ಹಿಮನದಿಯಲ್ಲಿ ನಿಶ್ಚಲವಾಗಿದ್ದ ಕೀಟಕ್ಕೆ ಜೀವದಾನ!

-ವಿಚಿತ್ರ ಅವಸ್ಥೆಯಲ್ಲಿ 46 ಸಾವಿರ ವರ್ಷಗಳಿಂದಲೂ ಹೆಪ್ಪುಗಟ್ಟಿದ್ದ ಹುಳಗಳು: ರಷ್ಯಾ ವಿಜ್ಞಾನಿಗಳಿಂದ ಪತ್ತೆ

Team Udayavani, Jul 30, 2023, 7:04 AM IST

inse

ವಾಷಿಂಗ್ಟನ್‌: ಬರೋಬ್ಬರಿ 46 ಸಾವಿರ ವರ್ಷಗಳಿಂದಲೂ ಸೈಬೀರಿಯದ ಶಾಶ್ವತ ಹಿಮನದಿಯಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿದ್ದ ಹುಳವೊಂದಕ್ಕೆ ಈಗ ರಷ್ಯಾದ ವಿಜ್ಞಾನಿಗಳು ಜೀವ ನೀಡಿದ್ದಾರೆ! ರಷ್ಯಾದ ಇನ್‌ಸ್ಟಿಟ್ಯೂಟ್‌ ಆಫ್ ಫಿಸಿಯೋಕೆಮಿಕಲ್‌ ಆ್ಯಂಡ್‌ ಬಯಾಲಜಿಕಲ್‌ ಪ್ರಾಬ್ಲಿಮ್ಸ್‌ ಇನ್‌ ಸಾಯಿಲ್‌ನ ವಿಜ್ಞಾನಿಗಳು 2018ರಲ್ಲಿ ಹಿಮನದಿಯಲ್ಲಿದ್ದ ಅಪರಿಚಿತ ಪ್ರಭೇದಗಳಿಗೆ ಸೇರಿದ ತೆಳ್ಳಗಿನ ಉರುಳೆಯಾಕಾರದ ಎರಡು ಕೀಟಗಳನ್ನು (ನೆಮಟೋಡ್‌) ಪತ್ತೆಹಚ್ಚಿದ್ದರು. ವಿಜ್ಞಾನಿ ಅನಸ್ತೇಸಿಯಾ ಶಟಿಲೋವಿಚ್‌ ಅವರು ಈ ಪೈಕಿ ಒಂದಕ್ಕೆ ಮರುಜೀವ ನೀಡಿದ್ದಾರೆ. ನಂತರ ಅದನ್ನು ಹೆಚ್ಚಿನ ಅಧ್ಯಯನಕ್ಕಾಗಿ ಜರ್ಮನಿಗೆ ಒಯ್ದಿದ್ದಾರೆ.

ಹಿಮನದಿಯ ಸುತ್ತಮುತ್ತಲಿನ ಸಸ್ಯಗಳ ರೇಡಿಯೋಕಾರ್ಬನ್‌ ಡೇಟಿಂಗ್‌ ನಡೆಸುವ ಮೂಲಕ ವಿಜ್ಞಾನಿಗಳು, ಅಲ್ಲಿ ಕಂಡುಬಂದಿರುವ ಕೀಟಗಳು ಸುಮಾರು 45,839ರಿಂದ 47,769 ವರ್ಷಗಳಷ್ಟು ಹಳೆಯವು ಎಂದು ಅಂದಾಜಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಆ ಹುಳಗಳು ಬದುಕುಳಿದಿದ್ದಾದರೂ ಹೇಗೆ ಎಂಬ ಪ್ರಶ್ನೆಗೂ ಅವರು ಉತ್ತರಿಸಿದ್ದಾರೆ. ಈ ಹುಳಗಳು ಇಷ್ಟು ವರ್ಷ ನಿಶ್ಚಲ ಸ್ಥಿತಿಯಲ್ಲೇ ಇದ್ದವು. ಈ ಸ್ಥಿತಿಯನ್ನು ಕ್ರಿಪ್ಟೋಬಯಾಸಿಸ್‌ ಎನ್ನುತ್ತಾರೆ. ಕ್ರಿಪ್ಟೋಬಯಾಸಿಸ್‌ ಎಂದರೆ ಚಯಾಪಚಯ ಚಟುವಟಿಕೆಯು ಸಂಪೂರ್ಣವಾಗಿ ಕಣ್ಮರೆಯಾಗದೇ ಪತ್ತೆಹಚ್ಚಲಾಗದ ಮಟ್ಟಕ್ಕೆ ಕಡಿಮೆಯಾಗಿರುವಂಥ ಒಂದು ಶಾರೀರಿಕ ಸ್ಥಿತಿ. ವಿಪರೀತ ಶುಷ್ಕ ವಾತಾವರಣವಿದ್ದಾಗ ಕೆಲವೊಂದು ಪ್ರಾಣಿ ಅಥವಾ ಸಸ್ಯಗಳು ಬದುಕಲು ಇಂಥದ್ದೊಂದು ಸ್ಥಿತಿಗೆ ಹೊಂದಿಕೊಂಡಿರುತ್ತವೆ.

ಒಟ್ಟಿನಲ್ಲಿ ಈ ಕೀಟಗಳ ಮೇಲೆ ನಡೆದ ಸಂಶೋಧನೆಯು “ಒಂದು ಜೀವಿಯು ತನ್ನ ಬದುಕನ್ನು ಸ್ಥಗಿತಗೊಳಿಸಿ, ಮತ್ತೆ ಮೊದಲಿನಿಂದ ಅದನ್ನು ಪ್ರಾರಂಭಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ’ ಎಂದಿದ್ದಾರೆ ವಿಜ್ಞಾನಿಗಳು. ವಿಪರೀತ ಎನ್ನುವಂಥ ಸ್ಥಿತಿಗೂ ಜೀವಿಗಳು ಒಗ್ಗಿಕೊಳ್ಳುತ್ತವೆ ಎನ್ನುವುದು ಈ ಕೀಟಗಳ ಸಂಶೋಧನೆಯಿಂದ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಇತರೆ ಜೀವಿಗಳು ಅಥವಾ ಮನುಷ್ಯರಿಗೂ ಇದು ನೆರವಾಗಬಲ್ಲದು ಎಂದೂ ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.