ಕಿಮ್ ಜಾಂಗ್‌ಗೆ ಅನಾರೋಗ್ಯ?
Team Udayavani, Jun 11, 2021, 7:13 AM IST
ಸಿಯೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅನಾರೋಗ್ಯ ಪೀಡಿತರಾಗಿದ್ದಾರೆ ಎಂದು ವದಂತಿ ಹಬ್ಬಿದೆ.
ಹಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇದ್ದ ಅವರು ಸಭೆಯಲ್ಲಿ ಇತ್ತೀಚೆಗೆ ಭಾಗವಹಿಸಿದ್ದರು. ದಢೂತಿ ಶರೀರ ಹೊಂದಿದ್ದ ಅವರೀಗ ತೆಳ್ಳಗಾಗಿದ್ದಾರೆ. ಹೀಗಾಗಿ ಅವರು ಮೊದಲಿನ ಹಾಗಿಲ್ಲ ಎಂದು ಮೇಲ್ನೋಟಕ್ಕೆ ಗೊತ್ತಾಗುವಂತೆ ಇರುವ ಅಂಶವನ್ನು ದಕ್ಷಿಣ ಕೊರಿಯಾದ ಡೈಲಿ ಎನ್‌ಕೆ ಎಂಬ ಪತ್ರಿಕೆ ವರದಿ ಮಾಡಿದೆ. 2020ರ ನವೆಂಬರ್ ಮತ್ತು ಎಪ್ರಿಲ್‌ನ ಫೋಟೋಗಳನ್ನು ಹೋಲಿಕೆ ಮಾಡಿದಾಗ ಈ ಸಂಶಯ ಉಂಟಾಗಿದೆ. ಅವರ ದೇಹದ ತೂಕ ಗಣನೀಯವಾಗಿ ಇಳಿದಿದೆ ಎಂದು ಅಂದಾಜಿಸಿದೆ.