅದರೆ ಸರಕಾರದ ಪ್ರಯತ್ನ ಹಾಗೂ ಪರಿಶ್ರಮವನ್ನು ಸಂಪ್ರದಾಯ ವಾದಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ. ಹಾಗಾಗಿ ನಿಯಮ ಪಾಲಿಸದಿರುವುದರಿಂದ ಪ್ರಯತ್ನವೆಲ್ಲವೂ ವಿಫ‌ಲ ವಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದೆ ನ್ಯೂಯಾರ್ಕ್‌ ಟೈಮ್ಸ್‌ ವರದಿ.

ನಾಲ್ಕು ಪಟ್ಟು ವೇಗ
ಈ ಸಂಪ್ರದಾಯವಾದಿ ಸಮುದಾಯಗಳಲ್ಲಿ ಈ ವೈರಸ್‌ ಇಸ್ರೇಲ್‌ನ ಬೇರೆಡೆಗಳಿಗಿಂತ ನಾಲ್ಕರಿಂದ ಎಂಟು ಪಟ್ಟು ವೇಗವಾಗಿ ಹರಡುತ್ತಿದೆಯಂತೆ. ಆತಂಕದ ಸಂಗತಿಯೆಂದರೆ ಇಸ್ರೇಲ್‌ನ ರಾಜಧಾನಿ ಟೆಲ್‌ ಅವೀವ್‌ ನಗರದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ. 95ರಷ್ಟು ಮಂದಿ ಈ ಕಟ್ಟಾ ಸಂಪ್ರದಾಯವಾದಿಗಳು. ಅಲ್ಲಿಗೆ ಅಪಾಯದ ತೀವ್ರತೆಯನ್ನು ಅರ್ಥ ಮಾಡಿಕೊಳ್ಳಿ. ಕಳೆದ ಮೂರು ದಿನಗಳಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ. ಶುಕ್ರವಾರ 267 ಪ್ರಕರಣಗಳಿದ್ದರೆ, ಸೋಮವಾರ
508ಕ್ಕೆ ಏರಿದೆ.

ಶೇ. 12ರಷ್ಟು ಕಟ್ಟಾ ಸಂಪ್ರದಾಯವಾದಿಗಳು
ಇಸ್ರೇಲ್‌ನ ಜನಸಂಖ್ಯೆಯಲ್ಲಿ ಈ ಸಂಪ್ರದಾಯವಾದಿಗಳ ಪಾಲು
ಶೇ. 12. ಆದರೆ ಅಲ್ಲಿನ 4 ಪ್ರಮುಖ ಆಸ್ಪತ್ರೆಗಳಲ್ಲಿರುವ ಕೋವಿಡ್ 19 ಸೋಂಕಿತರಲ್ಲಿ ಶೇ. 40ರಿಂದ ಶೇ. 60ರಷ್ಟು ಮಂದಿ ಈ ಸಂಪ್ರದಾ ಯವಾದಿಗಳೇ.

ಇಸ್ರೇಲ್‌ನಲ್ಲಿ ಈಗಾಗಲೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ. ಅಗತ್ಯ ಸೇವೆಗಳ ಹೊರತಾಗಿ ಜನರು ಮನೆಯಲ್ಲೇ ಇರಬೇಕಿದೆ. ಪ್ರಾರ್ಥನೆ ಸೇರಿದಂತೆ ಗುಂಪು ಸೇರುವುದು, ಸಭೆ ಮಾಡುವುದನ್ನು ನಿಷೇಧಿಸಲಾಗಿದೆ.
ಆದರೆ ಈ ಸಂಪ್ರದಾಯವಾದಿಗಳು, ಪ್ರಾರ್ಥನೆ ಮಾಡುವುದು, ಅಂತ್ಯಕ್ರಿಯೆಗಳು, ವಿವಾಹಗಳಂತಹ ಸಂಪ್ರದಾಯವನ್ನು ಯಾವುದೇ ನಿರ್ಬಂಧವನ್ನು ಲೆಕ್ಕಿಸದೇ ಅನುಸರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ಇಂಥದೊಂದು ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗವಹಿಸಿದ್ದು ಸ್ಥಳೀಯರ ಟೀಕೆಗೆ ಗುರಿಯಾಗಿತ್ತು.

ನಗರದ ಏಕೈಕ ಆಸ್ಪತ್ರೆಯ ಮಹಾನಿರ್ದೇಶಕ ಡಾ| ಮೋತಿ ರಾವಿಡ್‌ ಅವರು ನಿವಾಸಿಗಳನ್ನು ಸಮುದಾಯದಿಂದ ಕನಿಷ್ಠ ಒಂದು ವಾರದವರೆಗೆ ಹೊರಹೋಗದಂತೆ ಮನವಿ ಮಾಡಿದ್ದಾರೆ.

ಇಂತಹ ಪ್ರಸಂಗಳು ಎದುರಾದರೆ ತಡೆಯುವಂತೆ ಅಧಿಕಾರಿಗಳಿಗೂ ಮನವಿ ಮಾಡಿದ್ದಾರೆ.

ಈ ಕಟ್ಟಾ ಸಂಪ್ರದಾಯವಾದಿಗಳು ನೆಲೆಸಿರುವ ಪ್ರದೇಶದಲ್ಲಿ ಮಕ್ಕಳೇ ಹೆಚ್ಚು. ಬಳಿಕ ವೃದ್ಧರು. ಯುವಜನರ ಸಂಖ್ಯೆ ಕಡಿಮೆ. ಸೋಂಕು ಒಂದುವೇಳೆ ಕಾಳಿYಚ್ಚಿನಂತೆ ಹರಡಿಕೊಂಡರೆ ವೃದ್ಧರು ಸೇರಿದಂತೆ ಹಲವರು ಸಾಯಬಹುದು. ಈ ಆತಂಕ ಎಲ್ಲರನ್ನೂ ಕಾಡುತ್ತಿದೆ.

ಒಟ್ಟಾರೆಯಾಗಿ ಇಸ್ರೇಲ್‌ ನಲ್ಲಿ ಕೋವಿಡ್ 19 ಮಣಿಸಲು ಕಟ್ಟಾ ಸಂಪ್ರದಾಯವಾದಿಗಳನ್ನು ಒಪ್ಪಿಸಲೇಬೇಕಾದ ಸಂದರ್ಭ ಸೃಷ್ಟಿಯಾಗಿದೆ.

ಈ ಒಪ್ಪಿಸುವುದರೊಳಗೆ ಅಪಾಯ ಒಳಗೆ ಬಂದು ಕುಳಿತುಕೊಳ್ಳುತ್ತದೋ ಎಂಬ ಆತಂಕ ಪ್ರಧಾನಿಯದ್ದಾಗಿದೆ ಎಂದು ವರದಿಯಲ್ಲಿ ಅಭಿಪ್ರಾಯಿಸಲಾಗಿದೆ.

ಟಾಪ್ ನ್ಯೂಸ್

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

Kazakhstan: ಅಜೆರ್ಬೈಜಾನ್‌ ಏರ್‌ ಲೈನ್ಸ್‌ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?

Kazakhstan: ಅಜೆರ್ಬೈಜಾನ್‌ ಏರ್‌ ಲೈನ್ಸ್‌ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kasaragod: ಟ್ಯಾಂಕರ್‌ ಲಾರಿಯಿಂದ ರಸ್ತೆಗೆ ಹರಿದ ಎಣ್ಣೆ

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Untitled-1

Kasaragod Crime News: ಬೈಕ್‌ ಕಳವು; ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.