ಸ್ಪೇನ್‌ನ ದ್ವೀಪದಲ್ಲಿ ಬೆಂಕಿಯುಗುಳುತ್ತಿರುವ ಅಗ್ನಿಪರ್ವತ: ಈಜುಕೊಳ ನುಂಗಿದ ಜ್ವಾಲಾಮುಖಿ
Team Udayavani, Sep 22, 2021, 6:30 AM IST
ಲಾ ಪಾಲ್ಮಾ: ಸ್ಪೇನ್‌ನ ಲಾ ಪಾಲ್ಮಾ ದ್ವೀಪದಲ್ಲಿನ ಜ್ವಾಲಾಮುಖಿ ಸ್ಫೋಟದ ತೀವ್ರತೆಯು ದಿನೇ ದಿನೆ ಹೆಚ್ಚಾಗುತ್ತಿದ್ದು, ಅಗ್ನಿಪರ್ವತದಿಂದ ಹರಿದುಬರುತ್ತಿರುವ ಲಾವಾ ಸಮೀಪದ ಮನೆಯೊಂದರ ಈಜುಕೊಳವೊಂದನ್ನು ನುಂಗಿ ಹಾಕುತ್ತಿರುವ ದೃಶ್ಯವು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಅಗ್ನಿಪರ್ವತದ ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಸ್ಥಳಾಂತರಗೊಳಿಸಲಾಗಿದ್ದರೂ ಮಂಗಳವಾರ ಸಂಭವಿಸಿದ ಹಲವು ಅಲ್ಪ ಪ್ರಮಾಣದ ಭೂಕಂಪನಗಳು ನೂರಾರು ಎಕರೆ ಭೂಮಿ ಹಾಗೂ ಆಸ್ತಿಪಾಸ್ತಿಗಳನ್ನು ನಾಶ ಮಾಡಿವೆ. ಸ್ವಿಮ್ಮಿಂಗ್ ಪೂಲ್‌ನೊಳಕ್ಕೆ ಲಾವಾ ನುಗ್ಗುತ್ತಿದ್ದಂತೆ, ವಿಷಕಾರಿ ಅನಿಲವು ವಾತಾವರಣವನ್ನು ಸೇರಿಕೊಳ್ಳುವ ದೃಶ್ಯಗಳು ವೀಡಿಯೋಗಳಲ್ಲಿ ಸೆರೆಯಾಗಿವೆ.
9 ಸಾವಿರ ಟನ್ ಸಲ್ಫರ್ ಡಯಾಕ್ಸೈಡ್: ಸಾವಿರಾರು ಅಲ್ಪ ತೀವ್ರತೆಯ ಕಂಪನಗಳ ಬಳಿಕ ಕಳೆದ ರವಿವಾರ ಏಕಾಏಕಿ ಅಗ್ನಿಪರ್ವತ ಸ್ಫೋಟಗೊಂಡಿತ್ತು. ಮಂಗಳವಾರದ ವೇಳೆಗೆ ಅದು 106 ಹೆಕ್ಟೇರ್ (260 ಎಕ್ರೆ) ಭೂಮಿಯನ್ನು ವ್ಯಾಪಿಸಿದ್ದು, 166 ಮನೆಗಳು-ಕಟ್ಟಡಗಳು ಸುಟ್ಟು ಕರಕಲಾಗಿವೆ. ಪರ್ವತವು ಉಗುಳಿರುವ ಲಾವಾವು ಸುಮಾರು 20 ಅಡಿ ಎತ್ತರದ ಅಲೆಗಳಾಗಿ, ಪರ್ವತ ಶ್ರೇಣಿಗಳಿಂದ ಇಳಿದು ಬರುತ್ತಿದ್ದು, ತನ್ನ ಹಾದಿಯಲ್ಲಿ ಸಿಕ್ಕೆಲ್ಲವನ್ನೂ ಬೂದಿ ಮಾಡುತ್ತಿದೆ. ಈ ಜ್ವಾಲಾಮುಖೀಯು ದಿನಕ್ಕೆ 6 ಸಾವಿರದಿಂದ 9 ಸಾವಿರ ಟನ್‌ಗಳಷ್ಟು ಸಲ್ಫರ್ ಡೈ ಆಕ್ಸೈಡ್ ಅನ್ನು ಹೊರಸೂಸುತ್ತಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.