ಜಿನ್‌ಪಿಂಗ್ ಅಧ್ಯಕ್ಷ ಅವಧಿಗಿನ್ನು ಮಿತಿಯಿಲ್ಲ
Team Udayavani, Feb 26, 2018, 9:15 AM IST
ಬೀಜಿಂಗ್: ಕ್ಸಿ ಜಿನ್‌ಪಿಂಗ್ ಅವರು ಚೀನದ ಅಧ್ಯಕ್ಷರಾಗಿ 2022ರ ಬಳಿಕವೂ ಮುಂದುವರಿಯಲಿದ್ದಾರೆಯೇ? ಹೌದು. ಈ ನಿಟ್ಟಿನಲ್ಲಿ ಚೀನದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ(ಸಿಪಿಸಿ) ಹೆಜ್ಜೆಯಿಟ್ಟಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಈವರೆಗೆ ಇದ್ದ 2 ವರ್ಷ ಗಳ ಮಿತಿಯನ್ನು ತೆಗೆದುಹಾಕಲು ಚೀನ ನಿರ್ಧರಿಸಿದೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷಕರು 2 ವರ್ಷಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿರುವಂತಿಲ್ಲ ಎಂಬ ಸಂವಿಧಾನದ ಪರಿಚ್ಛೇ ದವನ್ನೇ ತೆಗೆದುಹಾಕುವ ನಿರ್ಣಯಕ್ಕೆ ಸೆಂಟ್ರಲ್ ಕಮಿಟಿ ಬಂದಿರುವುದಾಗಿ ಇಲ್ಲಿನ ಸರಕಾರಿ ಸ್ವಾಮ್ಯದ ಕ್ಸಿನುØವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಸಿಪಿಸಿ ಹಾಗೂ ಸೇನೆಯ ಮುಖ್ಯಸ್ಥ ಸ್ಥಾನ ಹೊತ್ತಿರುವ ಕ್ಸಿ ಜಿನ್ ಪಿಂಗ್ ಅವರ 5 ವರ್ಷಗಳ 2ನೇ ಅವಧಿ ಕಳೆದ ವರ್ಷ ಆರಂಭವಾಗಿತ್ತು. 2016ರಲ್ಲಿ ಸಿಪಿಸಿ ಅವರಿಗೆ “ಪ್ರಮುಖ ನಾಯಕ’ ಸ್ಥಾನಮಾನವನ್ನು ನೀಡಿತ್ತು.
ಸೋಮವಾರ ಪಕ್ಷದ ಮಹತ್ವದ ಸಭೆ ನಡೆಯಲಿದ್ದು, ಅಧಿಕಾರಾವಧಿ ಮಿತಿ ತೆಗೆದುಹಾಕುವ ನಿರ್ಧಾರ ಘೋಷಣೆ ಯಾಗಲಿದೆ. ತದನಂತರ ಜಿನ್‌ಪಿಂಗ್ ಅನಿರ್ದಿಷ್ಟಾವಧಿಗೆ ಅಧ್ಯಕ್ಷರಾಗಿ ಮುಂದುವರಿಯುವುದು ಖಚಿತವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.