Speechless: ಏಡಿ ಖಾದ್ಯಕ್ಕೆ 56,000 ರೂ… ಬಿಲ್ ಕಂಡು ಪೊಲೀಸರಿಗೆ ಕರೆ ಮಾಡಿದ ಮಹಿಳೆ
Team Udayavani, Sep 21, 2023, 10:39 AM IST
ಸಿಂಗಾಪುರ: ಕೆಲ ದಿನಗಳ ಹಿಂದೆ, ತನ್ನ ಸ್ನೇಹಿತರೊಂದಿಗೆ ಸಿಂಗಾಪುರದ ರೆಸ್ಟೊರೆಂಟ್‌ಗೆ ತಿನ್ನಲು ಹೋಗಿದ್ದ ಜಪಾನ್‌ನ ಮಹಿಳಾ ಪ್ರವಾಸಿಯೊಬ್ಬರು ‘ಫುಡ್ ಬಿಲ್’ ನೋಡಿ ಬೆಚ್ಚಿಬಿದ್ದು ಪೊಲೀಸರಿಗೆ ಕರೆ ಮಾಡಿದ ಪ್ರಸಂಗ ನಡೆದಿರುವುದಾಗಿ ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.
ಆಗಸ್ಟ್ 19 ರಂದು ಜಪಾನಿನ ಮಹಿಳೆ ಜುಂಕೊ ಶಿನ್ಬಾ ಸೇರಿ ನಾಲ್ವರು ಸಿಂಗಾಪುರದ “ಸೀಫುಡ್ ಪ್ಯಾರಡೈಸ್” ರೆಸ್ಟೋರೆಂಟ್‌ಗೆ ಹೋಗಿ “ಚಿಲ್ಲಿ ಕ್ರ್ಯಾಬ್” ಆರ್ಡರ್ ಮಾಡಿದ್ದಾರೆ. ಖಾದ್ಯ ಸೇವಿಸಿದ ಬಳಿಕ ಹೋಟೆಲ್ ಸಿಬಂದಿ ಮಹಿಳೆಗೆ ಆಹಾರದ ಬಿಲ್ ನೀಡಿದ್ದಾನೆ ಇದನ್ನು ನೋಡಿದ ಮಹಿಳೆಗೆ ಶಾಕ್ ಆಗಿದೆ ಅದು ಹೇಗೆ ಅಂತೀರಾ ಮಹಿಳೆ ಖರೀದಿಸಿದ ‘ಚಿಲ್ಲಿ ಕ್ರ್ಯಾಬ್’ ಬೆಲೆ $680 (ರೂ. 56,503) ಇಷ್ಟೊಂದು ಮೊತ್ತದ ಬಿಲ್ ನೋಡಿದ ಮಹಿಳೆ ಹೋಟೆಲ್ ಸಿಬ್ಬಂದಿಯೊಂದಿಗೆ ಬಿಲ್ ವಿಚಾರವಾಗಿ ವಿವರ ಪಡೆದಿದ್ದಾರೆ ಬಳಿಕ ಬಿಲ್ ಸರಿಯಾಗಿರುವುದಾಗಿ ಸಿಬ್ಬಂದಿ ಹೇಳಿದ ಬಳಿಕ ಇಷ್ಟು ಮೊತ್ತದ ಬಿಲ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಹಿಳೆ ಪೊಲೀಸರಿಗೆ ಕರೆ ಮಾಡಿದ್ದಾರೆ.
ಪೊಲೀಸರು ರೆಸ್ಟೋರೆಂಟ್ ಗೆ ಬಂದು ವಿಚಾರಣೆ ನಡೆಸಿದ ವೇಳೆ ಮಹಿಳೆ ತನ್ನ ಸಮಸ್ಯೆ ತೋಡಿಕೊಂಡಿದ್ದಾರೆ. ತಾನು ಜಪಾನ್ ದೇಶದಿಂದ ಸಿಂಗಾಪುರಕ್ಕೆ ಪ್ರವಾಸಕ್ಕೋಸ್ಕರ ಬಂದಿದ್ದು ಇಲ್ಲಿನ ಚಿಲ್ಲಿ ಕ್ರ್ಯಾಬ್ ಬಹಳ ವಿಶೇಷವಾದ ಖಾದ್ಯ ಎಂದು ಹೇಳಿದ್ದರು ಅದರಂತೆ ನಾನು ಇಲ್ಲಿನ ರೆಸ್ಟೋರೆಂಟ್ ಗೆ ಬಂದು ಇಲ್ಲಿನ ಸಿಬ್ಬಂದಿಯಲ್ಲೂ ಖಾದ್ಯದ ಬಗ್ಗೆ ವಿಚಾರಿಸಿದಾಗ ಅವರೂ ‘ಚಿಲ್ಲಿ ಕ್ರ್ಯಾಬ್’ ಬಗ್ಗೆ ಹೇಳಿದ್ದರು. ಅದರ ಬೆಲೆಯ ಬಗ್ಗೆ ಕೇಳಿದಾಗ 20 ಡಾಲರ್ ಎಂದಷ್ಟೇ ಸಿಬಂದಿ ಹೇಳಿದ್ದಾನೆ. ಆದರೆ, ಪ್ರತಿ 100 ಗ್ರಾಂ ತೂಕಕ್ಕೆ ಈ ಬೆಲೆಗಳನ್ನು ನಿಗದಿಪಡಿಸಿರುವ ಕುರಿತು ವಿವರಿಸಲಿಲ್ಲ ಎಂದು ಶಿನ್ಬಾ ಹೇಳಿಕೊಂಡಿದ್ದಾರೆ.
ನಾವು ಒಟ್ಟು 4 ಸ್ನೇಹಿತರು ಹೆಚ್ಚಿನ ಏಡಿಗಳನ್ನು ತಿಂದಿದ್ದೆವು ಇದರ ಬೆಲೆ 680 ಡಾಲರ್ ಆಗಿತ್ತು. ಇದರಿಂದ ಕಂಗಾಲಾದ ನಾವು ಹೋಟೆಲ್ ಸಿಬಂದಿಯಲ್ಲೂ ಬಿಲ್ ಬಗ್ಗೆ ವಿಚಾರಿಸಿದಾಗ ಆತ ಬಿಲ್ ಮೊತ್ತ ಸರಿಯಾಗಿದೆ ಎಂದು ಹೇಳಿದ್ದಾನೆ ಮೊದಲೇ ಇಷ್ಟು ಪ್ರಮಾಣದ ಖಾದ್ಯಕ್ಕೆ ಇಷ್ಟು ಹಣವೆಂದು ಹೇಳಿದ್ದರೆ ನಾವು ಇದನ್ನು ಖರೀದಿಸುತ್ತಿರಲ್ಲಿಲ್ಲ ಹೋಟೆಲ್ ಸಿಬಂದಿಗಳು ಸರಿಯಾದ ಮಾಹಿತಿ ನೀಡದೆ ನಮಗೆ ಮೋಸ ಮಾಡಿದ್ದಾರೆ ಎಂದು ಹೇಳಿದ ಮಹಿಳೆ ಪೊಲೀಸರಲ್ಲಿ ನಮಗೆ ನ್ಯಾಯ ಒದಗಿಸುವಂತೆ ಕೇಳಿಕೊಂಡಿದ್ದಾರೆ ಬಳಿಕ ಪೊಲೀಸರು ಮಹಿಳೆಯ ಮಾತು ಕೇಳಿ ಹೋಟೆಲ್ ಸಿಬ್ಬಂದಿಗಳನ್ನು ವಿಚಾರಿಸಿದಾಗ ಹೋಟೆಲ್ ಸಿಬ್ಬಂದಿಗಳು ತಾವು ನೀಡಿರುವ ಖಾದ್ಯದ ಸಂಪೂರ್ಣ ವಿವರ ನೀಡಿದ್ದಾರೆ ಅಲ್ಲದೆ ಇತರರಿಗೂ ನೀಡಿರುವ ಬಿಲ್ ಗಳನ್ನು ಪೊಲೀಸರಿಗೆ ತೋರಿಸಿದ್ದಾರೆ ಇದಾದ ಬಳಿಕ ಪೊಲೀಸರು ಹೋಟೆಲ್ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿ ಸಹಾನುಭೂತಿಯ ನೆಲೆಯಲ್ಲಿ ಶಿನ್ಬಾಗೆ ಹೋಟೆಲ್ ಬಿಲ್ ನಲ್ಲಿ $78 (Rs 6,479) ರಿಯಾಯಿತಿಯನ್ನು ನೀಡಲು ಒಪ್ಪಿಕೊಂಡಿತು.
ಇದನ್ನೂ ಓದಿ: ʼJawanʼ ನಿರ್ದೇಶಕನ ಮೇಲೆ ಅಸಮಾಧಾನ; “ಇನ್ಮುಂದೆ ಬಾಲಿವುಡ್ ಸಿನಿಮಾನೇ ಮಾಡಲ್ಲ..” ಎಂದ ನಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.