Hard Disk: ಬಿಟ್ಕಾಯಿನ್ ಇದ್ದ ಹಾರ್ಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
ಕಸದ ಗುಡ್ಡೆ ಸೇರಿರುವ ಡಿಸ್ಕ್ ಪಡೆಯಲು ಒದ್ದಾಟ | ಪರಿಸರದ ದೃಷ್ಟಿಯಿಂದ ಕಸ ತೆಗೆಯಲು ಬಿಡದ ಸರ್ಕಾರ
Team Udayavani, Nov 27, 2024, 7:05 AM IST
ನವದೆಹಲಿ: ತಪ್ಪುಗಳಿಗೆ ಬೆಲೆ ತೆರಬೇಕಾಗುತ್ತದೆ ಎಂಬುದೇನೋ ಸರಿ! ಆದರೆ ವೇಲ್ಸ್‌ನ ವ್ಯಕ್ತಿಯೊಬ್ಬ ಕಣ್ತಪ್ಪಿನಿಂದಾಗಿ ಬರೋಬ್ಬರಿ 6015 ಕೋಟಿ ರೂ. ಕಳೆದುಕೊಂಡಿದ್ದಾನೆ. ಮನೆಯಲ್ಲಿರುವ ಕಸವನ್ನು ಎಸೆಯುವಂತೆ ಪ್ರೇಯಸಿಯ ಮೇಲೆ ಈತ ಜೋರು ಮಾಡಿದ್ದಕ್ಕೆ, ಕಸದ ಡಬ್ಬದ ಪಕ್ಕದಲ್ಲಿಟ್ಟಿದ್ದ ಹಾರ್ಡ್‌ಡಿಸ್ಕನ್ನು ಎಸೆದಿದ್ದಾಳೆ. ಸುಮಾರು 8000 ಬಿಟ್ಕಾಯಿನ್ ಇದ್ದ ಹಾರ್ಡ್‌ಡಿಸ್ಕನ್ನು ಕಸದ ಡಬ್ಬದ ಪಕ್ಕದಲ್ಲಿಟ್ಟ ತಪ್ಪಿಗೆ ಕಳೆದ 1 ದಶಕದಿಂದ ಅದನ್ನು ಹುಡುಕುವ ಕೆಲಸದಲ್ಲಿ ಆ ವ್ಯಕ್ತಿ ತೊಡಗಿಕೊಳ್ಳುವಂತಾಗಿದೆ!
ವೇಲ್ಸ್‌ನ ಜೇಮ್ಸ್ ಹಾವೆಲ್ಸ್ ಎಂಬ ವ್ಯಕ್ತಿ 2009ರಿಂದ ಬಿಟ್ಕಾಯಿನ್ ಮೈನಿಂಗ್‌ನಲ್ಲಿ ತೊಡಗಿದ್ದ. ಆತ ಸುಮಾರು 8000 ಬಿಟ್ಕಾಯಿನ್ (6015 ಕೋಟಿ ರೂ. ಮೌಲ್ಯ) ಸಂಪಾದಿಸಿದ್ದ. ಇ-ವೇಸ್ಟ್‌ಗಳನ್ನು ಎಸೆಯುವ ಸ್ಥಳದಲ್ಲಿ ಹಾರ್ಡ್‌ಡಿಸ್ಕ್ ಸಹ ಎಸೆಯಲಾಗಿದ್ದು, ಕೆಲ ವರ್ಷಗಳ ಈ ವಿಷಯ ತಿಳಿದ ಹಾವೆಲ್ಸ್ ಅದನ್ನು ಮರಳಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾನೆ.
ಆದರೆ ಹಳೆಯ ಇ-ತ್ಯಾಜ್ಯಗಳನ್ನು ಮತ್ತೆ ತೆಗೆಯುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಅತ್ಯಂತ ದುಬಾರಿ ತಪ್ಪು ಎಂದೇ ಕರೆಯಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.