Japan: ಪ್ರಧಾನಿ ಕಚೇರಿಗೆ ವ್ಯಾನ್ ನುಗ್ಗಿಸಲು ಯತ್ನಿಸಿದ ದುಷ್ಕರ್ಮಿ!
ಆಡಳಿತ ಪಕ್ಷದ ಪ್ರಧಾನ ಕಚೇರಿ ಗುರಿಯಾಗಿಸಿ ಫೈರ್‌ಬಾಂಬ್ ಎಸೆತ
Team Udayavani, Oct 19, 2024, 3:37 PM IST
ಟೋಕಿಯೊ : ಅಕ್ಟೋಬರ್ 27 ರಂದು ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ನಡೆದ ಮಹತ್ವದ ಬೆಳವಣಿಗೆಯಲ್ಲಿ, ಜಪಾನ್‌ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (LDP) ಪ್ರಧಾನ ಕಚೇರಿಗೆ ಹಲವಾರು ಫೈರ್‌ಬಾಂಬ್‌ಗಳನ್ನು ಎಸೆದ ಆರೋಪದ ಮೇಲೆ ಟೋಕಿಯೊ ಪೊಲೀಸರು ಶನಿವಾರ (ಅಕ್ಟೋಬರ್ 19) 49 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. .
ಸ್ಥಳೀಯ ಮಾಧ್ಯಮಗಳು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಘಟನೆ ಬೆಳಗ್ಗೆ 6 ಗಂಟೆಗೆ ಸಂಭವಿಸಿದ್ದು, ಶಂಕಿತ ವ್ಯಕ್ತಿಯು ಎಲ್‌ಡಿಪಿ ಪ್ರಧಾನ ಕಚೇರಿಯ ಮುಂದೆ ವ್ಯಾನ್ ಓಡಿಸಿ ಐದು ಅಥವಾ ಆರು ಫೈರ್‌ಬಾಂಬ್‌ಗಳನ್ನು ಎಸೆದಿದ್ದಾನೆ. ತತ್ ಕ್ಷಣ ಬೆಂಕಿ ನಂದಿಸಲಾಗಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿ ವಾಹನವನ್ನು ಪ್ರಧಾನ ಮಂತ್ರಿ ಕಚೇರಿಯ ಆವರಣಕ್ಕೆ (ಘಟನಾ ಸ್ಥಳದಿಂದ ಸುಮಾರು 15 ನಿಮಿಷಗಳ ದೂರದಲ್ಲಿ) ನುಗ್ಗಿಸಲು ಪ್ರಯತ್ನಿಸಿದ್ದಾನೆ. ಆದರೆ ತಡೆ ಬೇಲಿಯಿಂದಾಗಿ ಆತನಿಗೆ ನುಗ್ಗಿಸಲು ಸಾಧ್ಯವಾಗಲಿಲ್ಲ.
ಹೊಗೆ ಬಾಂಬ್ ಅನ್ನು ನೆಲದ ಮೇಲೆ ಎಸೆಯಲು ಪ್ರಯತ್ನಿಸಿದ ಆದರೆ ಅಧಿಕಾರಿಗಳು ಆತನನ್ನು ಕೂಡಲೇ ವಶಕ್ಕೆ ಪಡೆದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಮಾಧ್ಯಮಗಳು ಬಿಡುಗಡೆ ಮಾಡಿದ ವಿವರಗಳ ಪ್ರಕಾರ, ಶಂಕಿತನನ್ನು ಬಂಧಿಸುತ್ತಿದ್ದಂತೆ, ಪೊಲೀಸರು ಸುಮಾರು 10 ಪಾಲಿ ಟ್ಯಾಂಕ್‌ಗಳನ್ನು ಮತ್ತು ಅವನು ಚಲಾಯಿಸುತ್ತಿದ್ದ ವ್ಯಾನ್‌ನಿಂದ ಬಳಕೆಯಾಗದ ಫೈರ್‌ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!
Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.