ಪ್ರಮೀಳಾ ಪ್ರಲಾಪ ನಮಗೆ ಬೇಕಾಗಿಲ್ಲ: ಜೈಶಂಕರ್ ಟೀಕೆಗೆ ರಾಜೀವ್ ಚಂದ್ರಶೇಖರ್ ತಿರುಗೇಟು
ಅಮೆರಿಕದ ಸಂಸದೆಗೆ ಕಮಲಾ ಹ್ಯಾರೀಸ್, ಎಲಿಝಬೆತ್ ವಾರೆನ್‌ರಿಂದ ಬೆಂಬಲ
Team Udayavani, Dec 21, 2019, 7:40 PM IST
ವಾಷಿಂಗ್ಟನ್/ನವದೆಹಲಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಂಸತ್ ಸಮಿತಿ ಜತೆಗೆ ಭೇಟಿ ರದ್ದು ಮಾಡಿದ್ದಕ್ಕೆ ಟೀಕೆ ಮಾಡಿರುವ ಸಂಸದೆ ಎಲಿಜಬೆತ್ ವಾರೆನ್‌ಗೆ ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ.
ಅಮೆರಿಕದ ಸಂಸತ್ ಸದಸ್ಯೆ ಪ್ರಮೀಳಾ ಜಯಪಾಲ್ ತಮ್ಮಷ್ಟಕ್ಕೇ ಮಾತನಾಡಿಕೊಳ್ಳುವುದಕ್ಕೆ ಅಡ್ಡಿ ಇಲ್ಲ. ಅವರಿಗೆ ಯಾವ ವಿಚಾರದ ಬಗ್ಗೆ ಮಾತನಾಡುತ್ತಿದ್ದೇನೆ ಎಂಬ ಅರಿವು ಇದ್ದರೆ ಸಾಕು. ಅವರ ಪ್ರಲಾಪವನ್ನು ಕೇಳಿಸಿಕೊಂಡು ಸಮಯ ಹಾಳು ಮಾಡುವ ಜರೂರತ್ತು ನಮಗೆ ಇಲ್ಲ ಎಂದು ಟ್ವಿಟರ್‌ನಲ್ಲಿ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಜಯಪಾಲ್‌ಗೆ ಡೆಮಾಕ್ರಾಟ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಗಳಾಗಬೇಕು ಎಂದು ಮುಂಚೂಣಿಯಲ್ಲಿರುವ ಬರ್ನಿ ಸ್ಯಾಂಡರ್ಸ್ ಮತ್ತು ಎಲಿಝಬೆತ್ ವಾರೆನ್ ಬೆಂಬಲ ಸೂಚಿಸಿದ್ದಾರೆ.
ಜಯಪಾಲ್ ಹೌಸ್ ಆಫ್ ಕಾಮನ್ಸ್‌ನಲ್ಲಿ ಕಾಶ್ಮೀರ ಸ್ಥಿತಿಗತಿ ವಿರುದ್ಧ ಮಂಡಿಸಲಾಗಿರುವ ಗೊತ್ತುವಳಿ ಬಗ್ಗೆ ಇಬ್ಬರು ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದಾರೆ ಜತೆಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಸಭೆ ರದ್ದು ಮಾಡಿದ್ದಕ್ಕೆ ಆಕ್ಷೇಪವನ್ನೂ ಮಾಡಿದ್ದಾರೆ. ಅಮೆರಿಕ ಸಂಸದರ ಧ್ವನಿಯನ್ನು ತಡೆಯಲು ಭಾರತದ ವಿದೇಶಾಂಗ ಸಚಿವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮೈಕ್ರೋ ಬ್ಲಾಗಿಂಗ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಎಲಿಝಬೆಲ್ ವಾರೆನ್. ಇದರ ಜತೆಗೆ ಪ್ರಮೀಳಾ ಜಯಪಾಲ್‌ಗೆ ಮತ್ತೂಬ್ಬ ಭಾರತೀಯ ಮೂಲದ ಸಂಸತ್ ಸದಸ್ಯೆ ಕಮಲಾ ಹ್ಯಾರಿಸ್ ಕೂಡ ಬೆಂಬಲ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.