Israel; ಹಮಾಸ್ ಉಗ್ರರಿಂದ ಅಪಹರಣ; ಪ್ರಾಣ ಭಿಕ್ಷೆಗೆ ಅಂಗಲಾಚಿದ ಯುವತಿ
Team Udayavani, Oct 8, 2023, 5:30 PM IST
ಗಾಜಾ ಪಟ್ಟಿ: ಯಹೂದಿಗಳ ರಜಾದಿನವಾದ ಸುಕ್ಕೋಟ್ ಆಚರಿಸಲು ಗಾಜಾ ಪಟ್ಟಿಯ ಬಳಿ ರೇವ್ ಪಾರ್ಟಿಯಲ್ಲಿದ್ದಾಗ 25 ವರ್ಷದ ಇಸ್ರೇಲಿ ಮಹಿಳೆಯನ್ನು ಪ್ಯಾಲೆಸ್ತೀನ್ ಸಶಸ್ತ್ರ ಗುಂಪು ಹಮಾಸ್ ನ ಉಗ್ರಗಾಮಿಗಳು ಅಪಹರಿಸಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ನೋವಾ ಅರ್ಗಾಮಣಿ ಅವರು ಕಿಬ್ಬುತ್ಜ್ ರೆಯಿಮ್ ಬಳಿ ಟ್ರಾನ್ಸ್ ಸಂಗೀತ ಉತ್ಸವವದಲ್ಲಿ ಸಂತಸದ ಸಮಯವನ್ನು ಕಳೆಯುತ್ತಿದ್ದರು. ಹಮಾಸ್ ಉಗ್ರರು ಗುಂಪಿನ ಮೇಲೆ ಗುಂಡು ಹಾರಿಸಿ ರಾಕೆಟ್ ಗಳನ್ನು ಉಡಾಯಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಅರ್ಗಮಣಿ ಅವರ ಕುಟುಂಬವು ಬಿಡುಗಡೆ ಮಾಡಿದ ಹೃದಯ ವಿದ್ರಾವಕ ವೀಡಿಯೊದಲ್ಲಿ, ಮಹಿಳೆ ಹಮಾಸ್ ಉಗ್ರಗಾಮಿಯೊಬ್ಬನ ಮೋಟಾರ್ ಸೈಕಲ್ ನಲ್ಲಿ ತನ್ನ ಜೀವಕ್ಕಾಗಿ ಬೇಡಿಕೊಳ್ಳುತ್ತಿವುದು ಕಂಡುಬಂದಿದೆ. “ನನ್ನನ್ನು ಕೊಲ್ಲಬೇಡಿ!” ಎಂದು ಆಕೆ ಹೇಳುವುದು ಕೇಳಿಸುತ್ತದೆ. ಉಗ್ರಗಾಮಿಗಳು ಒತ್ತೆಯಾಳಾಗಿದ್ದಾಗ ತನ್ನ ಗೆಳತಿಯನ್ನು ಅಸಹಾಯಕತೆಯಿಂದ ನೋಡುತ್ತಿರುವ ಆಕೆಯ ಗೆಳೆಯನನ್ನೂ ದೃಶ್ಯದಲ್ಲಿ ಕಾಣಬಹುದು.
ಇದನ್ನೂ ಓದಿ:Illegal sand filter trade: ಕೃಷಿ ಭೂಮಿಯಲ್ಲೇ ಅಕ್ರಮ ಮರಳು ಫಿಲ್ಟರ್ ದಂಧೆ!
ಗೆಳೆಯ ನಾಥನ್ ಅವರ ಸಹೋದರ ಮೋಶೆ ಓರ್ಸ್ ಅವರು ಕಾಣೆಯಾದ ದೂರನ್ನು ದಾಖಲಿಸಿದ್ದಾರೆ. ನಾಥನ್ ಮತ್ತು ಅವರ ಗೆಳತಿಯ ಅಪಹರಣದ ವೀಡಿಯೊವನ್ನು ತುರ್ತು ತಂಡಗಳಿಗೆ ತಿಳಿಸಲಾಯಿತು.
“ನಾವು ಚಿಂತಿತರಾಗಿದ್ದೇವೆ ಮತ್ತು ಕರೆ ಮಾಡಲು ಪ್ರಯತ್ನಿಸಿದ್ದೇವೆ. ಅವನ ಫೋನ್ ಸಂಪರ್ಕ ಲಭ್ಯವಿಲ್ಲ ಮತ್ತು ಅವಳದೂ ಸಹ ಲಭ್ಯವಿರಲಿಲ್ಲ”ಎಂದು ಇಸ್ರೇಲ್ ನ್ಯಾಷನಲ್ ನ್ಯೂಸ್ ಉಲ್ಲೇಖಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.