ತಾಯಿಯಿಂದ ನನಗೆ ಹೋರಾಟ ಗುಣ: ಕಮಲಾ ಹ್ಯಾರಿಸ್
Team Udayavani, Aug 14, 2020, 6:00 AM IST
ಅಮೆರಿಕ ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್
ವಾಷಿಂಗ್ಟನ್: ಸಮಸ್ಯೆಗಳು ಎದುರಾದಾಗ ಸಮಸ್ಯೆಯ ಬಗ್ಗೆ ದೂರುತ್ತಾ ಕೂಡಬಾರದು. ಅದರ ಬದಲಾಗಿ, ಸಮಸ್ಯೆಯ ನಿವಾರಣೆಗಾಗಿ ಏನಾದರೂ ಪ್ರಯತ್ನಿಸಬೇಕು ಎಂಬುದನ್ನು ತಾವು ತನ್ನ ತಾಯಿಯಿಂದ ಕಲಿತಿರುವುದಾಗಿ, ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕ ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಅಮೆರಿಕದ ಡೆಲಿವರ್‌ನ ವಿಲಿ¾ಂಗ್ಟನ್‌ನಲ್ಲಿ ಮೊದಲ ಬಾರಿಗೆ ಸಾರ್ವಜನಿಕ ರ್ಯಾಲಿಯಲ್ಲಿ ಅವರು ಮಾತನಾಡಿ ದರು. ಜೀವನದಲ್ಲಿ ಪ್ರತಿಯೊಂದು ಸಮಸ್ಯೆಯ ವಿರುದ್ಧ ಹೋರಾಡುವ ಮನೋಭಾವವನ್ನು ನನ್ನ ತಾಯಿಯಾದ ಶ್ಯಾಮಲಾ ಗೋಪಾಲನ್ ಅವರಿಂದಲೇ ಕಲಿತೆ ಎಂದು ತಿಳಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಜೋ ಬೈಡೆನ್ ಇದ್ದರು.
“ನನ್ನ ತಾಯಿ ಶ್ಯಾಮಲಾ ತನ್ನ ಸಹೋದರಿ ಮಾಯಾಳನ್ನು ಹಾಗೂ ನನ್ನನ್ನು ಬೆಳೆಸಿದರು. ಪ್ರಗತಿಯತ್ತ ಮುನ್ನಡೆಯು ವುದನ್ನು ನಮಗೆ ಅವರು ಹೇಳಿಕೊಟ್ಟರು. ನನ್ನ ತಂದೆ ಜಮೈಕಾದವರು. ತಾಯಿ ಭಾರತದವರು. ವಿಶ್ವದ ಎರಡು ವಿರುದ್ಧ ದಿಕ್ಕಿನಿಂದ ಬಂದು ಅಮೆರಿಕದಲ್ಲಿ ಜೊತೆಯಾದವರು. ಅವರು ಜೊತೆಯಾಗಲು ಕಾರಣ, 1960ರಲ್ಲಿ ನಡೆದ ನಾಗರಿಕ ಹಕ್ಕುಗಳ ಚಳುವಳಿ. ಆ ದಿನಗಳಲ್ಲಿ ಅವರು, ರಸ್ತೆಗಳಲ್ಲಿ, ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಮುನ್ನಡೆದಿದ್ದುದು, ಇಂದಿಗೂ ಅನುರಣಿಸುತ್ತಿದೆ. ಇಂದಿಗೂ ಅಮೆರಿಕದ ಜನತೆಗೆ ಅಂಥ ಹೋರಾಟ ಸಾಗುತ್ತಿದೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
Bangladesh: 42,600 ಕೋಟಿ ರೂ. ಲಂಚ ಕೇಸ್: ಹಸೀನಾ ವಿರುದ್ಧ ತನಿಖೆ ಶುರು
America: ಪ್ರತೀಕಾರ- ಭಾರತದ ನಟೋರಿಯಸ್ ಡ್ರ*ಗ್ಸ್ ಸ್ಮಗ್ಲರ್ ಶೂಟೌಟ್ ನಲ್ಲಿ ಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.