‘Joy Bangla’ ರಾಷ್ಟ್ರೀಯ ಘೋಷಣೆಗೆ ಕೋರ್ಟ್ ತಡೆ
ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ
Team Udayavani, Dec 13, 2024, 6:46 AM IST
ಢಾಕಾ: ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರಿಂದ ಪ್ರಸಿದ್ಧಿ ಪಡೆದಿದ್ದ “ಜೊಯ್ ಬಾಂಗ್ಲಾ’ ರಾಷ್ಟ್ರೀಯ ಘೋಷಣೆ ಎಂದು ಆದೇಶ ನೀಡಿದ್ದ ಹೈಕೋರ್ಟ್‌ನ ತೀರ್ಪಿಗೆ ಆ ದೇಶದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಾಂತರ ಸರಕಾರ ಬಂದ ಬೆನ್ನಲ್ಲೇ, ಶೇಖ್ ಹಸೀನಾ ಸರಕಾರದ ಅವಧಿಯಲ್ಲಿ 2020ರಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಅಮಾನತುಗೊಳಿಸಲು ಸರಕಾರ ತೀರ್ಮಾನಿಸಿತ್ತು. ಈ ಕುರಿತು ಡಿ.2ರಂದು ಸುಪ್ರೀಂ ಕೋರ್rಗೆ ಮೇಲ್ಮನವಿ ಸಲ್ಲಿಸಿತ್ತು. ರಾಷ್ಟ್ರೀಯ ಘೋಷಣೆ ಸರಕಾರದ ನೀತಿಯ ವಿಚಾರವಾಗಿದೆ. ಇದರಲ್ಲಿ ನ್ಯಾಯಾಂಗವು ಮಧ್ಯಪ್ರವೇಶ ಮಾಡಬಾರದು ಎಂಬ ಅಂಶದ ಮೇಲೆ 4 ಸದಸ್ಯರನ್ನೊಳಗೊಂಡ ಸುಪ್ರೀಂ ಪೀಠ ಆದೇಶ ನೀಡಿದೆ. ಆ.5ರಂದು ಸರಕಾರ ಪತನವಾದ ಬಳಿಕ ಬಾಂಗ್ಲಾದೇಶದ ಬ್ಯಾಂಕ್ ನೋಟುಗಳಿಂದ ಹಸೀನಾ ತಂದೆ ಮುಜಿಬುರ್ ಚಿತ್ರವನ್ನು ತೆಗೆಯುವ ನಿರ್ಧಾರವನ್ನು ಕೈಗೊಂಡಿತ್ತು.
ಇತ್ತ ದೇಶದ್ರೋಹದ ಆರೋಪದಲ್ಲಿ ಬಂಧಿತರಾದ ಹಿಂದೂ ನಾಯಕ ಚಿನ್ಮಯಿ ಕೃಷ್ಣ ದಾಸ್‌ರ ಜಾಮೀನು ಅರ್ಜಿ ವಿಚಾರಣೆ ತ್ವರಿತಗೊಳಿಸಲು ಕೋರಿ ಹೊಸ ಅರ್ಜಿ ಸಲ್ಲಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israeli attack; ಸಿರಿಯಾದ ಶೇ.80ರಷ್ಟು ಸೇನಾ ಸ್ವತ್ತು ನಾಶ
Khalistani flag case: ಪನ್ನು ವಿವರ ನೀಡಲು ಅಮೆರಿಕ ಕ್ಯಾತೆ
Harmeet K. Dhillon: ಟ್ರಂಪ್ ಸರ್ಕಾರದ ಉನ್ನತ ಹುದ್ದೆಗೆ ಭಾರತ ಮೂಲದ ಹರ್ಮೀತ್ ಧಿಲ್ಲೋನ್
Bangladesh: ಕೃಷ್ಣದಾಸ್ ಜಾಮೀನು ಅರ್ಜಿ: ಮುಂಚಿತ ವಿಚಾರಣೆ ತಿರಸ್ಕರಿಸಿದ ಬಾಂಗ್ಲಾ ಕೋರ್ಟ್
ಅಮೆರಿಕದಲ್ಲಿ ಜನಿಸಿದ ಮಾತ್ರಕ್ಕೆ ಪೌರತ್ವ ಸಿಗಲ್ಲ? 150ವರ್ಷಗಳ ಪದ್ಧತಿಗೆ ಟ್ರಂಪ್ ಬ್ರೇಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.