ಕ್ರೈಮಿಯಾದಿಂದ ರಷ್ಯಾಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯಲ್ಲಿ ಭಾರಿ ಸ್ಫೋಟ
Team Udayavani, Oct 8, 2022, 2:14 PM IST
ಮಾಸ್ಕೋ :ರಷ್ಯಾದ ನಿಯಂತ್ರಣದಲ್ಲಿರುವ ಉಕ್ರೇನ್ ನ ಕ್ರೈಮಿಯನ್ ಪೆನಿನ್ಸುಲಾದೊಂದಿಗೆ ಮುಖ್ಯ ಭೂಭಾಗವನ್ನು ಸಂಪರ್ಕಿಸುವ ಬೃಹತ್ ಸೇತುವೆಯು ಶನಿವಾರ ಬೆಳಗ್ಗೆ ಭಾರಿ ಸ್ಫೋಟಕ್ಕೆ ಸಾಕ್ಷಿಯಾಗಿದ್ದು ಇದರ ಪರಿಣಾಮವಾಗಿ ಸಂಚಾರ ದಟ್ಟಣೆ ಮತ್ತು ಭಾರಿ ಬೆಂಕಿ ಕಾಣಿಸಿಕೊಂಡಿತು.
ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಸಾವುನೋವುಗಳ ತಕ್ಷಣದ ವರದಿಗಳು ಬಂದಿಲ್ಲ. ನಗರದ ಮಧ್ಯಭಾಗದಲ್ಲಿ ಕ್ಷಿಪಣಿ ದಾಳಿಯ ಪರಿಣಾಮವಾಗಿ ಸ್ಫೋಟಗಳು ಸಂಭವಿಸಿವೆ ಎಂದು ಖಾರ್ಕಿವ್ ಮೇಯರ್ ಇಹೋರ್ ತೆರೆಖೋವ್ ಅವರು ಟೆಲಿಗ್ರಾಮ್‌ನಲ್ಲಿ ಹೇಳಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ಉಲ್ಲೇಖಿಸಿದೆ.
ಸೇತುವೆಗೆ ಬೆಂಕಿ ಹೊತ್ತಿಕೊಂಡಿರುವುದು ಮತ್ತು ಹಾನಿಯನ್ನು ತೋರಿಸುವ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ಪ್ರಮಾಣದ ಹಾನಿ ಕಂಡು ಬಂದಿದೆ.
ಇದನ್ನೂ ಓದಿ: ವ್ಲಾಡಿಮಿರ್ ಪುಟಿನ್ ಗೆ ಬರ್ತ್ ಡೇ ಗಿಫ್ಟಾಗಿ ‘ಟ್ರಾಕ್ಟರ್’ ನೀಡಿದ ಬೆಲಾರಸ್ ಅಧ್ಯಕ್ಷ!
ಪೂರ್ವ ಉಕ್ರೇನಿಯನ್ ನಗರವಾದ ಖಾರ್ಕಿವ್ ಶನಿವಾರ ಮುಂಜಾನೆ ಸ್ಫೋಟಗಳಿಂದ ತತ್ತರಿಸಿಹೋದ ನಂತರ ಈ ಘಟನೆ ನಡೆದಿದೆ. ಇಂಧನ ಸಂಗ್ರಹ ಟ್ಯಾಂಕ್ ವೊಂದು ಬೆಂಕಿಗೆ ಆಹುತಿಯಾಗಿದೆ ಎಂದು ರಷ್ಯಾದ ಅಧಿಕಾರಿ ಓಲೆಗ್ ಕ್ರುಚ್ಕೋವ್ ಅವರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ಗಮನಾರ್ಹವಾಗಿ, ರಷ್ಯಾದ ಕ್ರೂಸ್ ಹಡಗು ಮೊಸ್ಕ್ವಾ ಭಾರಿ ಹಾನಿಗೊಳಗಾಗಿತ್ತು ಮತ್ತು ಬೆಂಕಿಯಿಂದ ಸುಟ್ಟುಹೋದ ನಂತರ ಏಪ್ರಿಲ್‌ನಲ್ಲಿ ಚಂಡಮಾರುತದಲ್ಲಿ ಮುಳುಗಿತ್ತು. ಬೆಂಕಿಯಿಂದಾಗಿ ರಷ್ಯಾದ ಕೆಲವು ಶಸ್ತ್ರಾಸ್ತ್ರಗಳು ನಾಶವಾಗಿದ್ದವು ಮತ್ತು ಸೈನ್ಯವನ್ನು ಸ್ಥಳಾಂತರಿಸಲು ಕಾರಣವಾಗಿತ್ತು.
ಮುಂದಿನದು ಏನು?
”ಕ್ರೂಸರ್ ಮೊಸ್ಕ್ವಾ ಮತ್ತು ಕೆರ್ಚ್ ಸೇತುವೆ, ಉಕ್ರೇನಿಯನ್ ಕ್ರೈಮಿಯಾದಲ್ಲಿ ರಷ್ಯಾದ ಶಕ್ತಿಯ ಎರಡು ಕುಖ್ಯಾತ ಸಂಕೇತಗಳು ನಾಶವಾಗಿವೆ. ರಷ್ಯಾದ ಸಾಲಿನಲ್ಲಿ ಮುಂದಿನದು ಏನು?” ಎಂದು ಉಕ್ರೇನ್ ರಕ್ಷಣಾ ಇಲಾಖೆ ಟ್ವೀಟ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.