ಕೋಲ್ಡ್ ನೂಡಲ್ಸ್ ಸೂಪರ್ ಹಿಟ್
Team Udayavani, Apr 29, 2018, 6:00 AM IST
ಸಿಯೋಲ್: ಉತ್ತರ ಮತ್ತು ದಕ್ಷಿಣ ಕೊರಿಯಾ ನಾಯಕರು ಗಡಿ ಪ್ರದೇಶ ಪಾನ್‌ಮುನ್‌ಜಾಮ್‌ನಲ್ಲಿ ಶಾಂತಿ ಮಾತುಕತೆಗೆ ನಾಂದಿ ಹಾಡಿದ ಬೆನ್ನಲ್ಲೇ ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್‌ನಲ್ಲಿ ಉತ್ತರ ಕೊರಿಯಾದ ಕೋಲ್ಡ್ ನೂಡಲ್ಸ್‌ಗೆ ಭಾರಿ ಬೇಡಿಕೆ ಬಂದಿದೆ.
ಶನಿವಾರ ನಡೆದಿದ್ದ ದ್ವಿಪಕ್ಷೀಯ ಮಾತುಕತೆ ವೇಳೆ ಉ.ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ಗೆ ಪ್ರಿಯವಾದ ಹಾಗೂ ಅಲ್ಲಿನ ವಿಶೇಷ ಖಾದ್ಯವಾದ ಕೋಲ್ಡ್ ನೂಡಲ್ಸ್ ಅನ್ನು ತರಿಸಲಾಗಿತ್ತು. ದಕ್ಷಿಣ ಕೊರಿಯಾ ಅಧ್ಯಕ್ಷರ ವೈಯಕ್ತಿಕ ಕೋರಿಕೆ ಮೇರೆಗೆ ಅದನ್ನು ಸಿದ್ಧಪಡಿಸುವ ಬಾಣಸಿಗರ ಸಹಿತ ನೂಡಲ್ಸ್ ಪ್ಯಾಕೆಟ್‌ಗಳೂ ಪಾನ್‌ಮುನ್‌ಜಾಮ್‌ಗೆ ಆಗಮಿಸಿದ್ದವು. “ಶುಕ್ರವಾರದ ಔತಣಕೂಟಕ್ಕೆ ಪಾಂಗ್‌ಯಾಂಗ್‌ನಿಂದ ಕೋಲ್ಡ್ ನೂಡಲ್ಸ್ ತರಿಸಿದ್ದೇವೆ’ ಎಂದು ಮೂನ್ ಜೇ ಘೋಷಣೆ ಮಾಡಿದ್ದರು. “ಈ ವಿಶೇಷ ತಿನಿಸು ಈಗ ದೂರದ ಪಾಂಗ್‌ಯಾಂಗ್‌ನಲ್ಲಿ ಇಲ್ಲ. ನಿಮ್ಮಲ್ಲಿಯೇ ಇದೆ’ ಎಂದು ಹೇಳಿದ್ದರು.
ಏನಿದು ಕೋಲ್ಡ್ ನೂಡಲ್ಸ್?: ಏಕಾಏಕಿ ಸಿಯೋಲ್‌ನಲ್ಲಿ ಜನಪ್ರಿಯಗೊಂಡ “ಕೋಲ್ಡ್ ನೂಡಲ್ಸ್’ನಲ್ಲಿ ಮಾಂಸ ಕುದಿಸಿದ ನೀರು, ದನದ ಕೆಚ್ಚಲಿನ ಮಾಂಸ, ಮೂಲಂಗಿ ಉಪ್ಪಿನಕಾಯಿ, ಎಳೆ ಸೌತೆಕಾಯಿ ತುಂಡುಗಳು, ಅರ್ಧ ಬೇಯಿಸಿದ ಮೊಟ್ಟೆ ಇರುತ್ತದೆ.
ರೆಸ್ಟಾರೆಂಟ್‌ಗಳಲ್ಲಿ ಸಾಲು: ಸಿಯೋಲ್‌ನ ಪ್ರಮುಖ ರೆಸ್ಟಾರೆಂಟ್ ಒಂದರ ಮುಂದೆ ಶನಿವಾರ 40 ಮೀಟರ್ ಉದ್ದಕ್ಕೆ ಜನರು ಸಾಲುಗಟ್ಟಿ ನಿಂತಿದ್ದರು. ಈ ರೀತಿಯ ಜನಜಂಗುಳಿ ಹಿಂದೆಂದೂ ನೋಡಿಲ್ಲ ಎಂದಿದ್ದಾರೆ ಹಲವರು ಗ್ರಾಹಕರು. ಜತೆಗೆ ಟ್ವಿಟರ್‌ನಲ್ಲಿಯೂ ಅದು ಟ್ರೆಂಡ್ ಆಗಿದೆ. ಜತೆಗೆ ದಕ್ಷಿಣ ಕೊರಿಯಾದ ಡೇಜಿಯಾನ್ ನಗರದಲ್ಲಿ ಗ್ರಾಹಕರಿಗೆ “ಯುನಿಫಿಕೇಷನ್ ಲಿಕ್ಕರ್’ ಮತ್ತು “ಯುನಿಫಿಕೇಶನ್ ಪಿಜಾ’ ನೀಡುವುದಾಗಿ ರೆಸ್ಟಾರೆಂಟ್ ಮಾಲೀಕರು ಹೇಳಿಕೊಂಡಿದ್ದಾರೆ. ಎರಡೂ ದೇಶಗಳು ವಿಲೀನಗೊಳ್ಳುವ ವರೆಗೆ ಈ ಆಫರ್ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.