ಲಾಕ್‌ಡೌನ್ ಎಫೆಕ್ಟ್; ಭಾರತದಲ್ಲಿ 2 ಕೋಟಿ ಮಕ್ಕಳ ಜನನ ನಿರೀಕ್ಷೆ
ದಿಢೀರ್ ಜನಸಂಖ್ಯಾ ಸ್ಫೋಟದ ಮಾಹಿತಿ ನೀಡಿದ ಯುನಿಸೆಫ್; ನಂತರ ಸ್ಥಾನದಲ್ಲಿ ಚೀನ, ನೈಜೀರಿಯಾ, ಪಾಕಿಸ್ಥಾನ
Team Udayavani, May 8, 2020, 10:28 AM IST
ಸಾಂದರ್ಭಿಕ ಚಿತ್ರ
ವಿಶ್ವಸಂಸ್ಥೆ: ಕೋವಿಡ್ ಲಾಕ್‌ಡೌನ್ ಪರಿಣಾಮ, ಭಾರತದಲ್ಲಿ ಈ ವರ್ಷ 2 ಕೋಟಿಗೂ ಅಧಿಕ ಮಕ್ಕಳು ಜನ್ಮತಾಳುವ ನಿರೀಕ್ಷೆಯಿದೆ. ಇದು ವಿಶ್ವದಲ್ಲೇ ದಾಖಲೆಯ ಜನಸಂಖ್ಯಾ ಸ್ಫೋಟವಾಗಿದ್ದು, ಅನಂತರದ ಸ್ಥಾನದಲ್ಲಿ ಚೀನಾ ಇದೆ. ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನಿಸೆಫ್, ದಿಢೀರ್ ಜನಸಂಖ್ಯಾ ಸ್ಫೋಟದ ಆಘಾ ತಕಾರಿ ವರದಿಯನ್ನು ಹೊರಹಾಕಿದೆ. ಮಾರ್ಚ್- ಡಿಸೆಂಬರ್ ನಡುವೆ ಈ ಮಕ್ಕಳು ಜನಿಸಲಿದ್ದಾರೆ. ವಿಶ್ವದಲ್ಲಿ ಒಟ್ಟಾರೆ 11.6 ಕೋಟಿ ಮಕ್ಕಳು, ಕೋವಿಡ್ ದ ಕರಿನೆರಳಿನ ನಡುವೆ ಜನ್ಮ ತಾಳಲಿದ್ದಾರೆ ಎಂದು ವರದಿ ಹೇಳಿದೆ.
ಭಾರತದ ನಂತರ ಸ್ಥಾನದಲ್ಲಿರುವ ಚೀನದಲ್ಲಿ 1.35 ಕೋಟಿ ಮಕ್ಕಳು ಜನಿಸಲಿದ್ದಾರೆ. ನೈಜೀರಿಯಾ (64 ಲಕ್ಷ), ಪಾಕಿ ಸ್ಥಾನ (50 ಲಕ್ಷ), ಇಂಡೋನೇಷ್ಯಾ (40 ಲಕ್ಷ) ದೇಶಗಳು ನಂತರದ ಸ್ಥಾನದಲ್ಲಿವೆ.
ಭಾರತಕ್ಕೆ ಎಚ್ಚರಿಕೆ: ಕೋವಿಡ್ ದ ತುರ್ತು ಸೇವೆಗಳೇ ಅಧಿಕವಿರುವ ಈ ದಿನಗಳಲ್ಲಿ, ಹೆರಿಗೆ ಪ್ರಕರಣಗಳನ್ನು ನಿಭಾಯಿಸುವುದು ಭಾರತದ ಆಸ್ಪತ್ರೆಗಳಿಗೆ ದೊಡ್ಡ ಸವಾಲಾಗಲಿದೆ. ಹೆಚ್ಚಿನ ಶಿಶುಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಎಂದು ಯುನಿಸೆಫ್ ಎಚ್ಚರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.