ಲಷ್ಕರ್, ತೆಹ್ರೀಕ್ ಅಪಾಯಕಾರಿ
Team Udayavani, Oct 6, 2018, 8:13 AM IST
ವಾಷಿಂಗ್ಟನ್: ಪಾಕಿಸ್ಥಾನದಲ್ಲಿ ನೆಲೆಯೂರಿರುವ ಲಷ್ಕರ್-ಎ-ತಯ್ಯಬಾ (ಎಲ್ಇಟಿ), ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ಥಾನ್ (ಟಿಟಿಪಿ) ಹಾಗೂ ಬೋಕೋ ಹರಾಂ ಉಗ್ರ ಸಂಘಟನೆಗಳು ಅಮೆರಿಕದ ಹಿತಾಸಕ್ತಿಗೆ ಈಗಲೂ ಮಾರಣಾಂತಿಕವಾಗಿವೆ ಎಂದು ಅಮೆರಿಕ ಘೋಷಿಸಿದೆ. ಉಗ್ರ ನಿಗ್ರಹಕ್ಕಾಗಿ ತಾನು ರೂಪಿಸಿರುವ ಹೊಸ ಕಾರ್ಯಸೂಚಿಯಲ್ಲಿ ಈ ಮೂರು ಉಗ್ರ ಸಂಘಟನೆಗಳ ಹೆಸರುಗಳನ್ನು ಉಲ್ಲೇಖೀಸಲಾಗಿದೆ.
ಈಗಾಗಲೇ ಅಮೆರಿಕದ ಪಾಲಿಗೆ ಅಪಾಯಕಾರಿಯಾಗಿರುವ ಐಸಿಸ್, ಅಲ್ ಖೈದಾ ಸಂಘಟನೆಗಳ ಜತೆಗೆ ಬೋಕೋ ಹರಾಂ, ಎಲ್ಇಟಿ, ಟಿಟಿಪಿಯಂಥ ಹಲವಾರು ಕಟ್ಟರ್ ಉಗ್ರವಾದಿಗಳ ಗುಂಪುಗಳು ಅಮೆರಿಕದ ಮೇಲೆ ಹಗೆ ತೀರಿಸಿಕೊಳ್ಳಲು ಕಾಯುತ್ತಿದ್ದು, ಪಾಶ್ಚಾತ್ಯ ದೇಶಗಳ ಪ್ರಭಾವವನ್ನು ಅಂತ್ಯಗೊಳಿಸಲು ಮುಂದಾಗಿವೆ ಎಂದು ಅಮೆರಿಕ ತಿಳಿಸಿದೆ.
ಏತನ್ಮಧ್ಯೆ, ಪಾಕಿಸ್ಥಾನ ಸರಕಾರ ತಾಲಿಬಾನ್ ಉಗ್ರ ಸಂಘಟನೆಯ ಮೇಲೆ ತಾನು ಹೊಂದಿರುವ ಪ್ರಭಾವವನ್ನು ಬಳಸಿಕೊಂಡು, ಆ ಸಂಘಟನೆಯನ್ನು ಶಾಂತಿ ಮಾತುಕತೆಗೆ ಎಳೆಯಲು ಪ್ರಯತ್ನಿಸಬೇಕು ಹಾಗೂ ಅದರ ನಾಯಕರು ಒಂದು ದೇಶದ ಗಡಿಯಿಂದ ಮತ್ತೂಂದು ದೇಶದ ಗಡಿಯೊಳಗೆ ನುಸುಳದಂತೆ ತಾಕೀತು ಮಾಡಬೇಕೆಂದು ಅಮೆರಿಕದ ಕಮಾಂಡರ್ ಜನರಲ್ ಜೋಸೆಫ್ ವೋಟೆಲ್ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
Burqa ban; ಸ್ವಿಟ್ಜರ್ಲೆಂಡ್ ನಲ್ಲಿ ಬುರ್ಖಾ ನಿಷೇಧ ಕಾನೂನು ಜಾರಿ: ಗರಿಷ್ಠ ದಂಡ
Court Verdict: ಹಿಂದೂ ಸಂತ ಚಿನ್ಮಯ್ ದಾಸ್ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್
Chinmay Das: ಇಂದು ಬಾಂಗ್ಲಾದಲ್ಲಿ ಚಿನ್ಮಯ್ ದಾಸ್ ಬೇಲ್ ಅರ್ಜಿ ವಿಚಾರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.