ನ.16ರವರೆಗೆ ಲಂಕಾ ಸಂಸತ್ತು ಅಮಾನತು
Team Udayavani, Oct 28, 2018, 6:00 AM IST
ಕೊಲಂಬೊ: ಶ್ರೀಲಂಕಾ ಪ್ರಧಾನಿಯಾಗಿದ್ದ ರಣಿಲ್ ವಿಕ್ರಮಸಿಂಘೆ ಅವರನ್ನು ಉಚ್ಛಾಟಿಸಿ, ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿಸಿದ ಅಧ್ಯಕ್ಷ ಮೈತಿಪಾಲ ಸಿರಿಸೇನಾ ಅವರ ಕ್ರಮ ಆ ದೇಶದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಪರಿಸ್ಥಿತಿ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ, ಶ್ರೀಲಂಕಾ ಸಂಸತ್ತನ್ನು ನ. 16ರವರೆಗೆ ಸಿರಿಸೇನಾ ಅಮಾನತುಗೊಳಿಸಿದ್ದಾರೆ. ಈ ಮೂಲಕ, ರಾಜಪಕ್ಸೆಗೆ ಸಂಸತ್ತಿನಲ್ಲಿ ವಿಶ್ವಾಸ ಮತ ಸಾಬೀತುಪಡಿಸಲು ಬೇಕಾದ ಕಾಲಾ ವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಧಾನಿಯ ಕಾರ್ಯದರ್ಶಿ ಸಮನ್ ಏಕನಾಯಕೆ ಅವರನ್ನೂ ಸೇವೆಯಿಂದ ವಜಾಗೊಳಿಸಲಾಗಿದೆ.
ಸಿಂಘೆಗೆ ಬೆಂಬಲ: ಸದ್ಯದಲ್ಲೇ ಪುನರಾರಂಭವಾಗುವ ಸಂಸತ್ತಿನಲ್ಲಿ ತಾವೇ ವಿಶ್ವಾಸಮತ ಸಾಬೀತುಪಡಿಸುವ ವಿಶ್ವಾಸ ವನ್ನು ಉಚ್ಛಾಟಿತ ಪ್ರಧಾನಿ ವಿಕ್ರಮಸಿಂಘೆ ವ್ಯಕ್ತಪಡಿಸಿದ್ದು, ಕೂಡಲೇ ಸಂಸತ್ತಿನಲ್ಲಿ ತುರ್ತು ಅಧಿವೇಶನ ಕರೆಯಬೇಕೆಂದು ಅಧ್ಯಕ್ಷ ಸಿರಿಸೇನಾ ಅವರನ್ನು ಆಗ್ರಹಿಸಿದ್ದಾರೆ. ಅವರ ಹೇಳಿಕೆಗೆ ಸರ್ಕಾರದಲ್ಲಿ ಭಾಗಿಯಾಗಿರುವ ತಮಿಳು, ಮುಸ್ಲಿಂ ತತ್ವಾಧಾರಿತ ಪಕ್ಷಗಳು ಬೆಂಬಲ ಸೂಚಿಸಿವೆ.
225 ಶ್ರೀಲಂಕಾ ಸಂಸತ್ತಿನ ಒಟ್ಟು ಬಲಾಬಲ
113 ವಿಶ್ವಾಸಮತಕ್ಕೆ ಬೇಕಾದ ಬೆಂಬಲ
95 ರಾಜಪಕ್ಸೆ-ಸಿರಿಸೇನಾ ಪರ ಸಂಸದರು
106 ಸಿಂಘೆಯವರ ಯುಎನ್‌ಪಿ ಸಂಸದರ ಸಂಖ್ಯೆ
ಭಾರತದ ಮೇಲಾಗುವ ಪರಿಣಾಮ
ಚೀನಾ ಜತೆಗೆ ರಾಜಪಕ್ಸೆ ಆಪ್ತ ಸಂಬಂಧ ಹೊಂದಿರುವ ಪರಿಣಾಮ ಲಂಕಾ ಮೇಲೆ ಚೀನಾದ ಪ್ರಭಾವ ಹೆಚ್ಚಾಗಲಿದೆ.
ಶ್ರೀಲಂಕಾದ ಮೂಲ ಸೌಕರ್ಯ ಹಾಗೂ ಇನ್ನಿತರ ಕ್ಷೇತ್ರಗಳಿಗೆ ಚೀನಾದಿಂದ ಅಪಾರ ಪ್ರಮಾಣದ ಧನ ಸಹಾಯ.
ಈವರೆಗೆ ಶ್ರೀಲಂಕಾದ ಆಂತರಿಕ ರಾಜಕಾರಣದ ಮೇಲೆ ಭಾರತ ಹೊಂದಿದ್ದ ಪ್ರಭಾವ ತಗ್ಗಲಿದೆ.
ಚೀನಾವನ್ನು ಪಕ್ಕಕ್ಕಿರಿಸಿ, ಭಾರತ, ಜಪಾನ್ ಜತೆಗಿನ ಸ್ನೇಹ ಮತ್ತಷ್ಟು ಗಾಢವಾಗಿಸುವ ವಿಕ್ರಮಸಿಂಘೆ ವಿದೇಶಾಂಗ ನೀತಿಗೆ ಹಿನ್ನಡೆ.
ಪ್ರಧಾನಿಯಾಗಿ ರಾಜಪಕ್ಸೆ ನೇಮಕ ದಶಕಗಳಿಂದ ತಮ್ಮ ಹಕ್ಕುಗಳನ್ನು ಕಳೆದು ಕೊಂಡಿರುವ ಲಂಕಾ ತಮಿಳರಿಗೆ ಆಘಾತ ತಂದಿದೆ.
ಸ್ಟಾಲಿನ್, ಡಿಎಂಕೆ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.