ಆತ್ಮಹತ್ಯೆಗೆ ಬ್ರೇಕ್ ಹಾಕಲು ‘ಲೋನ್ಲಿನೆಸ್ ಮಿನಿಸ್ಟರ್’ನ್ನು ಸಂಪುಟಕ್ಕೆ ಸೇರಿಸಿಕೊಂಡ ಜಪಾನ್!
2018 ರಲ್ಲಿ ಇದೇ ರೀತಿಯ ಪಾತ್ರವನ್ನು ರಚಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಯುಕೆ ಪಾತ್ರವಾಗಿತ್ತು
Team Udayavani, Feb 24, 2021, 6:01 PM IST
ಟೊಕಿಯೋ : ಹನ್ನೊಂದು ವರ್ಷಗಳಲ್ಲಿ ದೇಶದ ಆತ್ಮಹತ್ಯೆ ಪ್ರಮಾಣ ಮೊದಲ ಬಾರಿಗೆ ಕೋವಿಡ್ ಸಾಂಕ್ರಾಮಿಕ ಸೋಂಕು ಹರಡುತ್ತಿದ್ದ ಸಮಯದಲ್ಲಿ ಹೆಚ್ಚಾದ ನಂತರ ಜಪಾನ್ ಈ ತಿಂಗಳು ಹೊಸ ಸಚಿವ ಹುದ್ದೆಯೊಂದನ್ನು ತನ್ನ ಸಂಪುಟಕ್ಕೆ ಸೇರಿಸಿಕೊಂಡಿದೆ.
ಪ್ರಧಾನ ಮಂತ್ರಿ ಯೋಶಿಹೈಡ್ ಸುಗಾ ಅವರು ಈ ತಿಂಗಳ ಆರಂಭದಲ್ಲಿ ತಮ್ಮ ಸಂಪುಟಕ್ಕೆ ಲೋನ್ಲಿನೆಸ್ (ಒಂಟಿತನದ) ಮಿನಿಸ್ಟರ್ ಹುದ್ದೆಯನ್ನು ಸೇರಿಸಿಕೊಂಡಿದ್ದಾರೆ, ಯುಕೆ ಉದಾಹರಣೆಯನ್ನು ಅನುಸರಿಸಿ, ಇದನ್ನು ಸುಗಾ ಸೇರಿಸಿಕೊಂಡಿದ್ದಾರೆ. 2018 ರಲ್ಲಿ ಇದೇ ರೀತಿಯ ಪಾತ್ರವನ್ನು ರಚಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಯುಕೆ ಪಾತ್ರವಾಗಿತ್ತು ಎಂದು ಜಪಾನ್ ಟೈಮ್ಸ್ ವರದಿ ಮಾಡಿದೆ.
ಓದಿ : ಪ್ರಮಾಣೀಕೃತವಾಗದೆ ಕೊರೊನಿಲ್ ಮಾರಾಟಕ್ಕೆ ಅನುಮತಿ ಇಲ: ದೇಶ್ಮುಖ್
ಹೊಸ ಪ್ರೋಟ್ಫೋಲಿಯೊಗಾಗಿ ರಾಷ್ಟ್ರದ ಜನನ ಪ್ರಮಾಣ ಕುಸಿತವನ್ನು ಎದುರಿಸಲು ಮತ್ತು ಪ್ರಾದೇಶಿಕ ಆರ್ಥಿಕತೆಗಳನ್ನು ಪುನರುಜ್ಜೀವನಗೊಳಿಸುವ ಉಸ್ತುವಾರಿ ಹೊಂದಿರುವ ಸಚಿವ ಟೆಟ್ಸುಶಿ ಸಕಮೊಟೊ ಅವರನ್ನು ಸುಗಾ ಆಯ್ಕೆ ಮಾಡಿದ್ದಾರೆ.
“ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಆತ್ಮಹತ್ಯೆ ಪ್ರಮಾಣವನ್ನು ಒಳಗೊಂಡಂತೆ” ರಾಷ್ಟ್ರೀಯ ವಿಷಯಗಳನ್ನು ಪರಿಹರಿಸಲು ಪ್ರಧಾನಿ ಯೋಶಿಹೈಡ್ ಸುಗಾ ತಮ್ಮನ್ನು ನೇಮಕ ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಕಮೊಟೊ ಹೇಳಿದ್ದಾರೆ ಎಂದು ಸಿ ಎನ್ ಎನ್ ವರದಿ ಮಾಡಿದೆ.
“ಸಂಬಂಧಿತ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸಮಸ್ಯೆಯನ್ನು ಪರಿಶೀಲಿಸಲು ಮತ್ತು ಸಮಗ್ರ ಕಾರ್ಯತಂತ್ರವನ್ನು ಮುಂದಿಡಲು ಸುಗಾ ನನಗೆ ಸೂಚನೆ ನೀಡಿದ್ದರು. ಸಾಮಾಜಿಕ ಒಂಟಿತನ ಮತ್ತು ಪ್ರತ್ಯೇಕತೆಯನ್ನು ತಡೆಗಟ್ಟಲು ಮತ್ತು ಜನರ ನಡುವಿನ ಸಂಬಂಧವನ್ನು ರಕ್ಷಿಸಲು ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ನಾನು ಭಾವಿಸುತ್ತೇನೆ” ಎಂದು ಸಕಮೊಟೊ ಹೇಳಿದ್ದಾರೆ.
ಓದಿ : ಪುದುಚೆರಿ ಚುನಾವಣೆಯು ಬಿಜೆಪಿಯ ಅಂತ್ಯಕ್ಕೆ ನಾಂದಿ ಹಾಡುತ್ತದೆ : ಮೊಯ್ಲಿ
ಸಾಂಕ್ರಾಮಿಕ ಸಮಯದಲ್ಲಿ ಏರಿಕೆಯಾಗಿರುವ ಆತ್ಮಹತ್ಯೆ ಮತ್ತು ಮಕ್ಕಳ ಬಡತನದಂತಹ ವಿಷಯಗಳಿಗಾಗಿ ಜಪಾನ್ ಸರ್ಕಾರವು ಫೆಬ್ರವರಿ 19 ರಂದು ಸಂಪುಟಕ್ಕೆ “ಪ್ರತ್ಯೇಕತೆ/ಒಂಟಿತನ ಪ್ರತಿರೋಧಕ ಕಚೇರಿ”ಯನ್ನು ರಚಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಜಪಾನ್ ನಲ್ಲಿ 426,000 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಮತ್ತು 7,577 ಸಾವುಗಳು ದಾಖಲಾಗಿವೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶಗಳು ತಿಳಸಿದೆ.
ಓದಿ : ‘ಆತ ಕಾಲ್ ಮಾಡಿ ಮಾತಾಡಬೇಕಿತ್ತು’…ದರ್ಶನ್ ಮೌನಕ್ಕೆ ಜಗ್ಗೇಶ್ ಅಸಮಾಧಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.