ಉತ್ತರ ಕೊರಿಯಾ ಸರ್ವಾಧಿಕಾರಿ ಜೀವಂತವಾಗಿದ್ದಾರೆಯೇ? ಭದ್ರತಾ ಸಲಹೆಗಾರ ನೀಡಿದ ಮಾಹಿತಿ ಇಲ್ಲಿದೆ
Team Udayavani, Apr 27, 2020, 7:59 AM IST
ಸಿಯೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ‘ಜೀವಂತ ಮತ್ತು ಆರೋಗ್ಯವಾಗಿದ್ದಾರೆ’ ಎಂದು ಉನ್ನತ ಭದ್ರತಾ ಸಲಹೆಗಾರ ಮೂನ್ ಜೇ ಇನ್ ತಿಳಿಸಿದ್ದಾರೆ. ಕಿಮ್ ಜಾಂಗ್ ಉನ್ ಆರೋಗ್ಯ ತೀರಾ ಹದಗೆಟ್ಟಿರುವುದರಿಂದ ಸಾವನ್ನಪ್ಪಿರಲೂಬಹುದು ಎಂಬ ಅಲ್ಲಿನ ಮಾಧ್ಯಮಗಳ ವರದಿಗಳ ಹಿನ್ನಲೆಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಸರ್ಕಾರದ ಸ್ಥಾನವೂ ಭದ್ರವಾಗಿದೆ. ಕಿಮ್ ಜಂಗ್ ಉನ್ ಉತ್ತಮ ಆರೋಗ್ಯವನ್ನು ಹೊಂದಿದ್ದಾರೆ. ಏಪ್ರಿಲ್ 13 ರಿಂದ ದೇಶದ ಪೂರ್ವದ ರೆಸಾರ್ಟ್ ಪಟ್ಟಣ ವೋನ್ಸಾನ್ ನಲ್ಲಿ ಅವರು ತಂಗಿದ್ದಾರೆ. ಮಾಧ್ಯಮಗಳು ವರದಿ ಮಾಡಿದಂತೆ ಯಾವುದೇ ಅನುಮಾನಸ್ಪದ ಘಟನೆಗಳು ನಡೆದಿಲ್ಲ ಎಂದು ಉನ್ನತ ಭದ್ರತಾ ಸಲಹೆಗಾರ ಮೂನ್ ಭಾನುವಾರ ಸಿಎನ್ ಎನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 15 ರಂದು ಕಿಮ್ ಜಾಂಗ್ ಉನ್ ಅವರ ಅಜ್ಜ ಮತ್ತು ಉತ್ತರ ಕೊರಿಯಾದ ಸಂಸ್ಥಾಪಕ ಕಿಮ್ ಇಲ್ ಸುಂಗ್ ಅವರ ಜನ್ಮದಿನ, ಮತ್ತು ದೇಶದ ರಾಜಕೀಯ ಕ್ಯಾಲೆಂಡರ್ ನ ಪ್ರಮುಖ ದಿನದ ಕಾರ್ಯಕ್ರಮದಲ್ಲಿ ಕಿಮ್ ಜಂಗ್ ಉನ್ ಭಾಗವಹಿಸಿರಲಿಲ್ಲ. ಈ ಕಾರಣದಿಂದ ಮಾಧ್ಯಮಗಳಲ್ಲಿ ಅವರು ಅನಾರೋಗ್ಯ ಪೀಡಿತರಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಇವರು ಏಪ್ರಿಲ್ 11 ರಂದು ಪಕ್ಷದ ಕಾರ್ಯಕ್ರಮವೊಂದರಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.
ಅದಾಗ್ಯೂ ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರಲು ಕಾರಣ ತಿಳಿದುಬಂದಿಲ್ಲ. ಉತ್ತರ ಕೊರಿಯಾದ ಅಧ್ಯಕ್ಷಿಯ ಕಚೇರಿ ಮಾತ್ರ ದೇಶದಲ್ಲಿ ಯಾವುದೇ ವಿಶೇಷ ಘಟನೆಗಳು ನಡೆದಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿವೆ.
ಉತ್ತರ ಕೊರಿಯಾದ ಮಾಧ್ಯಮವಾದ ಡೈಲಿ ಎನ್‌ಕೆ, ಈ ತಿಂಗಳ ಆರಂಭದಲ್ಲಿ ಹೃದಯ ಸಂಬಂಧಿ ಪ್ರಕ್ರಿಯೆಗೆ ಒಳಪಟ್ಟ ನಂತರ ಕಿಮ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.