‘ನನ್ನ ಉಗ್ರ ಶಿಬಿರಗಳನ್ನು IAF ಉಡೀಸ್ ಮಾಡಿದ್ದು ನಿಜ’: ಮಸೂದ್ ಅಜ್ಹರ್
Team Udayavani, Feb 27, 2019, 3:13 AM IST
ಫೆಬ್ರವರಿ 14ರ ಪುಲ್ವಾಮ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆಯು ಮಂಗಳವಾರ ನಸುಕಿನ ಜಾವ ಪಾಕಿಸ್ಥಾನದ ಗಡಿಪ್ರದೇಶದೊಳಗೆ ನುಗ್ಗಿ ‘ಏರ್ ಸ್ಟ್ರೈಕ್’ ನಡೆಸಿ ಜೈಶ್ ಸಹಿತ ಇತರ ಸಂಘಟನೆಗಳ ಉಗ್ರಗಾಮಿ ಶಿಬಿರಗಳನ್ನು ಧ್ವಂಸಗೊಳಿಸಿರುವ ವಿಚಾರ ಇದೀಗ ವಿಶ್ವಪಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ ಇತ್ತ ಪಾಕಿಸ್ಥಾನ ತನ್ನ ಎಂದಿನ ವರಸೆಯಂತೆ ಭಾರತ ನಮ್ಮ ನೆಲದಲ್ಲಿ ಯಾವುದೇ ರೀತಿಯ ದಾಳಿ ಮಾಡಿಲ್ಲ, ಅದು ಸುಳ್ಳು ಹೇಳುತ್ತಿದೆ ಎಂದು ಅಲವತ್ತುಗೊಳ್ಳುತ್ತಿದೆ.
ಆದರೆ ಇತ್ತ ಪಾಕಿಸ್ಥಾನದ ಕೃಪಾಶ್ರಯದಲ್ಲಿರುವ ಜೈಶ್-ಎ-ಮಹಮ್ಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜ್ಹರ್ ಭಾರತ ನಡೆಸಿದ ವಾಯುದಾಳಿಯನ್ನು ಒಪ್ಪಿಕೊಳ್ಳುವ ಮೂಲಕ ತನ್ನ ಆಶ್ರಯದಾತ ರಾಷ್ಟ್ರಕ್ಕೆ ಕಸಿವಿಸಿ ಉಂಟುಮಾಡಿದ್ದಾನೆ. ಬಾಲ್ಕೋಟ್ ನಲ್ಲಿರುವ ಉಗ್ರ ಶಿಬಿರಗಳ ಮೇಲೆ ಭಾರತ ವಾಯುದಾಳಿ ಮಾಡಿರುವುದು ನಿಜ ಆದರೆ ಈ ದಾಳಿಯಿಂದ ಯಾವಿದೇ ರೀತಿಯ ಗಂಭೀರ ಹಾನಿಗಳಾಗಿಲ್ಲ ಎಂದು ಪಾಕಿಸ್ಥಾನದ ಮುಖ ಉಳಿಸಿಕೊಳ್ಳುವ ಹೇಳಿಕೆ ನೀಡಿದ್ದಾನೆ.
ಈ ವಾಯುದಾಳಿಯಲ್ಲಿ ಮೌಲಾನ ಅಮ್ಮರ್, ಮೌಲಾನ ತಲ್ಹಾ ಸೈಫ್, ಮುಫ್ತಿ ಅಜ್ಹರ್ ಖಾನ್ ಕಾಶ್ಮೀರಿ ಮತ್ತು ಇಬ್ರಾಹಿಂ ಅಜ್ಹರ್ ಸಹಿತ 300ಕ್ಕೂ ಹೆಚ್ಚು ಉಗ್ರರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೆಳಲಾಗುತ್ತಿದೆ. ಇನ್ನೂ ಒಂದು ಮೂಲಗಳ ಪ್ರಕಾರ ವಾಯುಸೇನೆ ನಡೆಸಿದ ಈ ದಾಳಿಯಲ್ಲಿ ಜೈಶ್ ಸಂಘಟನೆಯ ಈ ಎಲ್ಲಾ ಪ್ರಮುಖ ಉಗ್ರರು ಮೃತರಾಗಿದ್ದಾರೆಯೆ ಎಂಬುದು ದೃಢಪಟ್ಟಿಲ್ಲ. ಉಗ್ರ ತಲ್ಹಾ ಸೈಫ್ ಮೌಲಾನ ಮಸೂದ್ ನ ಸಹೋದರನಾಗಿದ್ದು ಈತ ಉಗ್ರಗಾಮಿ ಕಾರ್ಯಾಚರಣೆಗಳನ್ನು ತಯಾರುಗೊಳಿಸುವ ಘಟಕದ ಮುಖ್ಯಸ್ಥನಾಗಿದ್ದ ಎಂದು ಹೇಳಲಾಗುತ್ತಿದೆ. ಇನ್ನು ಅಮ್ಮರ್ ಎಂಬಾತ ಕಾಶ್ಮೀರ ಮತ್ತು ಅಫ್ಘಾನಿಸ್ಥಾನದಲ್ಲಿ ಹಲವಾರು ಉಗ್ರ ಚಟುವಟಿಕೆಗಳ ರೂವಾರಿ ಎಂದು ತಿಳಿದುಬಂದಿದೆ. ಇನ್ನು ಇಬ್ರಾಹಿಂ ಅಜ್ಹರ್ ಜೈಶ್ ಮುಖ್ಯಸ್ಥನ ಹಿರಿಯ ಸಹೋದರನಾಗಿದ್ದು 1999ರಲ್ಲಿ ಏರ್ ಇಂಡಿಯಾ ವಿಮಾನವನ್ನು ಕಂದಹಾರ್ ಗೆ ಅಪಹರಿಸಿದ್ದ ಘಟನೆಯಲ್ಲಿ ಭಾಗಿಯಾಗಿದ್ದ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಒಂದು ಯೋಜಿತ ದಾಳಿಯ ಮೂಲಕ ಭಾರತೀಯ ವಾಯುಸೇನೆಯು ಪಾಕಿಸ್ಥಾನ ಮತ್ತು ಜೈಶ್ ಸಹಿತ ಪಾಕ್ ಪೋಷಿತ ಉಗ್ರ ಸಂಘಟನೆಗಳಿಗೆ ಭರ್ಜರಿ ಶಾಕ್ ನೀಡಿದೆ ಅನ್ನುವುದಂತೂ ಸತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.