ಪಾಕ್ ಗೆ ಮುಖಭಂಗ, ಜಾಧವ್ ಗೆ ವಿಧಿಸಿದ್ದ ಗಲ್ಲುಶಿಕ್ಷೆಗೆ ICJ ತಡೆ
Team Udayavani, May 18, 2017, 3:54 PM IST
ಹೇಗ್(ನೆದರ್ಲೆಂಡ್):ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತಕ್ಕೆ ಭಾರೀ ಗೆಲುವು ಸಿಕ್ಕಿದ್ದು, ಜಾಧವ್ ಗೂಢಚಾರನೆಂಬ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ. ಅಲ್ಲದೇ ಈ ಕೇಸ್ ಐಸಿಜೆ ವ್ಯಾಪ್ತಿಗೆ ಬರುವುದಿಲ್ಲ ಎಂಬ ಪಾಕಿಸ್ತಾನದ ವಾದವನ್ನು ಅಂತಾರಾಷ್ಟ್ರೀಯ ಕೋರ್ಟ್ ಸಾರಸಗಟಾಗಿ ತಿರಸ್ಕರಿಸಿ, ಪಾಕಿಸ್ತಾನ ಸೇನಾ ಕೋರ್ಟ್ ಜಾಧವ್ ಗೆ ವಿಧಿಸಿದ್ದ ಗಲ್ಲುಶಿಕ್ಷೆಗೆ ಅಂತಿಮ ತೀರ್ಪು ನೀಡುವರೆಗೂ ತಡೆಯಾಜ್ಜೆ ನೀಡಿದೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಭಾರೀ ಮುಖಭಂಗಕ್ಕೊಳಗಾಗಿದೆ.
ನೆದರ್ಲೆಂಡ್ ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ 11 ಮಂದಿ ನ್ಯಾಯಮೂರ್ತಿಗಳ ಪೀಠವು ತೀರ್ಪನ್ನು ಗುರುವಾರ ಪ್ರಕಟಿಸಿದೆ. 2017ರ ಆಗಸ್ಟ್ ನಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಜಾಧವ್ ಕುರಿತು ಅಂತಿಮ ತೀರ್ಪು ಪ್ರಕಟಿಸಲಿದೆ. ಪಾಕಿಸ್ತಾನ ಜಾಧವ್ ಭೇಟಿಗೆ ಅವಕಾಶ ನೀಡದೆ ನಿಯಮ ಉಲ್ಲಂಘಿಸಿದೆ. ಹಾಗಾಗಿ ಜಾಧವ್ ಗೆ ಗಲ್ಲುಶಿಕ್ಷೆ ಜಾರಿಯಾಗದಂತೆ ಪಾಕಿಸ್ತಾನ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕೆಂದು ಐಸಿಜೆ ಆದೇಶ ನೀಡಿದೆ.
ಸೋಮವಾರವಷ್ಟೇ ಭಾರತ ಮತ್ತು ಪಾಕಿಸ್ತಾನದ ಪರ ವಕೀಲರು ಅಂತಾರಾಷ್ಟ್ರೀಯ ಕೋರ್ಟ್ ಮುಂದೆ ತಮ್ಮ
ವಾದಗಳನ್ನು ಮಂಡಿಸಿದ್ದರು. ವಿಚಾರಣೆ ವೇಳೆ ಭಾರತವನ್ನು ಪ್ರತಿನಿಧಿಸಿದ ನ್ಯಾಯವಾದಿ ಹರೀಶ್ ಸಾಳ್ವೆ ಅವರು,
ಕುಲಭೂಷಣ್‌ಗೆ ನೀಡಿರುವ ಶಿಕ್ಷೆಯನ್ನು ಕೂಡಲೇ ರದ್ದು ಮಾಡುವಂತೆ ಮತ್ತು ಪಾಕಿಸ್ತಾನದ ಕ್ರಮವನ್ನು ಅಕ್ರಮ
ಎಂದು ಘೋಷಿಸುವಂತೆ ಮನವಿ ಮಾಡಿದ್ದರು.
ಏತನ್ಮಧ್ಯೆ, ಭಾರತ ಮತ್ತು ಪಾಕಿಸ್ತಾನ ನಡುವಣ ಶಾಂತಿ ಮಾತುಕತೆಗೆ ಭಾರತ ಸಹಕರಿಸುತ್ತಿಲ್ಲ. ಪಾಕ್ ಮಾತುಕತೆಗೆ ಸಿದ್ಧವಿದೆ. ಆದರೆ ಭಾರತ ಹಳಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಅಮೆರಿಕದಲ್ಲಿನ ಪಾಕ್ ರಾಯಭಾರಿ ಐಜಾಜ್ ಅಹಮದ್ ಚೌಧರಿ ಆರೋಪಿಸಿದ್ದರು.
ಏನಿದು ಪ್ರಕರಣ:
ಗೂಢಚಾರಿಕೆ ಆರೋಪದಲ್ಲಿ ಪಾಕಿಸ್ತಾನ ಸೇನಾ ನ್ಯಾಯಾಲಯ ಕುಲಭೂಷಣ್ ಜಾಧವ್ ಗೆ ಗಲ್ಲುಶಿಕ್ಷೆ ವಿಧಿಸಿತ್ತು. ಈ ಸಂಬಂಧ ಜಾಧವ್ ಗೆ ಗಲ್ಲುಶಿಕ್ಷೆ ನೀಡಬಾರದೆಂದು ಕೋರಿ ಭಾರತ ಸರ್ಕಾರ ನೆದರ್ಲಾಂಡ್ ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾ.ರೋನಿ ಅಬ್ರಹಾಂ ನೇತೃತ್ವದ 11 ನ್ಯಾಯಮೂರ್ತಿಗಳ ಪೀಠ ವಾದ, ವಿವಾದ ಆಲಿಸಿದ ಬಳಿಕ ಮೇ9ರಂದು ಜಾಧವ್ ಗಲ್ಲುಶಿಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಐಸಿಜೆ ತೀರ್ಪಿನಲ್ಲಿ ಹೇಳಿರುವುದೇನು?
ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿರುವ ಸಂದರ್ಭ ವಿವಾದಾತ್ಮಕವಾಗಿದೆ. ಜಾಧವ್ ಪ್ರಕರಣ ಅಂತಾರಾಷ್ಟ್ರೀಯ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂಬ ಪಾಕ್ ಹೇಳಿಕೆಯನ್ನು ಐಸಿಜೆ ತಿರಸ್ಕರಿಸಿದೆ. ಜಾಧವ್ ಗೂಢಚಾರನೆಂಬ ಆರೋಪ ಸಾಬೀತಾಗುವುದಿಲ್ಲ. ವಿಯೆನ್ನಾ ಒಪ್ಪಂದದ ಬಗ್ಗೆ ಭಾರತ ಮತ್ತು ಪಾಕ್ ಗಮನ ಸೆಳೆದ ನ್ಯಾಯಾಧೀಶರು, ಜಾಧವ್ ಭೇಟಿಗೆ ಪಾಕಿಸ್ತಾನ ರಾಜತಾಂತ್ರಿಕ ಅವಕಾಶವನ್ನು ನೀಡಬೇಕಿತ್ತು ಎಂದು ತಿಳಿಸಿದೆ.
ಭಾರತದ ವಾದ:
2016ರಲ್ಲಿ ಜಾಧವ್ ಅವರನ್ನು ಇರಾನ್ ನಲ್ಲಿ ಬಂಧಿಸಲಾಗಿತ್ತು.
ಬೇಹುಗಾರಿಕೆ ಆರೋಪ ಸುಳ್ಳು, ಬಂಧನದ ಬಗ್ಗೆ ಮಾಹಿತಿಯೇ ಕೊಟ್ಟಿಲ್ಲ
ಭಾರತ 16 ಬಾರಿ ಮನವಿ ಸಲ್ಲಿಸಿದರೂ ಪಾಕ್ ತಿರಸ್ಕರಿಸಿತ್ತು
ಸುಳ್ಳು ಆರೋಪದಲ್ಲಿ ಬಂಧಿಸಲಾಗಿದೆ, ಪಾಕ್ ವಿಯೆನ್ನಾ ಒಪ್ಪಂದ ಉಲ್ಲಂಘಿಸಿದೆ.
ಕಾನ್ಸುಲರ್ ಕಾನೂನಿನ ಹಕ್ಕಿನ ಆಧಾರದ ಮೇಲೆ ಮನವಿ
ಯಾವುದೇ ದಾಖಲೆ ನೀಡಿಲ್ಲ
ವಿಚಾರಣೆ ಮುಗಿಯುವ ಮುನ್ನವೇ ಗಲ್ಲುಶಿಕ್ಷೆ
ಪಾಕಿಸ್ತಾನದ ವಾದ:
ಜಾಧವ್ ಪಾಸ್ ಪೋರ್ಟ್ ನಲ್ಲಿ ಮುಸ್ಲಿಂ ಸೇರಿ 2 ಹೆಸರು ಇರುವುದು ಪತ್ತೆ.
ಭಾರತೀಯ ಎಂಬುದನ್ನೇ ಸಾಬೀತುಪಡಿಸಿಲ್ಲ
ಭಾರತ ಆರೋಪ ಸಾಬೀತುಪಡಿಸುವಲ್ಲಿ ವಿಫಲವಾಗಿದೆ
ಅಪಹರಿಸಲಾಗಿದೆ ಎಂಬ ಆರೋಪ ಸುಳ್ಳು
ನಾವು ದೇಶದ ಹಿತಾಸಕ್ತಿ ಕಾಪಾಡಿದ್ದೇವೆ, ಇದು ನಮ್ಮ ದೇಶದ ಭದ್ರತೆಯ ವಿಚಾರ
ವಿಯೆನ್ನಾ ಒಪ್ಪಂದ ಇದಕ್ಕೆ ಅನ್ವಯವಾಗಲ್ಲ, ಹಾಗಾಗಿ ಜಾಧವ್ ಗಲ್ಲುಶಿಕ್ಷೆ ಪ್ರಕರಣ ಐಸಿಜೆ ಕೋರ್ಟ್ ವ್ಯಾಪ್ತಿಗೆ ಬರಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
Bangladesh: 42,600 ಕೋಟಿ ರೂ. ಲಂಚ ಕೇಸ್: ಹಸೀನಾ ವಿರುದ್ಧ ತನಿಖೆ ಶುರು
America: ಪ್ರತೀಕಾರ- ಭಾರತದ ನಟೋರಿಯಸ್ ಡ್ರ*ಗ್ಸ್ ಸ್ಮಗ್ಲರ್ ಶೂಟೌಟ್ ನಲ್ಲಿ ಹ*ತ್ಯೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
Ambedkar Row: ಕಾಂಗ್ರೆಸ್ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ
Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.