ಆಗಸದಲ್ಲಿ ತೆರೆದುಕೊಂಡ ವಿಮಾನದ ಬಾಗಿಲು: ಚಿನ್ನ, ವಜ್ರದ ಸುರಿಮಳೆ
Team Udayavani, Mar 16, 2018, 6:01 PM IST
ಮಾಸ್ಕೋ : ರಶ್ಯದ ಯಾಕುತ್ಸ್ಕ್ ವಿಮಾನ ನಿಲ್ದಾಣದಿಂದ ಸರಕು ಸಾಗಣೆ ವಿಮಾನವೊಂದು ಟೇಕಾಫ್ ಆದ ಸ್ವಲ್ಪ ಹೊತ್ತಿನ ಬಳಿಕ ಅದರ ಬಾಗಿಲು ಆಕಸ್ಮಿಕವಾಗಿ ತೆರೆದುಕೊಂಡ ಪರಿಣಾಮವಾಗಿ ಅದರೊಳಗಿದ್ದ ಹತ್ತು ಟನ್ ಚಿನ್ನ, ಪ್ಲಾಟಿನಂ ಮತ್ತು ವಜ್ರಗಳು ರನ್ವೇ ಮತ್ತು ಆಸುಪಾಸಿನ 26 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಚೆಲ್ಲಾಪಿಲ್ಲಿಯಾಗಿ ಉದುರಿ ಹರಡಿಕೊಂಡು ಬಿದ್ದ ಘಟನೆ ವರದಿಯಾಗಿದೆ. ಇವುಗಳ ಮೌಲ್ಯ 2,6369 ಕೋಟಿ ರೂ.ಗಳೆಂದು (ಅಥವಾ 365 ದಶಲಕ್ಷ ಡಾಲರ್) ಅಂದಾಜಿಸಲಾಗಿದೆ.
ನಿಂಬಸ್ ಏರ್ ಲೈನ್ಸ್ ಎಎನ್ -12 ಸರಕು ಸಾಗಣೆ ವಿಮಾನ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಅದರಲ್ಲಿ ತಾಂತ್ರಿಕ ದೋಷ ಕಂಡು ಬಂತು. ಪರಿಣಾಮವಾಗಿ ಅದರ ಬಾಗಿಲು ತೆರೆದುಕೊಂಡು ಅದರೊಳಗಿದ್ದ 10 ಟನ್ ಚಿನ್ನ, ಪ್ಲಾಟಿನಂ, ವಜ್ರದ ಸರಕುಗಳು ಆಗಸದಿಂದ ಬೀಳುವಾಗ ಚಿನ್ನ, ವಜ್ರಗಳ ಸುರಿ ಮಳೆ ಆಗುತ್ತಿರುವಂತೆ ತೋರಿಬಂತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕೂಡಲೇ ಅದನ್ನು ಸುರಕ್ಷಿತವಾಗಿ ಸಮೀಪದ ಮಗಾನ್ ವಿಮಾನ ನಿಲ್ದಾಣದಲ್ಲಿ ಇಳಿಸಲು ವಿಮಾನದ ಪೈಲಟ್ ನಿರ್ಧರಿಸಿದ. ಆ ಸಂದರ್ಭದಲ್ಲಿ ತೆರೆದುಕೊಂಡ ವಿಮಾನದ ಬಾಗಿಲಿನಿಂದ ಹೊರ ಚೆಲ್ಲಿ ಹೋದ ಚಿನ್ನ, ವಜ್ರ, ಪ್ಲಾಟಿನಂ ಗಳು ರನ್ವೇ ಮತ್ತು ಆಸುಪಾಸಿನ ಸುಮಾರು 26 ಕಿ.ಮೀ. ಫಾಸಲೆಯಲ್ಲಿ ಹರಡಿಕೊಂಡು ಬಿದ್ದವು.
ಈ ಘಟನೆಯನ್ನು ಅನುಸರಿಸಿ ರನ್ವೇಯನ್ನು ಮುಚ್ಚಲಾಯಿತು. ಪೊಲೀಸರು ಮತ್ತು ರಹಸ್ಯ ಸೇವಾ ದಳದ ಸಿಬಂದಿಗಳು ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡರು.
ಈ ವಿಮಾನದಲ್ಲಿ ವಜ್ರ, ಚಿನ್ನ, ಪ್ಲಾಟಿನಂ ತುಂಬಿದ್ದ ಸರಕು ಚುಕೋತಾ ಮೈನಿಂಗ್ ಆ್ಯಂಡ್ ಜಿಯೋಲಾಜಿಕಲ್ ಕಂಪೆನಿಗೆ ಸೇರಿದ್ದಾಗಿದೆ. ಈ ಕಂಪೆನಿಯಲ್ಲಿ ಕೆನಡದ ಕಿನ್ರೋಸ್ ಗೋಲ್ಡ್ ಕಂಪೆನಿಗೆ ದೊಡ್ಡ ಮಟ್ಟದ ಹಿತಾಸಕ್ತಿ ಇದೆ.
ವಿಮಾನವು ಕ್ರಾಸ್ನೋಯಾರ್ಸ್ಕ್ ಮಾರ್ಗವಾಗಿ ಕುಪೋಲ್ (ಡೋಮ್) ಗಣಿ ಪ್ರದೇಶದತ್ತ ಸಾಗುತ್ತಿತ್ತು. ರಶ್ಯದ ಯಾಕುತ್ಸ್ಕ್ ಪ್ರಾಂತ್ಯ ಅತ್ಯಂತ ಶೀತಲ ಪ್ರದೇಶವಾಗಿದ್ದು ಇದು ವಜ್ರ ಉತ್ಪಾದನೆಯ ಪ್ರಮುಖ ಕೇಂದ್ರವಾಗಿದೆ. ಈ ವಿಮಾನದ ಹಾರಾಟವನ್ನು ಸಜ್ಜುಗೊಳಿಸಿದ ತಾಂತ್ರಿಕ ಇಂಜಿನಿಯರ್ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.