![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 8, 2020, 11:59 PM IST
ಹೊಸದಿಲ್ಲಿ: ಭಾರತದ ಭೂ ಭಾಗಗಳನ್ನು ಏಕಪಕ್ಷೀಯವಾಗಿ ತನ್ನದ್ದೆಂದು ತೋರಿಸಿಕೊಳ್ಳಲು ಯತ್ನಿಸುವ ವಿವಾದಿತ ನಕ್ಷೆಗೆ ಕಾನೂನಾತ್ಮಕ ಸಮ್ಮತಿ ನೀಡಲು ನೇಪಾಲ ಇನ್ನೊಮ್ಮೆ ಮುಂದಾಗಿದೆ.
ಭಾರತದ ಭೂಪ್ರದೇಶವನ್ನೊಳಗೊಂಡ ನೇಪಾಳದ ವಿವಾದಿತ ನಕ್ಷೆಗೆ ಕಾನೂನಾತ್ಮಕ ಸ್ಥಾನಮಾನ ನೀಡಲು ಎರಡನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಜೂ.9 ರಂದು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅಲ್ಲಿನ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.
ಈಗಾಗಲೇ ವಿಪಕ್ಷಗಳ ಬೆಂಬಲದೊಂದಿಗೆ ಮೇ 31ರಂದು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಆದರೆ ಅನುಮೋದನೆಗೊಂಡಿರಲಿಲ್ಲ.
ಭಾರತದ ಭೂಭಾಗವನ್ನು ಏಕಪಕ್ಷೀಯವಾಗಿ ತನ್ನದೆಂದು ನಕ್ಷೆಯಲ್ಲಿ ಘೋಷಿಸಿಕೊಂಡಿರುವ ನೇಪಾಲ, ಉತ್ತರಖಂಡದ ಕಾಲಪಾನಿ, ಲಿಪುಲೇಖ್ ಹಾಗೂ ಲಿಂಪಿಯಾಧುರ ಮೇಲೆ ಸ್ವತಂತ್ರ ಕಾನೂನು ನಿಯಮಾವಳಿ ಹೇರುವ ಸಾಧ್ಯತೆ ಇದೆ.
ತಿಂಗಳ ಪ್ರಕ್ರಿಯೆ: ಹೊಸ ನಕ್ಷೆ ಅಂಗೀಕಾರಗೊಳ್ಳಲು ನೇಪಾಳ ಇನ್ನೂ ಒಂದು ತಿಂಗಳು ಕಾಯಬೇಕು. ಸಂಸತ್ತಿನಲ್ಲಿ ಮಸೂದೆ ಮಂಡಿಸಿದ ಬಳಿಕ, ಆ ಸಂಬಂಧ ತಿದ್ದುಪಡಿಗೆ ಸಾರ್ವಜನಿಕರಿಗೂ ಅವಕಾಶ ನೀಡಲಾಗುತ್ತದೆ. ಮಸೂದೆ ಮಾರ್ಪಡಿಸುವ ಕುರಿತು ಜನತೆ ಸಂಸತ್ತಿನ ಕಾರ್ಯದರ್ಶಿಗೆ ಪತ್ರ ಬರೆದು ಸೂಚಿಸಬಹುದು. ಸಂಸತ್ ಅದನ್ನು ಮತ್ತೆ ಚರ್ಚೆಗೊಳಪಡಿಸಿ, ಮಸೂದೆ ಅಂಗೀಕರಿಸಬೇಕಾಗುತ್ತದೆ.
ಭಾರತದ ಜತೆ ಮಾತುಕತೆ: ನೇಪಾಲವು ಭಾರತದೊಂದಿಗೆ ವಿದೇಶಾಂಗ ಕಾರ್ಯದರ್ಶಿ ಮಟ್ಟದಲ್ಲಿ ವಿಡಿಯೊ ಕಾನ್ಫರೆನ್ಸ್ ನಡೆಸಿದೆ ಎಂದೂ ವರದಿಯಾಗಿದೆ. ತನ್ನ ಹೊಸ ನಕ್ಷೆಯನ್ನು ಭಾರತ ಕಡೇ ಕ್ಷಣದಲ್ಲಾದರೂ ಒಪ್ಪುತ್ತದೆಂಬ ಹುಸಿ ಭರವಸೆ ನೇಪಾಲದ್ದು. ಒಂದು ವೇಳೆ ಭಾರತ ಒಪ್ಪಿದರೆ, ಜೂ.9ರಂದು ಎರಡನೇ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ ಓಲಿ ಸರಕಾರಕ್ಕೆ ಇನ್ನಷ್ಟು ಸುಲಭವಾಗುತ್ತದೆ.
ಆದರೆ, ಓಲಿ ಸರಕಾರದ ಈ ನಡೆಯನ್ನು ಭಾರತ ಒಪ್ಪುವುದಿಲ್ಲ ಎನ್ನುವುದು ಇಲ್ಲಿನ ನೇಪಾಲದ ಉನ್ನತಾಧಿಕಾರಿಗಳಿಗೆ ಸ್ಪಷ್ಟವಾಗಿದೆ. ನೆರೆ ರಾಷ್ಟ್ರದೊಂದಿಗೆ ಕನಿಷ್ಠ ಮಾತುಕತೆಯನ್ನೂ ನಡೆಸದೆ ನೇಪಾಳ ಏಕಪಕ್ಷೀಯವಾಗಿ ತೀರ್ಮಾನಿಸಿದೆ. ಇದು ನಕ್ಷೆ ವಿವಾದವನ್ನು ಇನ್ನಷ್ಟು ಜಟಿಲ ಹಂತಕ್ಕೆ ಒಯ್ಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.