ಚಂದ್ರನಲ್ಲಿ ಮಂಜಿನಂತೆ ನೀರು : ಇಸ್ರೋ ನಡೆಸಿದ್ದ ಸಂಶೋಧನೆಯ ಫಲ
Team Udayavani, Aug 22, 2018, 9:43 AM IST
ವಾಷಿಂಗ್ಟನ್: ಚಂದ್ರನಲ್ಲಿ ಹೆಪ್ಪುಗಟ್ಟಿದ ರೀತಿಯಲ್ಲಿ ನೀರಿದೆ ಎಂದು ಚಂದ್ರಯಾನ-1 ನೀಡಿದ ಮಾಹಿತಿಯ ಅನ್ವಯ ನಾಸಾ ಖಚಿತಪಡಿಸಿದೆ.
ಚಂದ್ರನ ಕಗ್ಗತ್ತಲ ಮತ್ತು ಅತಿ ಶೀತ ಪ್ರದೇಶದಲ್ಲಿ ಮಂಜಿನಂತೆ ನೀರಿದೆ ಎಂದು ಅದು ಹೇಳಿದೆ. ಚಂದ್ರನ ಮೇಲ್ಮೆ„ನ ಕೆಲವೇ ಮಿಲಿಮೀಟರ್‌ಗಳ ಕೆಳಗೆ ನೀರಿದೆ. ಇದನ್ನು ಬಳಕೆ ಯೋಗ್ಯ ಮಾಡಿಕೊಳ್ಳಬಹುದಾಗಿದ್ದು, ಮುಂದಿನ ದಿನಗಳಲ್ಲಿ ಚಂದ್ರನಲ್ಲಿ ಉಳಿಯುವ ಸಂದರ್ಭ ಒದಗಿಬಂದರೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.
ದಕ್ಷಿಣ ಧ್ರುವದಲ್ಲಿರುವ ಕುಳಿಗಳಲ್ಲಿ ನೀರು ಶೇಖರಣೆಯಾಗಿದ್ದರೆ, ಉತ್ತರ ಧ್ರುವದಲ್ಲಿ ವಿಸ್ತಾರವಾಗಿ ಹರಡಿಕೊಂಡಿದೆ ಎಂದು ಪಿಎನ್‌ಎಎಸ್ ಜರ್ನಲ್‌ನಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ. ಇದನ್ನು ಚಂದ್ರಯಾನ-1ರಲ್ಲಿದ್ದ ನಾಸಾದ ಮೂನ್ ಮಿನಿರಾಲಜಿ ಮ್ಯಾಪರ್(ಎಂ3) ಎಂಬ ಸಾಧನ ಬಳಸಿಕೊಂಡು ಪತ್ತೆ ಮಾಡಲಾಗಿದೆ.
ಇಸ್ರೋ ಸಂಸ್ಥೆಯು 2008ರಲ್ಲಿ ಚಂದ್ರಯಾನ-1 ಯೋಜನೆ ಕೈಗೆತ್ತಿಕೊಂಡಿದ್ದು, 2009ರಲ್ಲಿ ಇದು ಸಂಪರ್ಕ ಕಳೆದುಕೊಂಡಿತ್ತು. ಆದರೆ, 2016ರಲ್ಲಿ ನಾಸಾದ ರಾಡಾರ್ ವ್ಯವಸ್ಥೆ ಮೂಲಕ ಚಂದ್ರಯಾನ -1 ಬಾಹ್ಯಾಕಾಶ ನೌಕೆಯನ್ನು ಪತ್ತೆ ಹಚ್ಚಲಾಗಿತ್ತು. ಅಲ್ಲದೆ ಇದು ಚಂದ್ರನ ಪರಿಧಿಯಲ್ಲೇ ಇನ್ನೂ ಕಾರ್ಯನಿರ್ವಹಿಸುತ್ತಿದ್ದುದನ್ನು ಪತ್ತೆ ಹಚ್ಚಿದ್ದ ನಾಸಾ, ಇದರಿಂದಲೇ ಮುಂದಿನ ಮೂರು ತಿಂಗಳ ಕಾಲ ಮಹತ್ವದ ಮಾಹಿತಿ ಪಡೆದಿದೆ. ವಿಶೇಷವೆಂದರೆ, ಸಂಪರ್ಕ ಕಳೆದುಕೊಳ್ಳುವ ಹೊತ್ತಿಗಾಗಲೇ ಯೋಜನೆಯ ಉದ್ದೇಶ ಸಾಫಲ್ಯಗೊಂಡಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.