ಕೋವಿಡ್ 19 ಸೋಂಕು ಕೊಲ್ಲದಿದ್ರೂ “ತಾಪಮಾನ’ ಕೊಲ್ಲುತ್ತೆ: ವಿಶ್ವಸಂಸ್ಥೆ ಸದಸ್ಯ ರಾಷ್ಟ್ರ
ಕೋವಿಡ್ ನಿಂದ ತತ್ತರಿಸಿರುವ 150 ರಾಷ್ಟ್ರಗಳಿಗೆ ಕೋವಿಡ್ ಲಸಿಕೆ ನೀಡುವಲ್ಲಿ ಭಾರತ ಶಕ್ತವಾಗಿದೆ.
Team Udayavani, Sep 28, 2020, 11:57 AM IST
ಜೊಹಾನ್ಸ್‌ಬರ್ಗ್: ಇಡೀ ಜಗತ್ತನ್ನು ಅಲ್ಲೋಲ ಕಲ್ಲೋಲಗೊಳಿಸಿರುವ ಕೋವಿಡ್ ನಮ್ಮನ್ನು ಕೊಲ್ಲದಿದ್ದರೂ , ಜಾಗತಿಕ ತಾಪಮಾನದ ದುಷ್ಪರಿಣಾಮಗಳು ನಮ್ಮನ್ನು ಖಂಡಿತವಾಗಿಯೂ ಕೊಲ್ಲುತ್ತವೆ ಎಂದು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ತೀವ್ರಕಳವಳ ವ್ಯಕ್ತಪಡಿಸಿವೆ.
ವಿಶ್ವಸಂಸ್ಥೆಯ ಐತಿಹಾಸಿಕ 75ನೇ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಫಿಜಿ ಪ್ರಧಾನಿ ಫ್ರಾಂಕ್ ಬೈನಿಮರಮ, “ಪಶ್ಚಿಮ ಅಂಟಾರ್ಟಿಕದಲ್ಲಿ ಸಮುದ್ರ ಮಟ್ಟ ಈಗಾಗಲೇ 16 ಅಡಿ ಹೆಚ್ಚಾಗಿದೆ. ಸೈಬೀರಿಯಾಸೇರಿದಂತೆಕೆಲವು ರಾಷ್ಟ್ರಗಳ ಸಣ್ಣ ಸಣ್ಣ ದ್ವೀಪಗಳು ಮುಳುಗಡೆಯಾಗಿವೆ. ಜಗತ್ತಿನ ಲಕ್ಷ್ಯ ಇಂದು ಕೋವಿಡ್ ಕಡೆಗೆ ತಿರುಗಿದ್ದು, ಜಾಗತಿಕ ತಾಪಮಾನ ಸಮಸ್ಯೆ ಹಾಗೆಯೇ ಮುಂದುವರಿದಿದೆ.
ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ 75 ವರ್ಷಗಳಲ್ಲಿ ವಿಶ್ವಸಂಸ್ಥೆಯಲ್ಲಿ ಈಗಿರುವ ಅನೇಕ ರಾಷ್ಟ್ರಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಲಿವೆ” ಎಂದಿದ್ದಾರೆ. ಇನ್ನೂ ಅನೇಕ ವಿಶ್ವನಾಯಕರು ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮೋದಿ ದಿಟ್ಟತನಕ್ಕೆ ಮೆಚ್ಚುಗೆ
ಕೋವಿಡ್ ವಿಚಾರದಲ್ಲಾಗಲೀ, ಭಯೋತ್ಪಾದನೆ ನಿಗ್ರಹದಲ್ಲಾಗಲೀ ವಿಶ್ವಸಂಸ್ಥೆ ಏನು ಮಾಡಿದೆ ಎಂದು ನೇರವಾಗಿ ಪ್ರಶ್ನೆ ಮಾಡಿರುವ ಪ್ರಧಾನಿ ಮೋದಿಯವರ
ನಡೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್ ಅಧೊನೊಮ್ ಘೆಬ್ರಯೆಸಸ್ ಮೆಚ್ಚಿಕೊಂಡಿದ್ದಾರೆ. ಶನಿವಾರ ಮಾತನಾಡಿದ್ದ ಮೋದಿ, “”ಲಸಿಕೆ ತಯಾರಿಕೆಯಲ್ಲಿ ಭಾರತ ಮುಂದಿದೆ.
ಕೋವಿಡ್ ನಿಂದ ತತ್ತರಿಸಿರುವ 150 ರಾಷ್ಟ್ರಗಳಿಗೆ ಕೋವಿಡ್ ಲಸಿಕೆ ನೀಡುವಲ್ಲಿ ಭಾರತ ಶಕ್ತವಾಗಿದೆ. ಆದರೆ, ಈ ಸಹಾಯವು ಕೇವಲ ಜಾಗತಿಕ ಮನುಕುಲದ ನೆರವಾಗಿಯೇ ವಿನಾ ಯಾವುದೇ ದೇಶದ ವಿರುದ್ಧ ಸ್ಪರ್ಧೆಗಾಗಿ ಅಲ್ಲ” ಎಂದಿದ್ದರು. ಈಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಘೆಬ್ರೆಯೇಸಸ್, “ಕೋವಿಡ್ ಅನ್ನು ಒಗ್ಗಟ್ಟಿ ನಿಂದ ಎದುರಿಸಲು ಸ್ಫೂರ್ತಿಯಾಗುವಂಥ ಸಂದೇಶ ನೀಡಿದ್ದಕ್ಕೆ ಮೋದಿಯವರಿಗೆ ಧನ್ಯವಾದ’ ಎಂದು ಹೇಳಿದ್ದಾರೆ.
ಜಾಗತಿಕ ಸಮುದಾಯಕ್ಕೆ ಮೋದಿಯವರು ನೀಡಿರುವ ಭರವಸೆ ಭಾರತೀಯರಿಗೆ ಹೆಮ್ಮೆ ತರಿಸಿದೆ. ಲಸಿಕೆ ಬಗ್ಗೆ ಅವರು ಹೊಂದಿರುವ ಕಾಳಜಿಯೇ ಭಾರತೀಯರನ್ನು ಕೋವಿಡ್ ನಿಂದ ನಿಗ್ರಹ ಪಡೆಯಲು ಸಹಾಯಕವಾಗಲಿದೆ.
● ಅಡರ್ ಪೂನಾವಾಲಾ, ಸೇರಮ್ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.