ಜಾಕಿಚಾನ್‌ ಪುತ್ರಿ ನಿರ್ವಸಿತೆ


Team Udayavani, May 2, 2018, 5:00 AM IST

Daughter-2-5.jpg

ಹಾಂಕಾಂಗ್‌: ಆ್ಯಕ್ಷನ್‌ ಹೀರೋ ಜಾಕಿಚಾನ್‌ ತನ್ನ ಸ್ಟಂಟ್‌ಗಳಿಂದ ಜಗದ್ವಿಖ್ಯಾತಿ ಗಳಿಸಿ, ಅಭಿಮಾನಿಗಳ ಹೃದಯ ಸಾಮ್ರಾಟನಾಗಿ ಮೆರೆಯುತ್ತಿದ್ದರೆ ಅವರ ಪುತ್ರಿ ನೆಲೆಸಲು ಸರಿಯಾದ ಸೂರಿಲ್ಲದೆ ಹಾಂಕಾಂಗ್‌ನ ಬೀದಿ ಬೀದಿ ಅಲೆಯುತ್ತಿದ್ದಾಳೆ. ಆಶ್ಚರ್ಯವಾದರೂ ಇದು ಸತ್ಯ. ತನ್ನ ಸ್ಥಿತಿಯ ಬಗ್ಗೆ ಸ್ವತಃ ಆಕೆಯೇ ವೀಡಿಯೋ ಮಾಡಿ ಯೂಟ್ಯೂಬ್‌ ನಲ್ಲಿ ಅಪ್‌ಲೋಡ್‌ ಮಾಡಿದ್ದಾಳೆ. ಪ್ರಸ್ತುತ ಎಟ್ಟಾ ಎನ್‌ ಜಿ (18) ತನ್ನ ಪ್ರೇಯಸಿಯ ಜತೆ ಹಾಂಕಾಂಗ್‌ ನ ಸೇತುವೆಯೊಂದರ ಕೆಳಗೆ ವಾಸಿಸುತ್ತಿದ್ದಾಳಂತೆ. ನನ್ನ ಈ ಸ್ಥಿತಿಗೆ ಹೆತ್ತವರೇ ಕಾರಣ ಎಂದೂ ಆಕೆ ಆರೋಪಿಸಿದ್ದಾಳೆ.

ಸಲಿಂಗಕಾಮಿಗಳೆಂದು ದೂರ ಮಾಡಿದರು
ಅಪ್ಪ ಜಾಕಿಚಾನ್‌ ಮತ್ತು ಅಮ್ಮ, ಮಾಜಿ ರೂಪದರ್ಶಿ ಎಲೈನ್‌ ಎನ್‌.ಜಿ. ಇಬ್ಬರಿಂದಲೂ ಎಟ್ಟಾ ದೂರವಾಗಿದ್ದಾಳೆ. ನಾನು ನನ್ನ ಪ್ರೇಯಸಿಯ ಜತೆ ಬದುಕುತ್ತಿದ್ದೇನೆ. ನಾವು ಸಲಿಂಗಕಾಮಿಗಳು ಎಂದು ನಮ್ಮ ಪೋಷಕರು ನಮ್ಮನ್ನು ದೂರ ಮಾಡಿದ್ದಾರೆ. ಒಂದು ತಿಂಗಳಿನಿಂದ ಮನೆ ಇಲ್ಲದೆ ಅಡ್ಡಾಡುತ್ತಿದ್ದೇವೆ. ನಮ್ಮ ಇವತ್ತಿನ ಸ್ಥಿತಿಗೆ ಪೋಷಕರೇ ಕಾರಣ ಎಂದು ದೂರಿದ್ದಾಳೆ. ನಾವು ಪೊಲೀಸ್‌ ಠಾಣೆ, ಆಹಾರ ನಿಧಿ, ಲೈಂಗಿಕ ಅಲ್ಪಸಂಖ್ಯಾಕರ ಸಹಾಯ ಕೇಂದ್ರಗಳಿಗೆ ಹೋಗಿ ಸಹಾಯ ಬೇಡಿದರೂ ನಮ್ಮನ್ನು ಯಾರೂ ಸೇರಿಸಿಕೊಳ್ಳಲಿಲ್ಲ ಎಂದೂ ಎಟ್ಟಾ ಹೇಳಿದ್ದಾಳೆ.

ಈ ವೀಡಿಯೋಗೆ ಪ್ರತಿಕ್ರಿಯೆ ನೀಡಿರುವ ಅಮ್ಮ ಎಲೈನ್‌, ಮಗಳ ಆರೋಪಗಳನ್ನು ತಳ್ಳಿಹಾಕಿದ್ದಾರೆ. ‘ಆಕೆಗೆ ದುಡ್ಡಿನ ಅಗತ್ಯವಿದ್ದರೆ ಯಾವುದಾದರೂ ಕೆಲಸ ಹುಡುಕಿ ದುಡಿದು ಹಣ ಸಂಪಾದಿಸಲಿ. ಯಾರೂ ಪೋಷಕರ ಖ್ಯಾತಿಯ ಮೇಲೆ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ’ ಎಂದಿದ್ದಾರೆ.

ಹಾಲಿ ಪತ್ನಿ ಜಾನ್‌ ಲಿನ್‌ ಅವರನ್ನು ವಿವಾಹವಾಗುವುದಕ್ಕೂ ಮುನ್ನ, ಜಾಕಿಚಾನ್‌ ಅವರು ಮಾಜಿ ಬ್ಯೂಟಿ ಕ್ವೀನ್‌ ಎಲೈನ್‌ ಎನ್‌.ಜಿ. ಅವರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಇವರಿಗೆ ಹುಟ್ಟಿದ ಮಗುವೇ ಎಟ್ಟಾ ಎನ್‌.ಜಿ. 64 ವರ್ಷದ ಜಾಕಿಚಾನ್‌ ಅವರು ತನ್ನ ಪುತ್ರಿಯ ಬಗ್ಗೆ ಎಲ್ಲೂ ಸಾರ್ವಜನಿಕವಾಗಿ ಮಾತನಾಡದಿದ್ದರೂ ಮಗಳಿರುವುದನ್ನು ಒಪ್ಪಿಕೊಂಡಿದ್ದರು. 

– ಸೇತುವೆ ಕೆಳಗೆ ವಾಸಿಸುತ್ತಿರುವ ಎಟ್ಟಾ ಎನ್‌.ಜಿ.
– ಈ ದುಃಸ್ಥಿತಿಗೆ ಹೆತ್ತವರೇ ಕಾರಣ ಎಂದು ಆರೋಪ

ಟಾಪ್ ನ್ಯೂಸ್

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್‌’ಗೆ ಅಡ್ಡಿAmerican Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್‌’ಗೆ ಅಡ್ಡಿ

American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್‌’ಗೆ ಅಡ್ಡಿ

Bangladesh: 42,600 ಕೋಟಿ ರೂ. ಲಂಚ ಕೇಸ್‌: ಹಸೀನಾ ವಿರುದ್ಧ ತನಿಖೆ ಶುರು

Bangladesh: 42,600 ಕೋಟಿ ರೂ. ಲಂಚ ಕೇಸ್‌: ಹಸೀನಾ ವಿರುದ್ಧ ತನಿಖೆ ಶುರು

‌America: ಪ್ರತೀಕಾರ- ಭಾರತದ ನಟೋರಿಯಸ್‌ ಡ್ರ*ಗ್ಸ್‌ ಸ್ಮಗ್ಲರ್‌ ಶೂಟೌಟ್‌ ನಲ್ಲಿ ಹ*ತ್ಯೆ

‌America: ಪ್ರತೀಕಾರ- ಭಾರತದ ನಟೋರಿಯಸ್‌ ಡ್ರ*ಗ್ಸ್‌ ಸ್ಮಗ್ಲರ್‌ ಶೂಟೌಟ್‌ ನಲ್ಲಿ ಹ*ತ್ಯೆ

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.