ಸಮರ ದಾಹಕ್ಕೆ ತಾರ್ಕಿಕ ಅಂತ್ಯ?
Team Udayavani, Jun 13, 2018, 11:47 AM IST
ಸಿಂಗಾಪುರ: ಮಂಗಳವಾರ ಸಿಂಗಾಪುರದಲ್ಲಿ ನಡೆದ ಉತ್ತರ ಕೊರಿಯಾ- ಅಮೆರಿಕ ಐತಿಹಾಸಿಕ ಮಾತುಕತೆಯಲ್ಲಿ ಕಿಮ್ ಅವರ ಬಹುದೊಡ್ಡ ಬೇಡಿಕೆಯೂ ಈಡೇರಿದೆ. ಅದೇ ನೆಂದರೆ, ದಕ್ಷಿಣ ಕೊರಿಯಾ ಜತೆ ಅಮೆರಿಕ ನಡೆಸುತ್ತಿರುವ ಸಮರಾಭ್ಯಾಸಕ್ಕೆ ಕೊನೆ ಹಾಡು ವುದು. ಮಾತುಕತೆ ವೇಳೆ, ದಕ್ಷಿಣ ಕೊರಿಯಾ ಜತೆಗೆ ನಾವು ನಡೆಸುತ್ತಿರುವ ಸೇನಾಭ್ಯಾಸವನ್ನು ನಿಲ್ಲಿಸುತ್ತೇವೆ ಎಂದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದಾರೆ.
ಇದು ಅತ್ಯಂತ ಉತ್ತೇಜನಾತ್ಮಕ ಕ್ರಮ ವಾಗಿದ್ದು, ಖಂಡಿತವಾಗಿಯೂ ಸಮರಾ ಭ್ಯಾಸ ಸ್ಥಗಿತಗೊಳಿಸುತ್ತೇವೆ. ಇದರಿಂದ ನಮಗೆ ಬಹಳಷ್ಟು ಹಣವೂ ಉಳಿತಾಯ ವಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಮತ್ತು ಕಿಮ್ ಅವರ ಮಾತುಕತೆ ಪ್ರಧಾನವಾಗಿ, ಉತ್ತರ ಕೊರಿಯಾದ ಅಣ್ವಸ್ತ್ರ ನಿಶ್ಯಸ್ತ್ರೀಕರಣ, ದಿಗ್ಬಂಧನ, ದಕ್ಷಿಣ ಕೊರಿಯಾ ಜತೆಗಿನ ಅಮೆರಿಕದ ಸಮರಾಭ್ಯಾಸದ ಮೇಲೆಯೇ ನಿಂತಿತ್ತು. ಉಭಯ ನಾಯಕರು ಸುಮಾರು 45 ನಿಮಿಷಗಳ ಕಾಲ ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ವಿಶೇಷವೆಂದರೆ, ಈ ಸಂದರ್ಭದಲ್ಲಿ ಇಬ್ಬರು ಅನುವಾದಕರನ್ನು ಬಿಟ್ಟರೆ ಬೇರಾರಿಗೂ ಪ್ರವೇಶವಿರಲಿಲ್ಲ. ಹೀಗಾಗಿ ಮಾತುಕತೆ ವೇಳೆ ಏನಾಯ್ತು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಆದರೆ, ಇದಾದ ಬಳಿಕ ಈ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಇಬ್ಬರೂ ಸಿಂಗಾಪುರ ಒಪ್ಪಂದ ಕುರಿತ ಜಂಟಿ ಹೇಳಿಕೆಯನ್ನೂ ಹೊರಡಿಸಿದರು.
ಅಡೆತಡೆ ಮೀರಿದ್ದೇವೆ: ಎಲ್ಲಾ ಅಡೆತಡೆ ಗಳನ್ನು ಮೀರಿ ಸಿಂಗಾಪುರದಲ್ಲಿ ನಾವಿಂದು ಸೇರಿದ್ದೇವೆ ಎಂಬುದು ಕಿಮ್ ಅವರ ಮಾತಾಗಿತ್ತು. ಜಂಟಿ ಪತ್ರಿಕಾಗೋಷ್ಠಿಯಲ್ಲಿ ನೆರೆದಿದ್ದ ಇಡೀ ಜಗತ್ತಿನ ನಾನಾ ಕಡೆಗಳಿಂದ ಬಂದಿದ್ದ ಪತ್ರಕರ್ತರು ಮೂರು ಬಾರಿ ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಕೇವಲ ನಗುಮೊಗದ ಉತ್ತರ ಕೊಟ್ಟ ಕಿಮ್, ನಮ್ಮ ಮುಂದೆ ಹಲವು ಸವಾಲುಗಳಿವೆ. ನಾವು ಟ್ರಂಪ್ ಜತೆಗೆ ಚರ್ಚಿಸಿ ನಿರ್ಧರಿಸುತ್ತೇವೆ. ಹಲವಾರು ಅಡೆತಡೆಗಳನ್ನು ಮೀರಿ ಇಂದು ಇಲ್ಲಿ ಸೇರಿದ್ದು, ಇವೆಲ್ಲವೂ ಶಾಂತಿಗಾಗಿ ಉತ್ತಮ ಕ್ರಮಗಳು ಎಂದರು.
ಕಾರು ತೋರಿಸಿದ ಟ್ರಂಪ್: ಮಾತುಕತೆ ನಡೆಸಿದ ಇವರಿಬ್ಬರ ನಡುವಿನ ಸ್ನೇಹ ಚೆನ್ನಾ ಗಿಯೇ ಇತ್ತು. ಕಿಮ್‌ರನ್ನು ಹೊಟೇಲ್‌ನಿಂದ ಹೊರಗೆ ಕರೆದುಕೊಂಡು ಹೋದ ಟ್ರಂಪ್, ತಮ್ಮ ದಿ ಬೀಸ್ಟ್ ಕಾರನ್ನು ತೋರಿಸಿದರು. ಅದರೊಳಗಿನ ವ್ಯವಸ್ಥೆ ಬಗ್ಗೆ ಪರಿಚಯಿಸಿದ್ದೂ ಅಲ್ಲದೇ, ಇದು ತಮ್ಮ ಏರ್‌ಫೋರ್ಸ್ ಒನ್ ವಿಮಾನದ ಹೊಟ್ಟೆಯಲ್ಲಿರುತ್ತದೆ ಎಂದರು.
ಸೆನ್ಸೆಕ್ಸ್ ಏರಿಕೆ: ಟ್ರಂಪ್-ಕಿಮ್ ಭೇಟಿ ಷೇರುಪೇಟೆಯಲ್ಲೂ ಸಂಚಲನ ಮೂಡಿಸಿದೆ. ಎರಡೂ ರಾಷ್ಟ್ರಗಳ ನಡುವಿನ ಮಾತುಕತೆ ಫಲಪ್ರದವಾಗುತ್ತಿದ್ದಂತೆ, ವಿಶ್ವಾದ್ಯಂತದ ಷೇರು ಮಾರುಕಟ್ಟೆಗಳು ಚೇತರಿಸಿವೆ. ಮುಂಬಯಿ ಯಲ್ಲೂ ಹೂಡಿಕೆದಾರರು ಷೇರು ಖರೀದಿ ಯಲ್ಲಿ ಆಸಕ್ತಿ ವಹಿಸಿದ ಕಾರಣ, ಸೆನ್ಸೆಕ್ಸ್ 209 ಅಂಕ ಏರಿಕೆಯಾಗಿ, 35,692ರಲ್ಲಿ ಕೊನೆ ಗೊಂಡಿತು. ನಿಫ್ಟಿ 55 ಅಂಕ ಏರಿಕೆಯಾಗಿ, ದಿನಾಂತ್ಯಕ್ಕೆ 10,842ಕ್ಕೆ ವಹಿವಾಟು ಅಂತ್ಯಗೊಳಿಸಿತು.
*
ಜಾಗತಿಕ ಮಟ್ಟದಲ್ಲಿ ಸ್ವಾಗತ
ಟ್ರಂಪ್ ಮತ್ತು ಕಿಮ್ ಭೇಟಿಯನ್ನು ಭಾರತ, ವಿಶ್ವಸಂಸ್ಥೆ, ಚೀನ, ಐರೋಪ್ಯ ಒಕ್ಕೂಟ, ದಕ್ಷಿಣ ಕೊರಿಯಾ ಸಹಿತ ಜಗತ್ತಿನ ನಾನಾ ದೇಶಗಳು ಸ್ವಾಗತಿಸಿವೆ. ಇದೊಂದು ಪ್ರಮುಖ ಮೈಲುಗಲ್ಲು ಎಂದು ವಿಶ್ವಸಂಸ್ಥೆ ಹೇಳಿದರೆ, ಉತ್ತರ ಕೊರಿಯಾ ಮೇಲಿನ ದಿಗ್ಬಂಧನ ಸಡಿಲಿಸುವಂತೆ ಚೀನ ಅಮೆರಿಕವನ್ನು ಆಗ್ರಹಿಸಿದೆ. ಸಿಂಗಾಪುರ ಒಪ್ಪಂದದಿಂದಾಗಿ ಅಮೆರಿಕ-ಉತ್ತರ ಕೊರಿಯಾ ನಡುವಿನ ಶೀತಲ ಸಮರ ಕೊನೆಯಾಗಲಿದೆ ಎಂದು ದಕ್ಷಿಣ ಕೊರಿಯಾ ಆಶಿಸಿದೆ. ಅಲ್ಲದೆ ಅಧ್ಯಕ್ಷ ಮೂನ್ ಅವರು ಮಾತನಾಡಿ ಇಬ್ಬರೂ ನಾಯಕರಿಗೆ ನನ್ನ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಒಟ್ಟಿಗೇ ಭೋಜನ
ಮಧ್ಯಾಹ್ನ ಇಬ್ಬರೂ ಒಟ್ಟಿಗೇ ಊಟ ಸವಿದರು. ಇವರ ಊಟದಲ್ಲಿ ಪಾಶ್ಚಾತ್ಯ, ಏಷ್ಯಾದ ಖಾದ್ಯಗಳು ಇದ್ದವು. ಅದರಲ್ಲೂ ಕೊರಿಯಾ ಮೂಲದ ಸೌತೆಕಾಯಿ ವಿಶೇಷ ಮತ್ತು ಬೀಫ್ನಿಂದ ಮಾಡಿದ ಆಹಾರಗಳಿದ್ದವು.
ಭಾರತೀಯನ ಸಾಹಸ
ಅಮೆರಿಕ ಅಧ್ಯಕ್ಷ ಟ್ರಂಪ್ ಉಳಿದಿದ್ದ ಶಾಂ Å-ಲಾದಲ್ಲಿ ಉಳಿಯುವ ಸಲುವಾಗಿ ಭಾರತೀಯ ಮೂಲದ ವ್ಯಕ್ತಿಯೊಬ್ಬ 38,000 ರೂ. ವೆಚ್ಚ ಮಾಡಿದ್ದಾನೆ. ಮಲೇಷ್ಯಾದ ನಿವಾಸಿಯಾಗಿರುವ ಮಹಾರಾಜ್ ಮೋಹನ್ ಎಂಬಾತ ಒಂದು ರಾತ್ರಿಗಾಗಿ 38 ಸಾವಿರ ರೂ. ಬಾಡಿಗೆ ಕೊಟ್ಟು ಉಳಿದಿದ್ದಾನೆ. ಜತೆಗೆ ಹೊಟೇಲ್‌ನ ಆವರಣದಲ್ಲಿ ಓಡಾಡಿ ಟ್ರಂಪ್‌ರನ್ನು ಹತ್ತಿರದಿಂದ ನೋಡಲು ಯತ್ನಿಸಿದ್ದಾನೆ. ಆದರೆ, ಟ್ರಂಪ್ ಅವರು ಕಿಮ್ ಜತೆಗಿನ ಭೇಟಿಗಾಗಿ ಹೊಟೇಲ್‌ನಿಂದ ಹೊರಡುವ ವೇಳೆ ಮೋಹನ್‌ನ ಕಣ್ಣಿಗೆ ಬಿದ್ದರು.
ಯಾವಾಗ ಏನೇನಾಯ್ತು?
ಜ.1,2018: ದಕ್ಷಿಣ ಕೊರಿಯಾ ಜತೆ ಉತ್ತಮ ಸಂಬಂಧ ಹೊಂದುವ ಬಗ್ಗೆ ಕಿಮ್‌ರಿಂದ ಹೊಸ ವರ್ಷದ ಭಾಷಣ
ಜ.9,2018: ದಕ್ಷಿಣ ಮತ್ತು ಉತ್ತರ ಕೊರಿಯಾದ ಅಧಿಕಾರಿಗಳಿಂದ ಗಡಿಯಲ್ಲಿ ಭೇಟಿ. ಚಳಿಗಾಲದ ಒಲಿಂಪಿಕ್ಸ್‌ಗೆ ಜಂಟಿಯಾಗಿ ಕ್ರೀಡಾಳು ಕಳುಹಿಸಲು ಒಪ್ಪಿಗೆ
ಎ.21,2018: ಅಣು ಪರೀಕ್ಷೆ ನಡೆಸುವ ಪ್ರದೇಶವನ್ನು ಮುಚ್ಚುವ ಮತ್ತು ಸಂಪೂರ್ಣ ನಾಶ ಪಡಿಸುವ ಬಗ್ಗೆ ಉತ್ತರ ಕೊರಿಯಾ ಮಾತು.
ಎ.27,2018: ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇನ್ ಜತೆ ಕಿಮ್ ಮಾತುಕತೆ. ಶಾಶ್ವತ ಶಾಂತಿ ಮತ್ತು ನಿಶ್ಯಸ್ತ್ರೀಕರಣದ ಬಗ್ಗೆ ಚರ್ಚೆ.
ಮೇ 10, 2018: ಜೂ.12 ರಂದು ಸಿಂಗಾಪುರದಲ್ಲಿ ಕಿಮ್ ಭೇಟಿಯಾಗುವುದಾಗಿ ಟ್ರಂಪ್ ಘೋಷಣೆ
ಮೇ 22,2018: ವೈಟ್‌ಹೌಸ್‌ನಲ್ಲಿ ಟ್ರಂಪ್ ಭೇಟಿ ಮಾಡಿದ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್. ಕಿಮ್ ಭೇಟಿ ಬಗ್ಗೆ ಮಾತುಕತೆ
ಮೇ 24, 2018: ವಿದೇಶಿ ಪತ್ರಕರ್ತರ ಸಮ್ಮುಖದಲ್ಲಿಯೇ ಅಣು ಪರೀಕ್ಷೆ ಪ್ರದೇಶ ನಾಶ ಮಾಡಿದ ಉತ್ತರ ಕೊರಿಯಾ. ಆದರೆ, ಶೃಂಗಸಭೆ ರದ್ದುಗೊಳಿಸುವ ಬೆದರಿಕೆಯೊಡ್ಡಿದ ಟ್ರಂಪ್
ಮೇ 25, 2018: ಅಮೆರಿಕದ ಜತೆ ಮಾತುಕತೆ ನಡೆಸುವ ಉದ್ದೇಶ ಹೊಂದಿರುವುದಾಗಿ ಪ್ರಕಟಿಸಿದ ಉತ್ತರ ಕೊರಿಯಾ.
ಮೇ 26, 2018: ದಕ್ಷಿಣ ಕೊರಿಯಾದಲ್ಲಿರುವ ಗಡಿಭಾಗದ ಗ್ರಾಮವೊಂದರಲ್ಲಿ ಕಿಮ್ ಮತ್ತು ಮೂನ್ ಭೇಟಿ, ಮಾತುಕತೆ.
ಮೇ 30, 2018: 18 ವರ್ಷಗಳ ಬಳಿಕ ಅಮೆರಿಕ ಪ್ರವೇಶಿಸಿದ ಉತ್ತರ ಕೊರಿಯಾ ಪ್ರತಿನಿಧಿಗಳು. ಶ್ವೇತಭವನಕ್ಕೆ ತೆರಳಿ ಟ್ರಂಪ್ ಜತೆ ಮಾತುಕತೆ.
ಜೂ. 1, 2018: ಉತ್ತರ ಕೊರಿಯಾ ಪ್ರತಿನಿಧಿ ಜತೆ ಮಾತುಕತೆ ಬಳಿಕ ಜೂ. 12ರಂದು ಕಿಮ್ ಭೇಟಿಯಾಗುವುದಾಗಿ ಟ್ರಂಪ್ ಘೋಷಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.